ಬೆಂಗಳೂರು: ‘ಹುಲಿಗಳ ಸಂರಕ್ಷಣೆಗಾಗಿ ರಾಜ್ಯದಲ್ಲಿ ಕೈಗೊಂಡ ವಿವಿಧ ಉಪಕ್ರಮಗಳ ಪರಿಣಾಮ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುವುದನ್ನು 2021-22ರ ಅವಧಿಯಲ್ಲಿ ನಡೆದ ಹುಲಿ ಗಣತಿಯ ಆಧಾರದಲ್ಲಿ ವಿಶ್ಲೇಷಿಸಲಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

‘ಅಂತರರಾಷ್ಟ್ರೀಯ ಹುಲಿ ದಿನ‘ಕ್ಕೆ ಎರಡು ದಿನಗಳ ಮೊದಲೇ ರಾಷ್ಟ್ರೀಯ ಪ್ರಾಣಿ ಹುಲಿ ಗಣತಿಯ ವಿವರ ಬಿಡುಗಡೆ ಮಾಡಿದ ಅವರು, ‘ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಮಾರ್ಗಸೂಚಿಯ ಪ್ರಕಾರ ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಹುಲಿ ಗಣತಿ ಮಾಡಲಾಗುತ್ತದೆ’ ಎಂದು ತಿಳಿಸಿದ್ದಾರೆ.

‘2018ರಲ್ಲಿ ನಡೆದಿದ್ದ ಹುಲಿ ಗಣತಿ ಪ್ರಕಾರ ಕರ್ನಾಟಕದಲ್ಲಿ ನಡೆದ ಕ್ಯಾಮೆರಾ ಟ್ರ್ಯಾಪ್ನಲ್ಲಿ 404 ಹುಲಿಗಳು ಪತ್ತೆ ಆಗಿದ್ದವು. ಅದನ್ನು ವನ್ಯಜೀವಿ ಸಂಖ್ಯಾ ಶಾಸ್ತ್ರದ ಪ್ರಕಾರ ವಿಶ್ಲೇಷಿಸಿದಾಗ ರಾಜ್ಯದಲ್ಲಿ 475ರಿಂದ 573 ಹುಲಿಗಳು ಇರಬಹುದೆಂದು ವಿಶ್ಲೇಷಿಸಲಾಗಿತ್ತು. 2022ರಲ್ಲಿ ರಾಜ್ಯದಲ್ಲಿ 435 ಹುಲಿಗಳು ಪತ್ತೆಯಾಗಿದ್ದು, ಈ ಸಂಖ್ಯೆ ಇನ್ನೂ ಹೆಚ್ಚು ಆಗಬಹುದು ಎಂದು ವಿಶ್ಲೇಷಿಸಬಹುದು’ ಎಂದಿದ್ದಾರೆ.

‘ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 612, ಭದ್ರಾದಲ್ಲಿ 330, ಬಿಆರ್ಟಿಯಲ್ಲಿ 288, ಕಾಳಿಯಲ್ಲಿ 448, ನಾಗರಹೊಳೆಯಲ್ಲಿ 502 ಕ್ಯಾಮೆರಾ ಪಾಯಿಂಟ್ ಅಳವಡಿಸಲಾಗಿತ್ತು. ಇದರಲ್ಲಿ 376 ಅನನ್ಯ (ವಿಶಿಷ್ಟ) ಹುಲಿಗಳು ಪತ್ತೆಯಾಗಿವೆ’ ಎಂದು ಅವರು ವಿವರಿಸಿದ್ದಾರೆ.

‘ಪಶ್ಚಿಮ ಘಟ್ಟದ ಹೆಚ್ಚಿನ ಭಾಗ ಹೊಂದಿರುವ ಕರ್ನಾಟಕವು ಹುಲಿಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ. 2021-22ರ ಅವಧಿಯಲ್ಲಿ ಹುಲಿ ಗಣತಿಯನ್ನು ವೈಜ್ಞಾನಿಕವಾಗಿ ಹಾಗೂ ಸಮರ್ಪಕವಾಗಿ ನಡೆಸಲಾಗಿದೆ. ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, ಭದ್ರಾ, ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ಹಾಗೂ ಕಾಳಿ ಕಾನನ ಸೇರಿದಂತೆ 37 ವನ್ಯಜೀವಿ ಧಾಮಗಳಲ್ಲಿ ಒಟ್ಟು 37 ವಿಭಾಗದಲ್ಲಿ ಈಗಣತಿ ನಡೆಸಲಾಗಿದೆ. ಈ ಗಣತಿಗೆ ಕ್ಯಾಮೆರಾ ಟ್ರ್ಯಾಪ್ ಮತ್ತು ಲೈನ್ ಟ್ರನ್ಸ್ಯಾಕ್ಟ್ ವಿಧಾನ ಬಳಸಲಾಗಿದೆ’ ಎಂದು ವಿವರಿಸಿದ್ದಾರೆ.

‘ರಾಜ್ಯದ ಎಲ್ಲ ಸಂರಕ್ಷಿತ ಅರಣ್ಯಗಳಲ್ಲಿ ಅಳವಡಿಸಲಾಗಿದ್ದ 5,399 ಕ್ಯಾಮೆರಾ ಟ್ರ್ಯಾಪ್ನಲ್ಲಿ 66 ಲಕ್ಷಕ್ಕೂ ಹೆಚ್ಚು ವನ್ಯಜೀವಿಗಳ ಛಾಯಾಚಿತ್ರ ಕ್ರೋಡೀಕರಣವಾಗಿದ್ದು, ಆಧುನಿಕ ತಂತ್ರಜ್ಞಾನ ಬಳಸಿ ಹುಲಿಗಳ ಚಲನವಲನ, ಪ್ರಾದೇಶಿಕ ಪರಿಮಿತಿ, ಹುಲಿಗಳ ಮೈಮೇಲಿನ ಪಟ್ಟೆಗಳ ಆಧಾರದಲ್ಲಿ ಹುಲಿಗಳ ಸಂಖ್ಯೆ ಲೆಕ್ಕ ಹಾಕಲಾಗಿದೆ’ ಎಂದಿದ್ದಾರೆ.

‘ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ 80, ಬೆಳಗಾವಿ ವಿಭಾಗದಲ್ಲಿ 119, ಭದ್ರಾವತಿ ವಿಭಾಗದಲ್ಲಿ 121, ಕಾವೇರಿ ವನ್ಯಜೀವಿ ಧಾಮದಲ್ಲಿ 473, ಚಿಕ್ಕಮಗಳೂರು ವನ್ಯಜೀವಿ ಅರಣ್ಯದಲ್ಲಿ 41, ಹಳಿಯಾಳದಲ್ಲಿ 106, ಕಾರವಾರ ವಿಭಾಗದಲ್ಲಿ 135, ಕೊಪ್ಪ ವನ್ಯಜೀವಿಧಾಮದಲ್ಲಿ 50, ಕುದುರೆಮುಖ ವಿಭಾಗದಲ್ಲಿ 173, ಮಡಿಕೇರಿ (ಬ್ರಹ್ಮಗಿರಿ, ಪುಷ್ಪಗಿರಿ ಮತ್ತು ತಲಕಾವೇರಿ) ವಿಭಾಗದಲ್ಲಿ 175, ಮಲೆ ಮಹದೇಶ್ವರ ಬೆಟ್ಟದಲ್ಲಿ 432, ಮೈಸೂರು ವಿಭಾಗದಲ್ಲಿ 36, ಶಿವಮೊಗ್ಗ ವನ್ಯಜೀವಿ ಧಾಮದಲ್ಲಿ 182, ಶಿರಸಿ ವಿಭಾಗದಲ್ಲಿ 107, ವಿರಾಜಪೇಟೆ ವಿಭಾಗದಲ್ಲಿ 111, ಯಲ್ಲಾಪುರ ವಿಭಾಗದಲ್ಲಿ 94 ಸೇರಿ ರಾಜ್ಯದಲ್ಲಿ ಒಟ್ಟು 4,786 ಕ್ಯಾಮೆರಾ ಪಾಯಿಂಟ್ಗಳನ್ನು ಅಳವಡಿಸಲಾಗಿತ್ತು’ ಎಂದು ಖಂಡ್ರೆ ತಿಳಿಸಿದ್ದಾರೆ.

‘ಪ್ರಪಂಚದಲ್ಲಿ ಮೊದಲ ಬಾರಿಗೆ ಹುಲಿ ಗಣತಿ ನಡೆದಿದ್ದು ಭಾರತದಲ್ಲೇ. ಜಾರ್ಖಂಡ್ನ ಪಲ್ಮಾವ್ ಹುಲಿ ರಕ್ಷಿತಾರಣ್ಯದಲ್ಲಿ ಪ್ರಾಯೋಗಿಕ ಗಣತಿ ನಡೆದಿತ್ತು. 1972ರಲ್ಲಿ ವನ್ಯಜೀವಿ ಕಾಯ್ದೆ ಜಾರಿಗೆ ಬಂದ ನಂತರ 1972ರಿಂದ ಹುಲಿ ಗಣತಿ ಆರಂಭಿಸಲಾಯಿತು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.