ಮೈಸೂರು: ಶಾಸಕ ಎಚ್.ವಿಶ್ವನಾಥ್ ಶನಿವಾರ ಬೆಂಗಳೂರಿನಲ್ಲಿ ರಾಜೀನಾಮೆ ನೀಡುತ್ತಿದ್ದಂತೆಯೇ ಹುಣಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕಟು ನಿಂದನೆ ವ್ಯಕ್ತವಾಗಿದೆ. ಹಲವರು ಕೆಟ್ಟದ್ದಾಗಿ ಪ್ರತಿಕ್ರಿಯಿಸಿದ್ದು, ಕೆಲವರು ವಿಶ್ವನಾಥ್ ಭಾವಚಿತ್ರಕ್ಕೆ ‘ಭಾವಪೂರ್ಣ ಶ್ರದ್ಧಾಂಜಲಿ’ ಎಂಬ ಸಂದೇಶದ ಪೋಸ್ಟ್ ಹಾಕಿದ್ದಾರೆ.

ಹುಣಸೂರಿನ ವಿವಿಧೆಡೆ ಹಾಕಲಾಗಿದ್ದ ಜೆಡಿಎಸ್ ಕಟೌಟ್ಗಳಲ್ಲಿ ಎಚ್.ವಿಶ್ವನಾಥ್ ಹಾಗೂ ಅವರ ಪುತ್ರ ಅಮಿತ್ ದೇವರಹಟ್ಟಿ ಭಾವಚಿತ್ರಗಳನ್ನು ಕತ್ತರಿಸಿ ಹಾಕುತ್ತಿರುವ ವಿಡಿಯೊ ತುಣುಕುಗಳು ಈ ಭಾಗದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಜೆಡಿಎಸ್ನ ಐಟಿ ಸೆಲ್ನ ಕಾರ್ಯಕರ್ತ ಎನ್ನಲಾದ ಸತೀಶ್ಗೌಡ ಎಂಬುವವರು, ವಿಶ್ವನಾಥ್ ಆಪ್ತ ಸಹಾಯಕ ನಟರಾಜು ಅವರಿಗೆ ಮೊಬೈಲ್ ಕರೆ ಮಾಡಿ ‘ರಾಜೀನಾಮೆ ನೀಡಿದ ಸಾಹೇಬ್ರು ಹುಣಸೂರಿಗೆ ವಾಪಸ್ ಬರ್ತಾರಾ?’ ಎಂದು ಕೇಳಿದ್ದಾರೆ. ಈ ವೇಳೆ ನಟರಾಜುಮತ್ತು ಸತೀಶ್ ಗೌಡ ನಡುವೆ ಅವಾಚ್ಯ ಮಾತುಗಳ ವಿನಿಮಯವಾಗಿದೆ.

ಮುಂಜಾಗ್ರತಾ ಕ್ರಮವಾಗಿ ಕೆ.ಆರ್.ನಗರದಲ್ಲಿನ ಶಾಸಕ ವಿಶ್ವನಾಥ್ ನಿವಾಸಕ್ಕೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.