ಬೆಂಗಳೂರು: ಮಳೆ ಪ್ರಮಾಣವು ಸೋಮವಾರದಿಂದ ಕಡಿಮೆಗೊಳ್ಳಲಿದೆ. ಸತತವಾಗಿ ‘ರೆಡ್ ಅಲರ್ಟ್’ನಲ್ಲಿದ್ದ ಕರಾವಳಿಯ ಜಿಲ್ಲೆಗಳು ‘ಯೆಲ್ಲೊ ಅಲರ್ಟ್’ಗೆ ಬರಲಿವೆ. ರೆಡ್ ಅಲರ್ಟ್ನಲ್ಲಿದ್ದ ಮಲೆನಾಡಿನ ಜಿಲ್ಲೆಗಳು ಸಾಮಾನ್ಯ ಸ್ಥಿತಿಗೆ ಬರಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ. 30ರಿಂದ 40 ಕಿ.ಮೀ ವೇಗದಲ್ಲಿ ಈ ಜಿಲ್ಲೆಗಳಲ್ಲಿ ಗಾಳಿ ಬೀಸಲಿದೆ. ರಾಜ್ಯದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್ (12 ಸೆಂ.ಮೀ), ಉಡುಪಿ ಜಿಲ್ಲೆಯ ಕೊಲ್ಲೂರು (12 ಸೆಂ.ಮೀ) ಹೆಚ್ಚು ಮಳೆ ದಾಖಲಾಗಿದೆ. ಇದೇ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಪ್ರತಿ ದಿನ 20 ಸೆಂ.ಮೀ ಗಿಂತ ಅಧಿಕ ಮಳೆ ದಾಖಲಾಗಿತ್ತು.

ಧರ್ಮಸ್ಥಳ, ಕಾರವಾರ ಅಬ್ಬಿ, ಸಿದ್ಧಾಪುರ, ಕಳಸ, ಶೃಂಗೇರಿಯಲ್ಲಿ 6 ಸೆಂ.ಮೀ ಮಳೆ ಸುರಿದಿದೆ. ಅಂಕೋಲಾ, ಪುತ್ತೂರು, ಮಂಗಳೂರು, ಯಲ್ಲಾಪುರ, ಶಿರಾಲಿ, ಕಾರ್ಕಳ, ಭಾಗಮಂಡಲ, ಕಮ್ಮರಡಿ, ಹುಂಚದಕಟ್ಟೆಯಲ್ಲಿ 5 ಸೆಂ.ಮೀ ಮಳೆ ದಾಖಲಾಗಿದೆ. ಉಪ್ಪಿನಂಗಡಿ, ಗೇರುಸೊಪ್ಪ, ಮಂಕಿ, ಜೋಯಿಡಾ, ಉಡುಪಿ, ಬೆಳ್ತಂಗಡಿ, ಬೆಳಗಾವಿ, ಔರಾದ್, ಸೋಮವಾರಪೇಟೆ, ಜಯಪುರಗಳಲ್ಲಿ 4 ಸೆಂ.ಮೀ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.