ಬೆಂಗಳೂರು: 2004 –14ರ ನಡುವಿನ ಯುಪಿಎ ಸರ್ಕಾರದ 10 ವರ್ಷಗಳ ಅವಧಿಗೆ ಹೋಲಿಸಿದರೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಬಿಜೆಪಿ ಹೇಳಿದೆ.

#ಮೋದಿಗ್ಯಾರಂಟಿ ಎಂಬ ಹ್ಯಾಷ್ಟ್ಯಾಗ್ನಡಿಯಲ್ಲಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ಸರ್ಕಾರದ 10 ವರ್ಷಗಳ ಅವಧಿಗೆ (2004-14) ಹೋಲಿಸಿದರೆ ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ಮೆಟ್ರೊ ರೈಲು, ಬ್ರಾಡ್ಗೇಜ್, ಡಿಬಿಟಿ ಫಲಾನುಭವಿಗಳ ಸಂಖ್ಯೆ ಮತ್ತು ಡಾಟಾ ಬಳಕೆಯಲ್ಲೂ ಗಮನಾರ್ಹ ಹೆಚ್ಚಳವಾಗಿದೆ’ ಎಂದು ಬಣ್ಣಿಸಿದೆ.

ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯೇ ಪ್ರಧಾನಿ ಮೋದಿ ಸರ್ಕಾರದ ಆದ್ಯತೆಯಾಗಿದೆ ಎಂದು ಬಿಜೆಪಿ ತಿಳಿಸಿದೆ.

‘ಕಾಂಗ್ರೆಸ್ ಅವಧಿಯಲ್ಲಿ ಕೇವಲ 5 ನಗರಗಳಲ್ಲಿ ಮಾತ್ರ ಮೆಟ್ರೊ ರೈಲಿನ ಸಂಪರ್ಕವಿತ್ತು. ಆದರೆ, ಮೋದಿ ಅವಧಿಯಲ್ಲಿ 20 ನಗರಗಳಿಗೆ ಮೆಟ್ರೊ ಸೇವೆಯನ್ನು ವಿಸ್ತರಿಸಲಾಗಿದೆ. ಅದೇ ರೀತಿ ಕಾಂಗ್ರೆಸ್ ಅವಧಿಯಲ್ಲಿ 21.8 ಸಾವಿರ ಕಿ.ಮೀ ರೈಲು ಮಾರ್ಗ (ಬ್ರಾಡ್ ಗೇಜ್) ವಿದ್ಯುದ್ದೀಕರಣ ಮಾಡಲಾಗಿತ್ತು. ಆದರೆ, ಮೋದಿ ಅವಧಿಯಲ್ಲಿ 60.8 ಸಾವಿರ ಕಿ.ಮೀ ರೈಲು ಮಾರ್ಗ (ಬ್ರಾಡ್ ಗೇಜ್) ವಿದ್ಯುದ್ದೀಕರಣಗೊಂಡಿದೆ’ ಎಂದು ಬಿಜೆಪಿ ಹೇಳಿದೆ.

‘ಕಾಂಗ್ರೆಸ್ ಅವಧಿಯಲ್ಲಿ ನೇರ ನಗದು ವರ್ಗಾವಣೆ (ಡಿಬಿಟಿ) ಫಲಾನುಭವಿಗಳ ಸಂಖ್ಯೆ ಕೇವಲ 10.8 ಕೋಟಿ ಆಗಿತ್ತು. ಆದರೆ, ಮೋದಿ ಅವಧಿಯಲ್ಲಿ 166 ಕೋಟಿಗೂ ಅಧಿಕವಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಮಾಸಿಕ ಡೇಟಾ ಬಳಕೆ ಕೇವಲ 0.06 ಜಿಬಿ ಆಗಿತ್ತು. ಆದರೆ, ಮೋದಿ ಅವಧಿಯಲ್ಲಿ ಮಾಸಿಕ ಡೇಟಾ ಬಳಕೆ 18.39 ಜಿಬಿಗೆ ತಲುಪಿದೆ. ಇದೇ ವಿನಾಶಕಾಲಕ್ಕೂ ಅಮೃತಕಾಲಕ್ಕೂ ಇರುವ ವ್ಯತ್ಯಾಸ’ ಎಂದು ಬಿಜೆಪಿ ಹೇಳಿಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, ‘ಕಾಂಗ್ರೆಸ್ಸಿಗರ ಪೊಲಿಟಿಕಲ್ ಸ್ಟಂಟ್ ಜನಸ್ಪಂದನೆಗೆ ಜನರ ವೇದನೆಯೇ ಉತ್ತರ’ ಎಂದು ಲೇವಡಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.