ವಿಶ್ವಸಂಸ್ಥೆ: ಅಣ್ವಸ್ತ್ರ ನಿಷೇಧಿಸುವ ಒಪ್ಪಂದ ಶುಕ್ರವಾರ ಜಾರಿಗೆ ಬಂದಿದ್ದು, ಈ ಮೂಲಕ ವಿಶ್ವವನ್ನು ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಮುಕ್ತಗೊಳಿಸುವ ಐತಿಹಾಸಿಕ ಹೆಜ್ಜೆ ಇಡಲಾಗಿದೆ. ಆದರೆ, ಈ ಒಪ್ಪಂದವನ್ನು ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳು ವಿರೋಧಿಸಿವೆ.

ಅಣ್ವಸ್ತ್ರ ನಿಷೇಧ ಒಪ್ಪಂದ ಪ್ರಸ್ತುತ ಅಂತರರಾಷ್ಟ್ರೀಯ ಕಾನೂನಿನ ಭಾಗವಾಗಿದೆ. ಇದು ವಿಶ್ವದ ಎರಡನೇ ಮಹಾ ಯುದ್ಧದ ಕೊನೆಯಲ್ಲಿ ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಅಮೆರಿಕ ನಡೆಸಿದ ಪರಮಾಣು ಬಾಂಬ್ ದಾಳಿಯಂತಹ ಘಟನೆಗಳು ಪುನರಾವರ್ತನೆ ಆಗುವುದನ್ನು ತಪ್ಪಿಸುವುದ ಕ್ಕಾಗಿ ದಶಕಗಳಿಂದ ನಡೆಯುತ್ತಿರುವ ಅಭಿಯಾನದ ಪರಾಕಾಷ್ಠೆಯಾಗಿದೆ.

ಆದರೆ ಎಲ್ಲಾ ರಾಷ್ಟ್ರಗಳು ಅಣ್ವಸ್ತ್ರ ಎಂದಿಗೂ ಹೊಂದಿರಬಾರದು ಎಂಬ ಒಪ್ಪಂದವನ್ನು ಅಂಗೀಕರಿಸುವುದು ಬೆದರಿಕೆಯ ತಂತ್ರ ಎಂದೂ ವಾದಿಸಲಾಗುತ್ತಿದೆ.

ಜುಲೈ 2017 ರಲ್ಲಿ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಈ ಒಪ್ಪಂದವನ್ನು ಅಂಗೀಕರಿಸಿದಾಗ, 120 ಕ್ಕೂ ಹೆಚ್ಚು ರಾಷ್ಟ್ರಗಳು ಇದನ್ನು ಅನುಮೋದಿಸಿದವು. ಆದರೆ ಅಮೆರಿಕ, ರಷ್ಯಾ, ಬ್ರಿಟನ್, ಚೀನಾ, ಫ್ರಾನ್ಸ್, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಮತ್ತು ಇಸ್ರೇಲ್ನಂತಹ ಅಣ್ವಸ್ತ್ರಗಳನ್ನು ಹೊಂದಿರುವ ಅಥವಾ ಇದರ ತಿಳಿದಿರುವ ಒಂಬತ್ತು ದೇಶಗಳಲ್ಲಿ ಯಾವುವೂ ಈ ಒಪ್ಪಂದವನ್ನು ಬೆಂಬಲಿಸಲಿಲ್ಲ. ಜತೆಗೆ 30 ರಾಷ್ಟ್ರಗಳ ನ್ಯಾಟೊ ಮೈತ್ರಿಯನ್ನೂ ಸಹ ಬೆಂಬಲಿಸಲಿಲ್ಲ.

ಪರಮಾಣು ದಾಳಿಗೆ ತುತ್ತಾದ ವಿಶ್ವದ ಏಕೈಕ ರಾಷ್ಟ್ರ ಜಪಾನ್ ಸಹ ಈ ಒಪ್ಪಂದವನ್ನು ಬೆಂಬಲಿಸಲಿಲ್ಲ. 1945 ರಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಿಂದ ಬದುಕುಳಿದ ವಯಸ್ಸಾದವರು ಜಪಾನ್ನಲ್ಲಿದ್ದಾರೆ. ಆದರೂ, ಆ ದೇಶ ಈ ಒಪ್ಪಂದ ಬೆಂಬಲಿಸಲಿಲ್ಲ.

ಜಪಾನ್ ತನ್ನದೇ ಆದ ರೀತಿಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಮತ್ತು ಸ್ವಾಧೀನವನ್ನು ತೊರೆಯಲಿದೆ. ಆದರೆ ಪರಮಾಣು ಶಸ್ತ್ರಾಸ್ತ್ರ ಸಹಿತ ಮತ್ತು ರಹಿತ ರಾಜ್ಯಗಳೊಂದಿಗೆ ಒಪ್ಪಂದದ ನಿಷೇಧವನ್ನು ಅನುಸರಿಸುವುದು ವಾಸ್ತವಿಕವಲ್ಲ ಎಂದು ಸರ್ಕಾರ ಹೇಳಿದೆ.

ಅದೇನೇ ಇದ್ದರೂ, ಅಂತರರಾಷ್ಟ್ರೀಯ ಪರಮಾಣು ಶಸ್ತ್ರಾಸ್ತ್ರಗಳ ನಿರ್ಮೂಲನಾ ಅಭಿಯಾನದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಈ ಒಪ್ಪಂದವನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿದ ಬೀಟ್ರಿಸ್ ಫಿಹ್ನ್ ಅವರು ‘ಇದು ಅಂತರರಾಷ್ಟ್ರೀಯ ಕಾನೂನಿಗೆ, ವಿಶ್ವಸಂಸ್ಥೆಗೆ ಮತ್ತು ಹಿರೊಷಿಮಾ ನಾಗಸಾಕಿಯಲ್ಲಿ ಬದುಕುಳಿದವರಿಗೆ ನಿಜವಾಗಿಯೂ ದೊಡ್ಡ ದಿನ‘ ಎಂದು ಕರೆದಿದ್ದಾರೆ.

ಈ ಒಪ್ಪಂದಅಕ್ಟೋಬರ್ 24 ರಂದು ತನ್ನ 50 ನೇ ಅನುಮೋದನೆಯನ್ನು ಪಡೆದುಕೊಂಡಿದ್ದು, ಜನವರಿ 22ರಂದು ಜಾರಿಗೆ ಬಂದಿದೆ.

ಇದನ್ನೂ ಓದಿ:15 ಮಹತ್ವದ ಕಾರ್ಯಾದೇಶಗಳಿಗೆ ಬೈಡನ್ ಸಹಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.