ನ್ಯೂಯಾರ್ಕ್: ಇಸ್ರೇಲ್-ಹಿಜ್ಬುಲ್ಲಾ ನಡುವಣ ಸಂಘರ್ಷವನ್ನು ತಾತ್ಕಾಲಿಕವಾಗಿ ಶಮನಗೊಳಿಸಲು ಫ್ರಾನ್ಸ್ ಹಾಗೂ ಅಮೆರಿಕ ದೇಶಗಳು ಯತ್ನಿಸುತ್ತಿವೆ ಎಂದು ವರದಿಯಾಗಿದೆ.

'ಇಸ್ರೇಲ್-ಹಿಜ್ಬುಲ್ಲಾ ನಡುವೆ 21 ದಿನಗಳ ಕದನ ವಿರಾಮ ಪ್ರಸ್ತಾವದ ಕುರಿತಂತೆ ಫ್ರಾನ್ಸ್ ಹಾಗೂ ಅಮೆರಿಕ ಮಾತುಕತೆ ನಡೆಸುತ್ತಿವೆ' ಎಂದು ಫ್ರಾನ್ಸ್‌ನ ವಿದೇಶಾಂಗ ಸಚಿವ ಜೀನ್-ನೊಯೆಲ್ ಬ್ಯಾರಟ್ ತಿಳಿಸಿದ್ದಾರೆ.

ಕದನ ವಿರಾಮ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಎರಡೂ ಕಡೆಯವರು ಯಾವುದೇ ವಿಳಂಬ ಮಾಡದೇ ಒಪ್ಪಂದಕ್ಕೆ ಏರ್ಪಡುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಜೀನ್-ನೊಯೆಲ್ ಬ್ಯಾರಟ್ ತಿಳಿಸಿದ್ದಾರೆ.

'ಯುದ್ಧ ಅನಿವಾರ್ಯ ಎನಿಸಿದ್ದರೂ ಬಿಕ್ಕಟ್ಟು ಶಮನಕ್ಕೆ ರಾಜತಾಂತ್ರಿಕ ಮಾರ್ಗದ ಮೂಲಕ ಪರಿಹಾರ ಕಂಡುಹಿಡಿಯಲು ಎರಡೂ ಕಡೆಗಳ ಜತೆ ಸಮಾಲೋಚನೆ ನಡೆಸಲಾಗುವುದು' ಎಂದು ಅವರು ತಿಳಿಸಿದ್ದಾರೆ.

ವಿಶ್ವಸಂಸ್ಥೆಗೆ ಅಮೆರಿಕದ ಉಪ ರಾಯಭಾರಿ ಆಗಿರುವ ರಾಬರ್ಟ್ ವುಡ್ ಸಹ ಈ ಕುರಿತು ಪ್ರತಿಕ್ರಿಯಿಸಿದ್ದು, ರಾಜತಾಂತ್ರಿಕ ಮಾರ್ಗವಾಗಿ ವಿವಾದ ಬಗೆಹರಿಸಲು ಯತ್ನಿಸಲಾಗುವುದು ಎಂದು ಹೇಳಿದ್ದಾರೆ.

ಈ ಮುನ್ನ ಹೇಳಿಕೆ ನೀಡಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್, 'ಲೆಬನಾನ್‌ನಲ್ಲಿ ಸಂಘರ್ಷವನ್ನು ತಗ್ಗಿಸಲು ಮತ್ತು ಕದನ ವಿರಾಮ ಒಪ್ಪಂದಕ್ಕಾಗಿ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ' ಎಂದು ಹೇಳಿದ್ದರು.

ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಮಹಾ ಅಧಿವೇಶನದ ವೇಳೆ ಪ್ರಸ್ತಾವನೆಯನ್ನು ಇತರೆ ದೇಶಗಳು ಬೆಂಬಲಿಸುವಂತೆ ಅಮೆರಿಕ ಒತ್ತಾಯಿಸಿತ್ತು ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ್ದ ಬಾಂಬ್ ದಾಳಿಯಲ್ಲಿ 600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
.ಲೆಬನಾನ್ | ಹಿಜ್ಬುಲ್ಲಾ ಗುರಿಯಾಗಿಸಿ ಇಸ್ರೇಲ್ ದಾಳಿ; ಮೃತರ ಸಂಖ್ಯೆ 492ಕ್ಕೇರಿಕೆ.ಟೆಲ್ ಅವಿವ್ ಮೇಲೆ ಕ್ಷಿಪಣಿ ಉಡಾಯಿಸಿದ ಹಿಜ್ಬುಲ್ಲಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.