ಅಭ್ಯರ್ಥಿಯೊಬ್ಬರು ಒಮ್ಮೆ ಸೋತು, ಮತ್ತೊಂದು ಅವಧಿಗೆ ಸ್ಪರ್ಧಿಸಿ ಗೆದ್ದ ಇತಿಹಾಸ 132 ವರ್ಷಗಳಿಂದ ಅಮೆರಿಕದಲ್ಲಿ ಇರಲಿಲ್ಲ ಅಧ್ಯಕ್ಷ ಗಾದಿಗೆ ಇದುವರೆಗೆ ಏರಿದವರಲ್ಲಿ ಅತ್ಯಂತ ಹಿರಿಯ ನಾಯಕ ಎನ್ನುವ ಶ್ರೇಯ ಟ್ರಂಪ್‌ಗೆ ಗಂಭೀರ ಅಪರಾಧ ಪ್ರಕರಣದಲ್ಲಿ ತಪ್ಪಿತಸ್ಥನಾದ ವ್ಯಕ್ತಿಗೆ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನ
ಸ್ನೇಹಿತ ಟ್ರಂಪ್ ಅವರಿಗೆ ಅಭಿನಂದನೆ. ನಮ್ಮ ಜನರಿಗಾಗಿ, ಜಾಗತಿಕ ಶಾಂತಿ, ಸಮೃದ್ಧಿ, ದೃಢತೆಗಾಗಿ ಒಟ್ಟಾಗಿ ಕೆಲಸ ಮಾಡೋಣ
ನರೇಂದ್ರ ಮೋದಿ, ಭಾರತದ ಪ್ರಧಾನಿ
ಜಾಗತಿಕ ಶಾಂತಿ ಮತ್ತು ಸಮೃದ್ಧಿಗಾಗಿ ನಾವು ಅಮೆರಿಕದ ಜತೆಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ
ಮಲ್ಲಿಕಾರ್ಜುನ ಖರ್ಗೆ,
ಐತಿಹಾಸಿಕ ಸ್ನೇಹ ಹೊಂದಿರುವ ಇಟಲಿ ಮತ್ತು ಅಮೆರಿಕ ಸೋದರ ರಾಷ್ಟ್ರಗಳಾಗಿವೆ. ಕಾರ್ಯತಂತ್ರದ ಬಂಧ ಇನ್ನಷ್ಟು ಬಲವಾಗುವ ನಂಬಿಕೆ ಇದೆ
–ಜಾರ್ಜಿಯಾ ಮೆಲೋನಿ, ಇಟಲಿ ಪ್ರಧಾನಿ
ಪರಸ್ಪರ ಗೌರವ, ಸಹಕಾರ, ಶಾಂತಿಯುತ ಸಹಬಾಳ್ವೆಗಾಗಿ ಚೀನಾ ಅಮೆರಿಕದ ಜತೆಗೆ ಒಟ್ಟಾಗಿ ಕೆಲಸ ಮಾಡಲಿದೆ
–ವಿದೇಶಾಂಗ ಸಚಿವಾಲಯ, ಚೀನಾ
ನಾಲ್ಕು ವರ್ಷಗಳ ಕಾಲ ನಾವು ಗೌರವ, ಮಹತ್ವಕಾಂಕ್ಷೆಯೊಂದಿಗೆ ಶಾಂತಿ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಲು ಸಿದ್ಧರಿದ್ಧೇವೆ
–ಇಮ್ಯಾನುಯೆಲ್ ಮ್ಯಾಕ್ರಾನ್, ಫ್ರಾನ್ಸ್ ಅಧ್ಯಕ್ಷ
ಅಮೆರಿಕ ಮತ್ತು ಬ್ರಿಟನ್ ನಡುವೆ ವಿಶೇಷ ಬಾಂಧವ್ಯವಿದೆ. ಅಮೆರಿಕದೊಂದಿಗಿನ ಸಂಬಂಧ ಟ್ರಂಪ್ ಅವಧಿಯಲ್ಲೂ ಮುಂದುವರಿಯಲಿದೆ
– ಸರ್ ಕೀರ್ ಸ್ಟಾರ್ಮರ್, ಬ್ರಿಟನ್ ಪ್ರಧಾನಿ
ಶ್ವೇತಭವನಕ್ಕೆ ನಿಮ್ಮ ಐತಿಹಾಸಿಕ ವಾಪಸಾತಿಯು ಅಮೆರಿಕಕ್ಕೆ ಹೊಸ ಆರಂಭ ನೀಡುತ್ತದೆ. ಇಸ್ರೇಲ್ ಮತ್ತು ಅಮೆರಿಕದ ನಡುವಿನ ಮಹಾನ್ ಮೈತ್ರಿಗೆ ಬದ್ಧತೆ ನೀಡುತ್ತದೆ
–ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಪ್ರಧಾನಿ
ಟ್ರಂಪ್ ಅವರನ್ನು ಖುದ್ದು ಅಭಿನಂದಿಸಲು ಮತ್ತು ಅಮೆರಿಕದ ಜತೆಗೆ ನಮ್ಮ ಕಾರ್ಯತಂತ್ರದ ಪಾಲುದಾರಿಕೆ ಬಲಪಡಿಸುವ ಬಗ್ಗೆ ಚರ್ಚಿಸಲು ಎದುರು ನೋಡುತ್ತಿದ್ದೇನೆ