ಬೀಜಿಂಗ್: ಮೌಂಟ್ ಎವರೆಸ್ಟ್ ಪರ್ವತದ ಟಿಬೆಟ್ ವ್ಯಾಪ್ತಿಯ ವಲಯದಲ್ಲಿ ಭೂಮೇಲ್ಮೈ ಮತ್ತು ವಾಯುಮಂಡಲ ಸ್ಪಂದಿಸುವ ಸ್ವರೂಪವನ್ನು ಅವಲೋಕಿಸುವ ಕಾರ್ಯವನ್ನು ಚೀನಾ ಆರಂಭಿಸಿದೆ.

ಭೌಗೋಳಿಕ ಸ್ವರೂಪ ಮತ್ತು ತಾಪಮಾನ ವ್ಯವಸ್ಥೆ ಅಧ್ಯಯನದಲ್ಲಿ ಇದು ಪ್ರಮುಖ ಹೆಜ್ಜೆ. ಮಾನವರಹಿತ ವೈಮಾನಿಕ ಪರಿಕರಗಳನ್ನು ಬಳಸಿ ಮೌಂಟ್ ಎವರೆಸ್ಟ್‌ನ ಉತ್ತರ ಭಾಗದಲ್ಲಿ ಈ ಕಾರ್ಯ ನಡೆಯಲಿದೆ.

ಚೀನಾದ ವೈಮಾಂತರಿಕ್ಷ ಮಾಹಿತಿ ಅಧ್ಯಯನ ಸಂಸ್ಥೆಯ ಚೀನಾ ವಿಜ್ಞಾನ ಅಕಾಡೆಮಿಯ ಸಂಶೋಧಕರ ತಂಡವು, ಟಿಬೆಟ್‌ನ ಕ್ಯೂಮೂಲಾಂಗ್ಮಾದಲ್ಲಿ ಈ ಅಧ್ಯಯನ ಕಾರ್ಯವನ್ನು ನಡೆಸಲಿದೆ.

‘ಅಂದಾಜು 15,960 ಅಡಿ ಎತ್ತರದಲ್ಲಿ ಈ ಅಧ್ಯಯನ ಪ್ರಕ್ರಿಯೆಯು ನಡೆಯಲಿದೆ. ಕ್ಯೂಮೂಲಾಂಗ್ಮಾ ವಲಯದಲ್ಲಿ ಭೂಮೇಲ್ಮೈ ಮತ್ತು ವಾತಾವರಣ ನಡುವಿನ ಸಂವಹನವು ಕ್ವಿಂಘೈ–ಷಿಜಾಂಗ್ ಪ್ರಸ್ಥಭೂಮಿಯಷ್ಟೇ ಅಲ್ಲದೆ, ಆಸುಪಾಸಿನ ವಲಯದಲ್ಲೂ ತಾಪಮಾನದ ಮೇಲೆ ನಿರ್ಣಾಯಕ ಪರಿಣಾಮವನ್ನು ಬೀರಲಿದೆ’ ಎಂದು ಸಂಸ್ಥೆಯ ಸಂಶೋಧಕರಾದ ಜಿಯಾ ಲಿ ಅಭಿಪ್ರಾಯಪಟ್ಟರು.

ಹಿಮನದಿ ಮತ್ತು ಮಂಜುಗಡ್ಡೆಗಳು ಕ್ಷಿಪ್ರಗತಿಯಲ್ಲಿ ಕರಗಲು ಪೂರಕವಾಗಿ ಗಂಭೀರ ಸ್ವರೂಪದ ತಾಪಮಾನ ಬದಲಾವಣೆ ಹಿನ್ನೆಲೆಯಲ್ಲಿ ಈ ತಾಣವನ್ನು ಅಧ್ಯಯನಕ್ಕೆ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.

‘ಎವೆರೆಸ್ಟ್ ಆಸುಪಾಸಿನಲ್ಲಿನ ಸುಮಾರು 79 ಹಿಮನದಿಗಳ ವ್ಯಾಪ್ತಿ ಕಳೆದ ಆರು ದಶಕದಲ್ಲಿ ಸುಮಾರು 100 ಮೀಟರ್‌ನಷ್ಟು ಕುಗ್ಗಿದೆ. 2009ರ ನಂತರ ನದಿ ಕರಗುವ ವೇಗವೂ ಹೆಚ್ಚಿದೆ’ ಎಂದು ಅಂತರರಾಷ್ಟ್ರೀಯ ಸಮಗ್ರ ಶಿಖರ ಅಭಿವೃದ್ಧಿ ಕೇಂದ್ರವು (ಐಸಿಐಎಂಒಡಿ) 2003ರಲ್ಲಿ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.