ಕೇಪ್ ಕೆನವೆರಲ್: ಎರಡು ವಾರಗಳ ಹಿಂದೆಯೇ ಭೂಮಿಗೆ ಹಿಂದಿರುಗಬೇಕಿದ್ದ ನಾಸಾ ಪೈಲಟ್ಗಳಾದ, ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬೋಯಿಂಗ್ನ ಬಾಹ್ಯಾಕಾಶ ನೌಕೆ ಸಹಾಯದಿಂದ ಸುರಕ್ಷಿತವಾಗಿ ಹಿಂತಿರುಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಕ್ಷೆಯಿಂದ ಬುಧವಾರ ಮೊದಲ ಸುದ್ದಿಗೋಷ್ಠಿ ನಡೆಸಿದ ಪೈಲಟ್ಗಳು, ‘ಕಕ್ಷೆಯಲ್ಲಿ ಥ್ರಸ್ಟರ್ (ಸಣ್ಣ ರಾಕೆಟ್ ಎಂಜಿನ್) ಪರೀಕ್ಷೆ ಪೂರ್ಣಗೊಂಡ ಬಳಿಕ ಭೂಮಿಗೆ ಮರಳುವ ನಿರೀಕ್ಷೆಯಿದೆ’ ಎಂದು ಹೇಳಿದ್ದಾರೆ.

ಕಕ್ಷೆಯಲ್ಲಿ ಹೆಚ್ಚಿನ ಅವಧಿ ಕಳೆಯಬೇಕಾದ ಪರಿಸ್ಥಿತಿಯ ಕುರಿತು ಪೈಲಟ್ಗಳು ಯಾವುದೇ ದೂರು ಹೇಳದೆ, ಬಾಹ್ಯಾಕಾಶ ನಿಲ್ದಾಣದ ಸಿಬ್ಬಂದಿಗೆ ಸಹಾಯ ಮಾಡುತ್ತಾ ಆನಂದದಿಂದ ಇರುವುದಾಗಿ ತಿಳಿಸಿದ್ದಾರೆ.

‘ನಮಗೆ ಯಾವುದೇ ತೊಂದರೆಯಿಲ್ಲ. ಬಾಹ್ಯಾಕಾಶ ನೌಕೆಯು ನಮ್ಮನ್ನು ಮನೆಗೆ ಕರೆತರುತ್ತದೆ ಎಂಬ ವಿಶ್ವಾಸವಿದೆ’ ಎಂದು ಸುನೀತಾ ವಿಲಿಯಮ್ಸ್ ಸುದ್ದಿಗಾರರಿಗೆ ತಿಳಿಸಿದರು.

ಹೀಲಿಯಂ ಸೋರಿಕೆ ಮತ್ತು ಥ್ರಸ್ಟರ್ನಲ್ಲಿನ ವೈಫಲ್ಯದಿಂದಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಅವರು ಹಿಂದಿರುಗುವುದು ತಡವಾಗುತ್ತಿದೆ. ಅವರು ಜುಲೈ ಅಂತ್ಯದ ವೇಳೆಗೆ ಹಿಂದಿರುಗಬಹುದು ಎಂದು ನಾಸಾ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.