ಟೋಕಿಯೊ: ಜಪಾನ್‌ನ ಪೂರ್ವ ಕರಾವಳಿಯಲ್ಲಿ ಶನಿವಾರದಂದು ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಸುನಾಮಿ ಬಗ್ಗೆ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಭೂಕಂಪನದ ತೀವ್ರತೆಗೆ ಪೂರ್ವ ಕರಾವಳಿಯ ಕೆಲವು ಭಾಗಗಳಲ್ಲಿ ಪ್ರಬಲ ನಡುಕ ಸೃಷ್ಟಿಯಾಗಿದೆ. ಜಪಾನ್ ರಾಜಧಾನಿ ಟೋಕಿಯೊದಲ್ಲಿ ಪ್ರಬಲ ಕಂಪನ ಉಂಟಾಗಿದೆ ಎಂದು ತಿಳಿಸಲಾಗಿದೆ.

ಜಪಾನ್ ಫುಕುಶಿಮಾ ಕರಾವಳಿಯಲ್ಲಿ ಉಂಟಾಗಿರುವ ಭೂಕಂಪನದಲ್ಲಿ ಯಾವುದೇ ಸಾವು-ನೋವುಗಳ ಬಗ್ಗೆಯೂ ವರದಿಯಾಗಿಲ್ಲ.

ಇದನ್ನೂ ಓದಿ: ದಕ್ಷಿಣ ಪೆಸಿಫಿಕ್ನಲ್ಲಿ ಭೂಕಂಪ

ಜಪಾನ್ ಸಮಯ ರಾತ್ರಿ 11.08ರ ಹೊತ್ತಿಗೆ ಪೆಸಿಫಿಕ್ ಸಾಗರದ 60 ಕಿ.ಮೀ. ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದೆ. 2011ರಲ್ಲಿ ಇದೇ ಫುಕುಶಿಮಾ ಕೇಂದ್ರ ಬಿಂದುವಿನಲ್ಲಿ ಸಂಭವಿಸಿದ ಭೂಕಂಪನದಲ್ಲಿ 18,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ಪೂರ್ವ ಜಪಾನ್‌ನ ತೊಹುಕು ಪ್ರದೇಶದ ಲಕ್ಷಾಂತರ ಮನೆಗಳಲ್ಲಿ ವಿದ್ಯುತ್ ಕಡಿತ ಉಂಟಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಮನೆಗಳಲ್ಲಿ ಕಂಪನದ ಅನುಭವವುಂಟಾಗಿದೆ.

ಫುಕುಶಿಮಾ ಅಣು ಸ್ಥಾವರದ ಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ನಿಯಂತ್ರಕ ಘಟಕ ಟಿಇಪಿಸಿಒ ಟ್ವೀಟ್ ಮೂಲಕ ತಿಳಿಸಿದೆ.

ಪೆಸಿಫಿಕ್ ಸಾಗರದ ಭೂಕಂಪ ವಲಯದಲ್ಲಿ (ರಿಂಗ್ ಆಫ್ ಫೈರ್) ಸ್ಥಿತಗೊಂಡಿರುವ ಜಪಾನ್‌ನಲ್ಲಿ ಪದೇ ಪದೇ ಭೂಕಂಪನದ ಅನುಭವವುಂಟಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.