ಹೊಸಪೇಟೆ (ವಿಜಯನಗರ): ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕಾಗಿ ಕಳೆದ 15 ದಿನಗಳಿಂದ ನಂದಿನಿ ತುಪ್ಪವಷ್ಟೇ ರವಾನೆಯಾಗುತ್ತಿದೆ. ಹಾಲು ತುಂಬಿಕೊಂಡು ಹೋಗುವ ನಂದಿನಿ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಅದೇ ರೀತಿ ತಿರುಪತಿಗೆ ರವಾನೆಯಾಗುವ ತುಪ್ಪ ಸಾಗಿಸುವ ವಾಹನಗಳಿಗೂ ಜಿಪಿಎಸ್ ಅಳವಡಿಸಲಾಗಿದೆ. ಹೀಗಾಗಿ ನಮ್ಮ ಹಾಲು ಮತ್ತು ತುಪ್ಪಕ್ಕೆ ಕಲಬೆರಕೆ ಆಗುವ ಸಾಧ್ಯತೆ ಇಲ್ಲ’ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ತಿರುಪತಿ ಲಡ್ಡುವಿಗೆ ಬಳಸುವ ತುಪ್ಪದಲ್ಲಿ ಕಲಬೆರಕೆ ಆರೋಪ ಬಂದ ಮೇಲೆ ಮತ್ತೆ ನಂದಿನಿ ತುಪ್ಪವನ್ನು ಕಳುಹಿಸುವಂತೆ ಟಿಟಿಡಿಯಿಂದ ಬೇಡಿಕೆ ಬಂದಿದೆ. ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ತುಪ್ಪ ಸೇರಿದಂತೆ ಎಲ್ಲಾ ಉತ್ಪನ್ನಗಳೂ ಲಭ್ಯ ಇವೆ, ತಿರುಮಲದಿಂದ ಬರುವ ಬೇಡಿಕೆಯಷ್ಟೂ ತುಪ್ಪವನ್ನು ರವಾನಿಸಬಹುದಾಗಿದೆ’ ಎಂದು ಹೇಳಿದರು.

’ಜತೆಗೆ, ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸಹ ನಂದಿನಿ ತುಪ್ಪವನ್ನೇ ಬಳಸಬೇಕೆಂದು ಸರ್ಕಾರ ಆದೇಶ ಹೊರಡಿಸಿದ್ದು, ಅವುಗಳಿಗೆ ಸಹ ಪೂರೈಸುವಷ್ಟು ತುಪ್ಪ ನಮ್ಮಲ್ಲಿದೆ’ ಎಂದರು.

‘ಕೆಎಂಎಫ್ ವಿಚಾರದಲ್ಲಿ ಸಾಕಷ್ಟು ಹೆಮ್ಮೆ ಇದೆ. ನಂದಿನ ಬ್ರ್ಯಾಂಡ್ ಸಮಸ್ತ ಕನ್ನಡಿಗರ ಗೌರವ ಹೆಚ್ಚಿಸಿದೆ. ಕಳೆದ ನಾಲ್ಕು ವರ್ಷಗಳಿಂದ ತಿರುಮಲಕ್ಕೆ ಕೆಎಂಎಫ್‌ನ ಯಾವುದೇ ಉತ್ಪನ್ನವನ್ನೂ ಕಳುಹಿಸಿರಲಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.