ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ಎ. ಹ್ಯಾರಿಸ್ (56) ಸೋಮವಾರ ನಾಮಪತ್ರ ಸಲ್ಲಿಸಿದ್ದು, ₹ 439 ಕೋಟಿ ಆಸ್ತಿ ಘೋಷಿಸಿದ್ದಾರೆ.

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹ್ಯಾರಿಸ್ ₹ 190.24 ಕೋಟಿ ಆಸ್ತಿ ಘೋಷಿಸಿದ್ದರು. ಶಾಸಕರಾಗಿ ಗೆದ್ದ ನಂತರ ಐದು ವರ್ಷಗಳಲ್ಲಿ ಅವರ ಆಸ್ತಿ ₹ 248.76 ಕೋಟಿಯಷ್ಟು ಹೆಚ್ಚಳವಾಗಿದೆ.

ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಎಂ.ಎ ವ್ಯಾಸಂಗ ಮಾಡಿರುವ ಹ್ಯಾರಿಸ್, ನಲಪಾಡ್ ಗ್ರೂಪ್ ಆಫ್ ಕಂಪನಿ ವ್ಯವಸ್ಥಾಪಕ ನಿರ್ದೇಶಕರೆಂದು ಹೇಳಿಕೊಂಡಿದ್ದಾರೆ.

2017–18ರಲ್ಲಿ ₹ 7.40 ಕೋಟಿ ವಾರ್ಷಿಕ ಆದಾದ ಘೋಷಿಸಿದ್ದ ಹ್ಯಾರಿಸ್, 2021–22ರಲ್ಲಿ ₹ 6.48 ಕೋಟಿ ವಾರ್ಷಿಕ ಆದಾಯಕ್ಕೆ ಲೆಕ್ಕ ನೀಡಿದ್ದಾರೆ.

ಹ್ಯಾರಿಸ್ ಹೆಸರಿನಲ್ಲಿ ₹ 167.10 ಕೋಟಿ ಚರಾಸ್ತಿ ಹಾಗೂ ₹ 41.82 ಕೋಟಿ ಸ್ಥಿರಾಸ್ತಿ ಇದೆ. ಜೊತೆಗೆ, ₹ 28.29 ಕೋಟಿ ಸಾಲವಿದೆ. ಪತ್ನಿ ತಾಹೀರಾ ಹ್ಯಾರಿಸ್ ಹೆಸರಿನಲ್ಲಿ ₹ 8.27 ಲಕ್ಷ ಚರಾಸ್ತಿ ಹಾಗೂ ₹ 41.82 ಕೋಟಿ ಸ್ಥಿರಾಸ್ತಿ ಇದೆ. ಇಬ್ಬರ ಬಳಿಯೂ ಸ್ವಂತ ಕಾರಿಲ್ಲ.

ಅಕ್ರಮ ಗುಂಪು ಕಟ್ಟಿಕೊಂಡು ಪ್ರತಿಭಟನೆ ನಡೆಸಿ ಸಾರ್ವಜನಿಕರ ಆಸ್ತಿಗೆ ಹಾನಿ ಮಾಡಿದ್ದ ಆರೋಪದಡಿ ಸಿದ್ದಾಪುರ ಠಾಣೆಯಲ್ಲಿ ಹ್ಯಾರಿಸ್ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.