ನವದೆಹಲಿ: ಮಾನವ ನಿರ್ಮಿತ ಕಾರಣಗಳಿಂದ ಉಂಟಾಗಿರುವ ಜಾಗತಿಕ ಹವಾಮಾನ ಬದಲಾವಣೆ ಅಮೆಜಾನ್ ಕಾಡುಗಳಲ್ಲಿ ಬರೋಬ್ಬರಿ 20 ಪಟ್ಟು ಹೆಚ್ಚು ಕಾಡ್ಚಿಚ್ಚುಗಳು ಉಂಟಾಗಲು ಕಾರಣವಾಗಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

Earth System Science Data ಜರ್ನಲ್ನಲ್ಲಿ ಪ್ರಕಟವಾಗಿರುವ The State of Wildfires report ನಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.

2023ರ ಮಾರ್ಚ್ನಿಂದ 2024ರ ಫೆಬ್ರುವರಿವರೆಗೆ ಅಮೆಜಾನ್, ಕೆನಡಾ, ಗ್ರೀಸ್, ಹವಾಯಿ, ಚೀಲಿ ಕಾಡುಗಳಲ್ಲಿ ಉಂಟಾದ ಭೀಕರ ಕಾಡ್ಗಿಚ್ಚುಗಳನ್ನು ವಿವರವಾಗಿ ಅಧ್ಯಯನ ಮಾಡಿ ಹಲವಾರು ಆತಂಕಕಾರಿ ಸಂಗತಿಗಳನ್ನು ಈ ಅಧ್ಯಯನ ವರದಿಯಿಂದ ಕಂಡುಕೊಳ್ಳಲಾಗಿದೆ.

ಹವಾಮಾನ ಬದಲಾವಣೆಯಿಂದ ಕೆನಡಾ ಹಾಗೂ ಗ್ರೀಸ್ನಲ್ಲಿ ಒಂದು ವರ್ಷದಲ್ಲಿ ಮೂರು ಬಾರಿ ಕಾಡ್ಗಿಚ್ಚುಗಳು ಸಂಭವಿಸಿವೆ. ಇದು ಹಿಂದಿನ ಕಾಡ್ಚಿಚ್ಚುಗಳಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ಎಂದು ಹೇಳಿದೆ.

ಪ್ರಪಂಚದಾದ್ಯಂತ ಸಂಭವಿಸುತ್ತಿರುವ ಕಾಡ್ಗಿಚ್ಚುಗಳಿಂದ ಭೂಮಿಯ ಮೇಲೆ ಇಂಗಾಲದ ಹೊರಸೂಸುವಿಕೆಯೂ ಸರಾಸರಿಗಿಂತ ಶೇ 16 ರಷ್ಟು ಹೆಚ್ಚಾಗಿದೆ ಎಂದು ಬ್ರಿಟನ್ ಮತ್ತು ಬ್ರೆಜಿಲ್ನ ಸಂಶೋಧಕರನ್ನು ಒಳಗೊಂಡಿರುವ ಅಧ್ಯಯನ ತಂಡ ಹೇಳಿದೆ.

ಅಮೆಜಾನ್ ವಲಯದಲ್ಲಿ ಗಾಳಿಯ ಗುಣಮಟ್ಟ ತುಂಬಾ ಕೆಟ್ಟದಾಗುತ್ತಿದೆ. ಅಮೆಜಾನ್ ಹಾಗೂ ಕೆನಡಾ ಕಾಡುಗಳಲ್ಲಿ ಉಂಟಾಗುತ್ತಿರುವ ಕಾಡ್ಗಿಚ್ಚುಗಳಿಂದ ಭೂಮಿಯ ಹವಾಮಾನದ ಮೇಲೆ ಶಾಶ್ವತವಾದ ಪರಿಣಾಮ ಉಂಟಾಗುತ್ತಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ತಾಪಮಾನದ ಹೆಚ್ಚಳದಿಂದ ಕಾಡ್ಗಿಚ್ಚುಗಳು ಸಂಭವಿಸುವುದು ಸಹ ಹೆಚ್ಚಳವಾಗುತ್ತಿದೆ. ಇದು ಪರಿಸರ ಹಾಗೂ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟುಮಾಡುತ್ತಿದೆ ಎಂದು ಹೇಳಿದೆ.

ಅಮೆಜಾನ್ ವಲಯದಲ್ಲಿನ ಕೃಷಿ ಚಟುವಟಿಕೆಗಳ ವಿಸ್ತರಣೆಯೂ ಸಹ ಕಾಡ್ಗಿಚ್ಚುಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ವರದಿ ಹೇಳಿದೆ.
.ಒಡಿಶಾದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡ್ಗಿಚ್ಚು: 31 ಸ್ಥಳಗಳಲ್ಲಿ ಬೆಂಕಿ.ನಮ್ಮೂರಿನ ಬೆಟ್ಟಗಳ ಕಾಡದಿರಲಿ ಕಾಡ್ಗಿಚ್ಚು: ಯುವ ಮನಸ್ಸುಗಳ ಮನದ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.