ವಾಷಿಂಗ್ಟನ್: ಭಾರತ ರವಾನಿಸಿದಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ನ್ಯೂಜೆರ್ಸಿಯ ನೆವಾರ್ಕ್ ವಿಮಾನ ನಿಲ್ದಾಣಕ್ಕೆ ತಲುಪಿದೆ ಎಂದು ಅಮೆರಿಕದ ಭಾರತೀಯರಾಯಭಾರಿ ತರಂಜಿತ್ ಸಿಂಗ್ ಸಂಧು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಕೋವಿಡ್–19 ವಿರುದ್ಧ ಹೋರಾಟ ನಡೆಸುವ ಉದ್ದೇಶದಿಂದ ಮಿತ್ರ ರಾಷ್ಟ್ರ ಅಮೆರಿಕಕ್ಕೆ ಭಾರತ ಬೆಂಬಲ ಸೂಚಿಸಿದ್ದು, ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಇಂದು ನೆವಾರ್ಕ್ ವಿಮಾನ ನಿಲ್ದಾಣಕ್ಕೆ ತಲುಪಿದೆ’ ಎಂದು ಹೇಳಿದ್ದಾರೆ.

ಇತ್ತೀಚಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೊರೊಕ್ವಿನ್ ಮಾತ್ರೆಗಳನ್ನು ರಫ್ತು ಮಾಡುವಂತೆ ಬೇಡಿಕೆ ಇಟ್ಟಿದ್ದರು. ಇದೀಗ ಅಮೆರಿಕದ ಬೇಡಿಕೆಗೆ ಭಾರತ ಸ್ಪಂದಿಸಿದೆ.

ಇದನ್ನೂ ಓದಿ...ಬೇಕೇ ಬೇಕು ಹೈಡ್ರಾಕ್ಸಿಕ್ಲೋರೋಕ್ವಿನ್: ಇದೆಂಥ ಮದ್ದು? ಏಕಿಷ್ಟು ಬೇಡಿಕೆ?

ಹೈಡ್ರಾಕ್ಸಿಕ್ಲೊರೊಕ್ವಿನ್ ಮಾತ್ರೆಗಳು ಕೊರೊನಾ ವೈರಸ್ಸನ್ನು ಹಿಮ್ಮೆಟ್ಟಿಸಲು ಪರಿಣಾಮಕಾರಿಎಂದು ಹೇಳಲಾಗುತ್ತಿದೆ.

‘ಅಸಾಧಾರಣ ಸಂದರ್ಭದಲ್ಲಿ ಸ್ನೇಹಿತರ ನಡುವೆ ಇನ್ನೂ ಹೆಚ್ಚಿನ ಸಹಕಾರದ ಅಗತ್ಯವಿದೆ. ಎಚ್ಸಿಕ್ಯೂ ರವಾನಿಸುವ ನಿರ್ಧಾರಕೈಗೊಂಡ ಭಾರತೀಯರಿಗೆಧನ್ಯವಾದಗಳು. ಇದನ್ನುಮರೆಯಲಾಗುವುದಿಲ್ಲ! ಈ ಹೋರಾಟದಲ್ಲಿ ಭಾರತಕ್ಕೆ ಮಾತ್ರವಲ್ಲ, ಮಾನವೀಯತೆ ದೃಷ್ಠಿಯಿಂದ ಸಹಾಯ ಮಾಡಿದ ಪ್ರಬಲ ನಾಯಕತ್ವದ ಪಿಎಂ ಮೋದಿ ಅವರಿಗೂಧನ್ಯವಾದಗಳು!’ ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಅಮೆರಿಕದಲ್ಲಿ ಈ ವರೆಗೆ 20,577 ಮಂದಿ ಕೋವಿಡ್–19 ನಿಂದ ಮೃತಪಟ್ಟಿದ್ದಾರೆ. ಅಲ್ಲಿನ ಸೋಂಕಿತರ ಸಂಖ್ಯೆ ಸದ್ಯ 532,879 ಆಗಿದೆ. ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಮೆರಿಕ ಜಗತ್ತಿನಲ್ಲೇ ಭಾರಿ ಮುಂದಿದೆ. ಅಲ್ಲಿ ಈ ವರೆಗೆ 30,453 ಮಂದಿ ಗುಣಮುಖರಾಗಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದ ಉಂಟಾದ ಸಾವಿನ ಸಂಖ್ಯೆಯಲ್ಲಿ ಅಮೆರಿಕ ಇಟಲಿಯನ್ನು ಹಿಂದಿಕ್ಕಿದೆ. ಅದರೊಂದಿಗೆ ಅಮೆರಿಕದಲ್ಲಿ ಮಹಾಮಾರಿಗೆ ಜಗತ್ತಿನ ಇತರೆಲ್ಲ ರಾಷ್ಟ್ರಗಳಿಗಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಇನ್ನಷ್ಟು...

ಕೊರೊನಾ ವೈರಸ್ಗೆ ಮಲೇರಿಯಾ ಔಷಧ ಪರಿಣಾಮಕಾರಿ ಮದ್ದು?

ಪ್ರಕರಣಗಳ ಆಧಾರದಲ್ಲಿ ಮಲೇರಿಯಾ ನಿರೋಧಕ ಔಷಧ ರಫ್ತಿಗೆ ಭಾರತ ಸಮ್ಮತಿ

ಕೊರೊನಾಗೆ ಮಲೇರಿಯಾ ಔಷಧ ಉತ್ತಮ ಎಂದ ಟ್ರಂಪ್ ಹೇಳಿಕೆ ಹಿಂದೆ ಲಾಭದ ಆಸೆ?

ಮಲೇರಿಯಾ ನಿರೋಧಕ ಔಷಧ ಪೂರೈಸದಿದ್ದರೆ ಪ್ರತೀಕಾರ: ಭಾರತಕ್ಕೆ ಅಮೆರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.