ಬಂಜುಲ್ (ಗಾಂಬಿಯಾ):ಭಾರತದ ಔಷಧ ತಯಾರಿಕ ಕಂಪನಿಯಕೆಮ್ಮು ಮತ್ತು ಶೀತ ಸಿರಪ್ ಸೇವನೆಯಿಂದ ಉಲ್ಬಣಿಸಿದ ಮೂತ್ರಪಿಂಡ ಸಮಸ್ಯೆಯಿಂದಾಗಿ ಮೃತಪಟ್ಟ ಮಕ್ಕಳ ಸಂಖ್ಯೆ 70ಕ್ಕೆ ಏರಿಕೆಯಾಗಿದೆ ಎಂದು ಗಾಂಬಿಯಾ ಸರ್ಕಾರ ಶುಕ್ರವಾರ ತಿಳಿಸಿದೆ.

ಪಶ್ಚಿಮ ಆಫ್ರಿಕಾದ ರಾಷ್ಟ್ರವಾಗಿರುವ ಗಾಂಬಿಯಾದ ಅಧ್ಯಕ್ಷ ಅದಮಬ್ಯಾರೋ, ಸಚಿವ ಸಂಪುಟದ ತುರ್ತು ಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ.

ಈ ಸಿರಪ್ ಅನ್ನುದೆಹಲಿ ಮೂಲದಮೈಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ತಯಾರಿಸಿದೆ ಎಂದು ತಿಳಿದುಬಂದಿದೆ. ಉತ್ತರ ಭಾರತದಲ್ಲಿ ಕಂಪೆನಿಯ ಒಂದು ಕೇಂದ್ರವನ್ನು ಮುಚ್ಚಲಾಗಿದೆ.ಈ ಬಗ್ಗೆ ಆರೋಗ್ಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಭಾರತದ ಕೆಮ್ಮಿನ ಸಿರಪ್ ಸೇವನೆ: ಗಾಂಬಿಯಾದಲ್ಲಿ 66 ಮಕ್ಕಳ ಸಾವು– ಆರೋಪ

ಸಾವಿನ ಬಗ್ಗೆ ಗಾಂಬಿಯಾ ಸರ್ಕಾರವೂ ತನಿಖೆ ನಡೆಸುತ್ತಿದೆ.

ಸಿರಪ್‌ಗಳನ್ನು ಹಿಂಪಡೆಯಲುಗಾಂಬಿಯಾದಲ್ಲಿ ಅಭಿಯಾನ ಪ್ರಾರಂಭವಾಗಿದೆ.ಆರೋಗ್ಯ ಸಚಿವಾಲಯವು ಅಲ್ಲಿನ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ನೂರಾರು ಯುವಕರ ತಂಡಗಳನ್ನು ರಚಿಸಿ,ಮನೆ ಮನೆಗೆ ತೆರಳಿ, ಕೆಮ್ಮಿನ ಸಿರಪ್‌ನ ಸೀಸೆಗಳನ್ನು ಸಂಗ್ರಹಿಸುತ್ತಿದೆ.

‘ಭಾರತದ ಕಂಪನಿಯೊಂದು ತಯಾರಿಸಿರುವ ನಾಲ್ಕು ಕಲುಷಿತ ಕಫ್ ಸಿರಪ್‌ಗಳನ್ನು (ಕೆಮ್ಮು ನಿವಾರಕ) ಸೇವಿಸಿ ಪಶ್ಚಿಮ ಆಫ್ರಿಕಾದಲ್ಲಿನ ಗಾಂಬಿಯಾ ದೇಶದ 65ಕ್ಕೂ ಹೆಚ್ಚುಮಕ್ಕಳು ಸಾವಿಗೀಡಾಗಿದ್ದಾರೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಅ.12 ರಂದು (ಬುಧವಾರ) ಹೇಳಿತ್ತು.

ಇದನ್ನೂ ಓದಿ:ಗ್ಯಾಂಬಿಯಾದಲ್ಲಿ 60 ಮಕ್ಕಳ ಸಾವು: ಭಾರತದ ಔಷಧಿಗಳ ತನಿಖೆಗೆ ಮುಂದಾದ ಡಬ್ಯುಎಚ್ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.