ಸಿಡ್ನಿ: ‘ಇಂಡೊ–ಪೆಸಿಫಿಕ್ ವಲಯದ ಭದ್ರತೆ ಹಾಗೂ ಸ್ಥಿರತೆ ವಿಷಯದಲ್ಲಿ ಆಸ್ಟ್ರೇಲಿಯಾವು ಭಾರತಕ್ಕೆ ಪ್ರಮುಖ ಪಾಲುದಾರ ರಾಷ್ಟ್ರ. ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವ ಮೂಲಕ ಈ ಪ್ರದೇಶವು ಸ್ವತಂತ್ರ, ಮುಕ್ತ, ಸ್ಥಿರ ಮತ್ತು ಸಮೃದ್ಧವಾಗಿದೆ ಎಂಬುದನ್ನು ತೋರಿಸಿದ್ದೇವೆ’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದರು.

ಎರಡು ದಿನಗಳ ಭೇಟಿಗಾಗಿ ಆಸ್ಟ್ರೇಲಿಯಾಗೆ ಬಂದಿರುವ ಜೈಶಂಕರ್ ಅವರು, ಇಲ್ಲಿನ ಭಾರತೀಯ ಸಮುದಾಯದ ಸದಸ್ಯರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ‘ವಾಸ್ತವವಾಗಿ, ಭಾರತ – ಆಸ್ಟ್ರೇಲಿಯಾದ ಸಂಬಂಧದಲ್ಲಿ ದೊಡ್ಡ ಬದಲಾವಣೆಯಾಗಿದೆ. ಎರಡೂ ದೇಶಗಳು ಈಗ ಕ್ವಾಡ್ನ ಸದಸ್ಯ ರಾಷ್ಟ್ರಗಳಾಗಿವೆ. ಇಂಡೊ–ಪೆಸಿಫಿಕ್ ವಲಯದ ಭದ್ರತೆ ಹಾಗೂ ಸ್ಥಿರತೆಗಾಗಿ ಒಟ್ಟಾಗಿ ಕೆಲಸ ಮಾಡುತ್ತಿವೆ’ ಎಂದರು.

‘ಕೆಲವೇ ವಾರಗಳಲ್ಲಿ ನಾವು ಎಷ್ಟರ ಮಟ್ಟಿಗೆ ಪ್ರಗತಿ ಸಾಧಿಸಿದ್ದೇವೆ ಎಂಬುದನ್ನು ನೋಡಿದ್ದೇನೆ.ನಾವು ಆಸ್ಟ್ರೇಲಿಯಾದಲ್ಲಿ ಎರಡು ಪ್ರಮುಖ ಕಾರ್ಯಾಚರಣೆಗಳನ್ನು ನಡೆಸಿದ್ದೇವೆ. ಅದರಲ್ಲಿ ಭಾರತೀಯ ಸೇನೆಯೂ ಭಾಗವಹಿಸಿತ್ತು’ ಎಂದು ಜೈಶಂಕರ್ ಅವರು ಹೇಳಿದರು.

ಆಸ್ಟ್ರೇಲಿಯಾದ ಸೈನಿಕರೊಂದಿಗೂ ಸಮಯ ಕಳೆದುದಾಗಿ ಅವರು ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.