ಮಂಗಳೂರು: ಕರಾವಳಿಯಲ್ಲಿ ಶಿಕ್ಷಣಕ್ಕೆ ಲಿಂಗ, ಜಾತಿ, ಧರ್ಮದ ಸಮಸ್ಯೆಯು ಕಾಡಿರುವುದು ಇದೇ ಮೊದಲಲ್ಲ. ಸಾರ್ವತ್ರಿಕ ಶಿಕ್ಷಣದ ಆರಂಭದಲ್ಲೇ ಸಮಸ್ಯೆ ಉದ್ಭವಿಸಿದ್ದು, 1855ರಲ್ಲೇ ಬಾಸೆಲ್ ಮಿಷನ್ ಪ್ರತ್ಯೇಕ ಶಾಲೆಗಳನ್ನು ತೆರೆದಿತ್ತು.

ಕರಾವಳಿಯಲ್ಲಿ ಸಾರ್ವಜನಿಕ ಶಿಕ್ಷಣವನ್ನು ಪರಿಚಯಿಸಿದ್ದ ಬಾಸೆಲ್ ಮಿಷನ್ 1836ರಲ್ಲಿ ಮಂಗಳೂರಿನ ನಿರೇಶ್ವಾಲ್ಯದಲ್ಲಿ ಮೊದಲ ಶಾಲೆಯನ್ನು ಆರಂಭಿಸಿತ್ತು. ಆದರೆ, ಹೆಣ್ಣು ಮಕ್ಕಳು ಶಾಲೆಗೆ ಬರುತ್ತಿರಲಿಲ್ಲ. ಅವರನ್ನು ಸೆಳೆಯಲು ಕಸೂತಿ ಆರಂಭಿಸಲಾಯಿತು. ಆದರೂ, ಮೇಲ್ವರ್ಗದವರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದರು. ಅದಕ್ಕಾಗಿ ಬಾಸೆಲ್ ಮಿಷನ್ 1855ರಲ್ಲಿ ಹಂಪನಕಟ್ಟೆಯಲ್ಲಿ ಬ್ರಾಹ್ಮಣ ಹೆಣ್ಣು ಮಕ್ಕಳ ಶಾಲೆಯನ್ನು ಆರಂಭಿಸಿತ್ತು.

‘ಬಾಸೆಲ್ ಮಿಷನ್ ಆರಂಭಿಸಿದ್ದ ಸಾರ್ವತ್ರಿಕ ಸಹ ಶಿಕ್ಷಣದ (co education) ತರಗತಿಗಳಿಗೆ ಬರಲು ಹಿಂದೇಟು ಹಾಕಿದ ಮೇಲ್ವರ್ಗದ ಹೆಣ್ಣು ಮಕ್ಕಳಿಗಾಗಿ ಬ್ರಾಹ್ಮಣ ಹೆಣ್ಣು ಮಕ್ಕಳ ಶಾಲೆ ಆರಂಭಿಸಿದ್ದರು’ ಎಂದುಬಾಸೆಲ್ ಮಿಷನ್ ಬಿ. ಪದ್ಮಶ್ರೀ ಅಧ್ಯಯನದಲ್ಲಿ (ಮಧುರೈ ಕಾಮರಾಜ ವಿಶ್ವವಿದ್ಯಾಲಯ) ದಾಖಲಿಸಿದ್ದಾರೆ.

‘ಲಿಂಗ, ಜಾತಿ, ಧರ್ಮದ ಭೇದವಿಲ್ಲದೇ ಸಮಾನ ಶಿಕ್ಷಣ ಸಿಗಬೇಕು ಎಂಬ ಗುರಿಯನ್ನು ಬಾಸೆಲ್ ಮಿಷನ್ ಹೊಂದಿತ್ತು. ಆದರೆ, ಜಾತಿ ಪದ್ಧತಿ ಹಾಗೂ ಬಾಲ್ಯ ವಿವಾಹ ಸವಾಲಾಗಿತ್ತು. ಪ್ರತ್ಯೇಕ ಶಾಲೆ ಆರಂಭಗೊಂಡ ಕಾರಣ ಸೀರೆ ಉಟ್ಟುಕೊಂಡು ಹೆಣ್ಣುಮಕ್ಕಳು ಬರುತ್ತಿದ್ದರು. ಪತ್ನಿಯನ್ನು ಶಾಲೆಗೆ ಕಳುಹಿಸಿಕೊಡಲು ಮೇಲ್ವರ್ಗದ ಪುರುಷರು ಒಪ್ಪಿಕೊಂಡಿದ್ದರು’ ಎಂದು ‘ಬಾಸೆಲ್ ಮಿಷನ್ ಮತ್ತು ಶಿಕ್ಷಣ ರಂಗ’ ಲೇಖನದಲ್ಲಿ ಸಂಶೋಧಕಿ ಕುಸುಮ್ ದಾಖಲಿಸಿದ್ದಾರೆ.

‘ಬಾಸೆಲ್ ಮಿಷನ್ ಧರ್ಮ ಪ್ರಚಾರದ ಉದ್ದೇಶ ಹೊಂದಿದ್ದರೂ, ಜಾತಿ–ಧರ್ಮ ಮೀರಿ, ಹೆಣ್ಣು ಮಕ್ಕಳಿಗೂ ಶಿಕ್ಷಣ ಕೊಡಿಸುವ ಉದ್ದೇಶವೂ ಇತ್ತು’ ಎಂದು ವಿವಿಧ ಅಧ್ಯಯನಗಳಲ್ಲಿ ಉಲ್ಲೇಖಿಸಲಾಗಿದೆ.

1872ರಲ್ಲಿ ಡೋಲು ಬಾರಿಸುವವರಿಗೆ, 1911ರಲ್ಲಿಪುತ್ತೂರಿನಲ್ಲಿ ಪಂಚಮರಿಗೆ ಹಾಗೂ1876ರಲ್ಲಿ ಕಾರ್ಮಿಕರ ಮಕ್ಕಳಿಗಾಗಿ ಶಾಲೆಯನ್ನು ಮಿಷನ್ ಆರಂಭಿಸಿತ್ತು. ಕರಾವಳಿಯ ಉಡುಪಿ, ಮೂಲ್ಕಿ, ಕಾರ್ಕಳ, ಮೂಡುಬಿದಿರೆ, ಉಜಿರೆ, ಪುತ್ತೂರಿನಲ್ಲಿ ಹೆಣ್ಣು
ಮಕ್ಕಳು ಹಾಗೂ ನಿರ್ದಿಷ್ಟ ಜಾತಿಯವರಿಗಾಗಿ ಶಾಲೆ ಆರಂಭಿಸಿದ್ದ ನಿದರ್ಶನಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.