ಕ್ಯಾನ್‌ಬೆರಾ: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಅವರನ್ನು ವಶಕ್ಕೆ ಪಡೆಯುವ ಪ್ರಯತ್ನವನ್ನು ಕೈಬಿಡುವಂತೆ ಒತ್ತಡ ಹೇರಲು ಈ ತಿಂಗಳು ಅಮೆರಿಕಕ್ಕೆ ತೆರಳುತ್ತಿದ್ದೇವೆ ಎಂದು ಆಸ್ಟ್ರೇಲಿಯಾ ಸಂಸದರ ಗುಂಪು ಮಂಗಳವಾರ ತಿಳಿಸಿದೆ.

ನಿಯೋಗವು ಮಾಜಿ ಉಪ ಪ್ರಧಾನಿ ಬರ್ನಾಬೆ ಜಾಯ್ಸ್ ಮತ್ತು ಐವರು ಸಂಸದರನ್ನು ಒಳಗೊಂಡಿದೆ.

‘ಅಸಾಂಜ್ ಅವರ ಆರೋಗ್ಯ ಹದಗೆಟ್ಟಿದೆ. ಇಂಥ ಸಂದರ್ಭದಲ್ಲಿ ಅವರ ಸ್ವಾತಂತ್ರ್ಯವನ್ನು ನಾವು ಕಾಯಲೇಬೇಕಿದೆ’ ಎಂದು ಪಕ್ಷೇತರ ಸಂಸದೆ ಮತ್ತು ನಿಯೋಗದ ಸದಸ್ಯೆ ಮೋನಿಕ್ ರ್‍ಯಾನ್ ತಿಳಿಸಿದ್ದಾರೆ.

ಈ ಮಧ್ಯೆ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೂ ಅಕ್ಟೋಬರ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ.

ಆಸ್ಟ್ರೇಲಿಯಾ ಪ್ರಜೆ ಅಸಾಂಜ್ ಅಮೆರಿಕಕ್ಕೆ ಸಂಬಂಧಿಸಿದ ಅನೇಕ ರಹಸ್ಯ ವಿಷಯಗಳನ್ನು ವಿಕಿಲೀಕ್ಸ್ ಮೂಲಕ ಸೋರಿಕೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಅವರ ಗಡಿಪಾರಿಗೆ ಅಮೆರಿಕ ಕಾನೂನು ಹೋರಾಟ ನಡೆಸುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಅವರು ಲಂಡನ್‌ನ ಬೆಲ್ಮಾರ್ಶ್ ಸೆರೆಮನೆದ್ದಾರೆ. ಅದಕ್ಕೂ ಮುನ್ನ ಅವರು ಲಂಡನ್‌ನ ಈಕ್ವೆಡಾರ್ ರಾಯಭಾರಿ ಕಚೇರಿಯಲ್ಲಿ 7 ವರ್ಷ ಆಶ್ರಯ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.