ಚಿತ್ರದುರ್ಗ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಕೇಂದ್ರ ಕಚೇರಿ ಇರುವ ನಾಗ್ಪುರದ ಹೆಡಗೇವಾರ್ ಮ್ಯೂಸಿಯಂಗೆ ಪ್ರವೇಶ ನಿರಾಕರಿಸಿದ ವಿಚಾರವನ್ನು ತಳ್ಳಿಹಾಕುತ್ತಿರುವ ಬಿಜೆಪಿ ಮುಖಂಡರು ಸಿಸಿಟಿವಿ ದೃಶ್ಯಗಳನ್ನು ಬಿಡುಗಡೆ ಮಾಡಿಸಲಿ ಎಂದು ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಸವಾಲು ಹಾಕಿದ್ದಾರೆ.

ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶಾಸಕ ಸುರೇಶ್ಕುಮಾರ್ ಹಾಗೂ ಕುಡುಚಿ ಮಾಜಿ ಶಾಸಕ ಪಿ.ರಾಜೀವ್ ಅವರ ಹೆಸರು ಉಲ್ಲೇಖಿಸಿ ಆಡಿಯೊ ಬಿಡುಗಡೆ ಮಾಡಿದ್ದಾರೆ.

ಪ್ರವೇಶ ನೀಡಿರುವುದನ್ನು ನಿರೂಪಿಸಿದರೆ ತಮ್ಮ ಮನೆಯ ಕಸ ಗುಡಿಸಿ ಗೇಟ್ ಕಾಯುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.

‘ನಾಗಪುರದ ಮ್ಯೂಸಿಯಂ ಸೂಕ್ಷ್ಮ ಸ್ಥಳ. ಇಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಂದು ನಡೆದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನೀವು ಈ ವಿಡಿಯೊ ಬಿಡುಗಡೆ ಮಾಡಿಸಿ. ಯಾರನ್ನೋ ಮೆಚ್ಚಿಸುವ ಪ್ರಯತ್ನ ಮಾಡಬೇಡಿ. ಎಂಟು ತಿಂಗಳ ಹಿಂದೆಯೇ ಇದನ್ನು ಬಹಿರಂಗಪಡಿಸಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಇನ್ನಷ್ಟು ಸ್ಥಾನ ಕಳೆದುಕೊಳ್ಳಬೇಕಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.