ಢಾಕಾ: ದೇಶದಲ್ಲಿ ನಡೆದ ಹಿಂಸಾಚಾರಯುಕ್ತ ಪ್ರತಿಭಟನೆಯಲ್ಲಿ ಸಾಮೂಹಿಕ ಹತ್ಯೆ ನಡೆಸಿರುವ ಆರೋಪದಡಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಬಂಧನಕ್ಕೆ ದೇಶದ ಅಂತರರಾಷ್ಟ್ರೀಯ ಅಪರಾಧ ಪ್ರಕರಣಗಳ ನ್ಯಾಯಮಂಡಳಿಯು ಗುರುವಾರ ಆದೇಶ ಹೊರಡಿಸಿದೆ.

ನ್ಯಾ. ಗುಲಾಮ್ ಮೊರ್ತುಜಾ ಮಜೂಂದಾರ್ ಅವರ ಅಧ್ಯಕ್ಷತೆಯ ನ್ಯಾಯಮಂಡಳಿಯು ಶೇಖ್ ಹಸೀನಾ ಅವರನ್ನು ಒಳಗೊಂಡು 50 ಜನರ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ.

‘ಪ್ರಕರಣದಲ್ಲಿ ಅತ್ಯಂತ ಪ್ರಭಾವಿಯಾದವರನ್ನು ಬಂಧಿಸದಿದ್ದರೆ, ತನಿಖೆ ನಡೆಸುವುದೇ ಕಷ್ಟವಾಗಲಿದೆ’ ಎಂದು ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ತಜೂಲ್ ಇಸ್ಲಾಂ ನ್ಯಾಯಮಂಡಳಿಗೆ ಮನವಿ ಮಾಡಿದ್ದರು.

‘ಶೇಖ್ ಹಸೀನಾ ಹಾಗು ಅವರ ಅವಾಮಿ ಲೀಗ್ ಪಕ್ಷದ ಮುಖಂಡರ ವಿರುದ್ಧ ಕೊಲೆ, ಸಾಮೂಹಿಕ ಹತ್ಯೆ ಸೇರಿದಂತೆ ಈವರೆಗೂ 60 ದೂರುಗಳು ದಾಖಲಾಗಿವೆ.

ಹಸೀನಾ ಅವರ ಪುತ್ರ ಸಾಜೀದ್ ವಾಜೆದ್ ಅವರು ಕೆಲ ದಿನಗಳ ಹಿಂದೆ ಪ್ರತಿಕ್ರಿಯಿಸಿ, ‘ನಮ್ಮ ತಾಯಿ ಯಾವುದೇ ತಪ್ಪು ಮಾಡಿಲ್ಲ. ಆದರೂ ಬಾಂಗ್ಲಾದೇಶದಲ್ಲಿ ನಡೆಯುವ ತನಿಖೆಯನ್ನು ಅವರು ಎದುರಿಸಲಿದ್ದಾರೆ’ ಎಂದಿದ್ದರು.

1971ರ ನಂತರದಲ್ಲಿ ಬಾಂಗ್ಲಾದೇಶದಲ್ಲಿ ಅತ್ಯಂತ ಹಿಂಸಾಚಾರ ಸ್ವರೂಪ ಪಡೆದ ಪ್ರತಿಭಟನೆ ಆಗಸ್ಟ್ನಲ್ಲಿ ನಡೆಯಿತು. ಸುಮಾರು 700 ಜನ ಮೃತಪಟ್ಟು ಹಲವರು ಗಾಯಗೊಂಡರು. ಮೀಸಲಾತಿ ವಿಷಯವಾಗಿ ಆರಂಭವಾದ ಈ ಪ್ರತಿಭಟನೆಯು ಶೇಖ್ ಹಸೀನಾ ಅವರನ್ನು ದೇಶ ತೊರೆಯುವಂತೆ ಮಾಡಿತು. ಸದ್ಯ ಮಧ್ಯಂತರ ಸರ್ಕಾರ ಅಸ್ತಿತ್ವದಲ್ಲಿದೆ. ಅದರ ಮುಖ್ಯಸ್ಥರಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.