ಬೀಜಿಂಗ್: ಪೆಸಿಫಿಕ್ ಮಹಾಸಾಗರದಲ್ಲಿ ಕೃತಕ ಸಿಡಿತಲೆಯೊಂದಿಗೆ ದೂರಗಾಮಿ ಖಂಡಾಂತರ ಕ್ಷಿಪಣಿಯ (ಐಸಿಬಿಎಂ) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಚೀನಾದ ರಕ್ಷಣಾ ಸಚಿವಾಲಯವು ಬುಧವಾರ ಪ್ರಕಟಿಸಿದೆ.

ಈ ಕ್ಷಿಪಣಿ ಉಡಾವಣೆಯು ನಿಗದಿತ ಗುರಿ ಮುಟ್ಟಿದ್ದು, ಶಸ್ತ್ರಾಸ್ತ್ರಗಳ ಕಾರ್ಯಕ್ಷಮತೆ ಮತ್ತು ಮಿಲಿಟರಿ ತರಬೇತಿ ಪರಿಣಾಮವನ್ನು ಪರೀಕ್ಷಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಾಡಿಕೆಯಂತೆ ವಾರ್ಷಿಕ ತರಬೇತಿ ಯೋಜನೆಯ ಅಡಿಯಲ್ಲಿ ಈ ಪರೀಕ್ಷೆ ನಡೆಸಲಾಗಿದ್ದು, ಸಂಬಂಧಪಟ್ಟ ದೇಶಗಳಿಗೆ ಮುಂಚಿತವಾಗಿ ಎಚ್ಚರಿಕೆ ನೀಡಲಾಗಿತ್ತು. ಕ್ಷಿಪಣಿಯು ಸಾಗರದಲ್ಲಿ ನಿಗದಿತ ಗುರಿಗೆ ಬಂದು ಅಪ್ಪಳಿಸಿದೆ ಎಂದು ಅದು ತಿಳಿಸಿದೆ.

ಅಂತರರಾಷ್ಟ್ರೀಯ ಕಾನೂನು ಮತ್ತು ಅಭ್ಯಾಸದ ಅನ್ವಯ ಪರೀಕ್ಷೆ ನಡೆಸಲಾಗಿದೆ. ಯಾವುದೇ ದೇಶ ಅಥವಾ ಪ್ರದೇಶವನ್ನು ಗುರಿಯಾಗಿಸಿಲ್ಲ ಎಂದು ಹೇಳಿದೆ.

ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಕ್ಷಿಪಣಿಗಳ ಪರೀಕ್ಷೆ ಹೆಚ್ಚುತ್ತಿರುವುದು ಕಂಡುಬಂದಿದೆ. ಈ ತಿಂಗಳಾರಂಭದಲ್ಲಿ ಉತ್ತರ ಕೊರಿಯಾ ಕಡಿಮೆ ದೂರಗಾಮಿ ಖಂಡಾಂತರ ಕ್ಷಿಪಣಿಗಳ ಪರೀಕ್ಷೆ ನಡೆಸಿತ್ತು.
.ಏಷ್ಯಾದ ಭವಿಷ್ಯಕ್ಕೆ ಭಾರತ-ಚೀನಾ ಬಾಂಧವ್ಯ ಅತಿ ಮುಖ್ಯ: ಜೈಶಂಕರ್.Quad Summit: ಚೀನಾ ನಮ್ಮನ್ನು ಪರೀಕ್ಷಿಸುತ್ತಿದೆ; ಹಾಟ್ ಮೈಕ್ನಲ್ಲಿ ಬೈಡನ್ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.