ಕೊಲಂಬೊ: ಈಸ್ಟರ್ ಭಾನುವಾರ ನಡೆದ ಆತ್ಮಾಹುತಿ ದಾಳಿ ಪ್ರಕರಣದ ತನಿಖೆ ನಡೆಸಿರುವ ಮೂವರು ಸದಸ್ಯರ ಸಮಿತಿಯು ಸೋಮವಾರ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ಅಂತಿಮ ವರದಿ ಸಲ್ಲಿಸಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಜಿತ್ ಮಲಲ್ಗೋಡಾ ನೇತೃತ್ವದ ಸಮಿತಿಯಲ್ಲಿ ರಕ್ಷಣಾ ಸಚಿವಾಲಯದ ಮಾಜಿ ಕಾರ್ಯದರ್ಶಿ ಪದ್ಮಸಿರಿ ಜಯಮನ್ನೆ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಎನ್.ಕೆ.ಇಳಾಂಗಕೂನ್ ಅವರು ಸದಸ್ಯರಾಗಿದ್ದಾರೆ.

ಪ್ರಕರಣದ ತನಿಖೆಗಾಗಿ ಮೈತ್ರಿಪಾಲ ಅವರು ಏಪ್ರಿಲ್ 22ರಂದು ಸಮಿತಿ ರಚಿಸಿದ್ದರು.

ಮಹಿಳೆ ಸೇರಿದಂತೆ ಒಂಬತ್ತು ಮಂದಿ ಆತ್ಮಾಹುತಿ ದಾಳಿಕೋರರು ಚರ್ಚ್ ಮತ್ತು ಐಷರಾಮಿ ಹೋಟೆಲ್ಗಳಲ್ಲಿ ನಡೆಸಿದ ದಾಳಿಯಲ್ಲಿ 258 ಮಂದಿ ಮೃತಪಟ್ಟಿದ್ದರು.

ದಾಳಿಯ ಹೊಣೆಯನ್ನು ಐಎಸ್ ಹೊತ್ತುಕೊಂಡಿತ್ತು. ಆದರೆ ಸ್ಥಳೀಯ ಉಗ್ರ ಸಂಘಟನೆ ನ್ಯಾಷನಲ್ ತೌಹೀದ್ ಜಮಾತ್ನ (ಎನ್ಟಿಜೆ) ಕೈವಾಡ ಇದೆ ಎಂದು ಸರ್ಕಾರ ಹೇಳಿತ್ತು.

ಈ ಸಂಬಂಧ ತಮಿಳು ಮಾಧ್ಯಮ ಶಾಲೆಯ ಶಿಕ್ಷಕ ಮತ್ತು ಪ್ರಾಂಶುಪಾಲ ಸೇರಿದಂತೆ 106 ಮಂದಿ ಶಂಕಿತರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.