ವಾಷಿಂಗ್ಟನ್: ಇಂಡೊ ಫೆಸಿಫಿಕ್ ವಲಯವನ್ನು ಮುಕ್ತಗೊಳಿಸುವ ತನ್ನ ಚಿಂತನೆಯ ಕೇಂದ್ರಬಿಂದುವಾಗಿ ಭಾರತದ ಜೊತೆಗಿನ ಸಹಭಾಗಿತ್ವವನ್ನು ಅಮೆರಿಕ ಎದುರು ನೋಡಲಿದೆ ಎಂದು ಅಮೆರಿಕ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ಪ್ರತಿಪಾದಿಸಿದ್ದಾರೆ.

ರಕ್ಷಣಾ ಇಲಾಖೆಯ ಸಹಾಯಕ ಕಾರ್ಯದರ್ಶಿ (ಇಂಡೊ ಫೆಸಿಫಿಕ್ ಭದ್ರತಾ ವ್ಯವಹಾರಗಳು) ಡಾ.ಎಲಿ ಎಸ್.ರಟ್ನೇರ್ ಅವರು, ‘ಭಾರತದ ರಕ್ಷಣಾ ಸೌಲಭ್ಯಗಳ ಆಧುನೀಕರಣ ಕಾರ್ಯವನ್ನು ಅಮೆರಿಕ ಬೆಂಬಲಿಸಲಿದೆ’ ಎಂದು ಹೇಳಿದರು.

ಈ ವಲಯದಲ್ಲಿ ಪ್ರಾಬಲ್ಯ ಹೊಂದುವ ಚೀನಾದ ಮನೋಭಾವದ ಹಿನ್ನೆಲೆಯಲ್ಲಿ ‘ಶಕ್ತಿಯ ಸಮತೋಲನ’ವನ್ನು ಕಾಯ್ದುಕೊಳ್ಳಲು ಭಾರತದ ಸಾಮರ್ಥ್ಯಕ್ಕೆ ಸ್ಪಷ್ಟ ರೂಪ ನೀಡಲು ದೂರದೃಷ್ಟಿಯೊಂದಿಗೆ ಭಾರತದ ಜೊತೆಗಿನ ಸಹಭಾಗಿತ್ವವನ್ನು ಬಲಪಡಿಸುತ್ತಿದೆ ಎಂದರು.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ರಕ್ಷಣಾ ಇಲಾಖೆ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರನ್ನು ಸೋಮವಾರ ಪೆಂಟಗನ್ನಲ್ಲಿ ಭೇಟಿಯಾಗುವರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಈಚೆಗೆ ಆಸ್ಟಿನ್ ದೂರವಾಣಿಯಲ್ಲಿ ಚರ್ಚಿಸಿದ್ದರು.

ಒಟ್ಟಾರೆ, ಭಾರತ ಮತ್ತು ಅಮೆರಿಕ ನಡುವಣ ಬಾಂಧವ್ಯ ಹಿಂದಿಗಿಂತಲೂ ಈಗ ಹೆಚ್ಚು ಬಲಯುತಗೊಳ್ಳುತ್ತಿದೆ. ಭಾರತ, ಅಮೆರಿಕ ಮತ್ತು ವಿಶ್ವದ ಅನೇಕ ರಾಷ್ಟ್ರಗಳು ಇಂಡೊ ಫೆಸಿಫಿಕ್ ವಲಯವನ್ನು ಮುಕ್ತವಾಗಿರಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.