ವಿಲ್ನಿಯಸ್: ಡಿಎಚ್ಎಲ್ನ ಸರಕು ಸಾಗಾಣೆ ವಿಮಾನವೊಂದು ಲಿಥುನಿಯಾದ ರಾಜಧಾನಿ ವಿಲ್ನಿಯಸ್ನಲ್ಲಿರುವ ವಿಮಾನ ನಿಲ್ದಾಣದ ಬಳಿ ಸೋಮವಾರ ಪತನಗೊಂಡಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ಪೂರ್ವ ಜರ್ಮನ್ನ ಲೀಪ್ಜಿಂಗ್ ನಗರದಿಂದ ವಿಲ್ನಿಯಸ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ವಿಮಾನವು ಪತನಗೊಂಡು ಮನೆಯೊಂದರ ಮೇಲೆ ಬಿದ್ದಿದೆ. ಅವಘಡದಿಂದಾಗಿ ಮನೆಗೆ ಬೆಂಕಿ ಹತ್ತಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ವಿಮಾನ ಪತನಕ್ಕೆ ಕಾರಣ ತಿಳಿದುಬಂದಿಲ್ಲ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪತನಗೊಂಡಿರುವ ವಿಮಾನವನ್ನು ತಮ್ಮ ಪಾಲುದಾರ ಸಂಸ್ಥೆ ಸ್ವಿಫ್ಟ್ಏರ್ ನಿರ್ವಹಿಸುತ್ತಿತ್ತು. ವಿಮಾನದಲ್ಲಿ ಸಮಸ್ಯೆ ಕಂಡುಬಂದ ಕಾರಣ ವಿಲ್ನಿಯಸ್ ವಿಮಾನ ನಿಲ್ದಾಣದ ಸಮೀಪ ತುರ್ತು ಭೂಸ್ಪರ್ಶ ಮಾಡಲು ಯತ್ನಿಸಲಾಗಿತ್ತು’ ಎಂದು ಜರ್ಮನ್ನ ಲಾಜಿಸ್ಟಿಕ್ ಕಂಪನಿ ಡಿಎಚ್ಎಲ್ ತಿಳಿಸಿದೆ.

ವಿಮಾನದಲ್ಲಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಆರೋಪದಡಿ ಲಿಥುನಿಯಾದ ಪೊಲೀಸರು ಇತ್ತೀಚೆಗೆ ಕೆಲವರನ್ನು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.