ಟೆಲ್ ಅವಿವ್ (ಇಸ್ರೇಲ್): ಕದನ ವಿರಾಮ ಒಪ್ಪಂದದಂತೆ ಹಮಾಸ್ ಬಂಡುಕೋರರರು ಸೋಮವಾರ 11 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಒತ್ತೆಯಾಳುಗಳನ್ನು ಗಾಜಾಪಟ್ಟಿಯಲ್ಲಿರುವ ರೆಡ್‌ಕ್ರಾಸ್ ಪ್ರತಿನಿಧಿಗಳಿಗೆ ಒಪ್ಪಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ದೃಢಪಡಿಸಿದೆ. ಕದನ ವಿರಾಮ ಘೋಷಣೆಯ 4ನೇ ದಿನವಾದ ಸೋಮವಾರ ಈ ಪ್ರಕ್ರಿಯೆ ನಡೆದಿದೆ.
.Israel Hamas War: ಕದನ ವಿರಾಮ ವಿಸ್ತರಣೆಗೆ ಇಂಗಿತ.
'ಒಪ್ಪಂದದಂತೆ ಸೋಮವಾರ 11 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ 33 ಮಂದಿ ಪ್ಯಾಲೆಸ್ಟೀನಿ ಕೈದಿಗಳನ್ನು ಬಿಡುಗಡೆ ಮಾಡಿದೆ' ಎಂದು ಕತಾರ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್ ಅನ್ಸಾರಿ ತಿಳಿಸಿದ್ದಾರೆ.

ಇಸ್ರೇಲ್ ಸರ್ಕಾರ ನ.22ರಂದು ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. 50 ಒತ್ತೆಯಾಳುಗಳ ಬಿಡುಗಡೆ ಷರತ್ತಿನೊಂದಿಗೆ ಕದನ ವಿರಾಮಕ್ಕೆ ಸಮ್ಮತಿಸಿತ್ತು. ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು, ‘ಇದು ಯುದ್ಧದ ಮುಕ್ತಾಯವಲ್ಲ‘ ಎಂದು ಸ್ಪಷ್ಟಪಡಿಸಿದ್ದರು.
.ಹಮಾಸ್: 50 ಒತ್ತೆಯಾಳು ಬಿಡುಗಡೆಗೆ ಒಪ್ಪಿಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.