ಬಾಲಿ: ಆ್ಯಪಲ್ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಐಫೋನ್ 16 ಸರಣಿಯ ಸ್ಮಾರ್ಟ್ಫೋನ್ಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದೆ ಎಂದು ವರದಿಯಾಗಿದೆ.

ದೇಶದ ಕೈಗಾರಿಕಾ ಸಚಿವ ಅಗಸ್ ಗುಮಿವಾಂಗ್ ಕರ್ಟಾಸಸ್ಮಿಟಾ ಅವರು ಈ ಘೋಷಣೆ ಮಾಡಿದ್ದಾರೆ. ದೇಶದೊಳಗೆ ಐಫೋನ್ 16 ಬಳಕೆ ಅಕ್ರಮ ಎಂದು ಘೋಷಿಸಿದ್ದಾರೆ. ನಿಷೇಧಿತ ವಸ್ತುವನ್ನು ವಿದೇಶಗಳಿಂದ ತರಿಸಿಕೊಂಡರೂ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವುದು, ಇಂಡೊನೇಷ್ಯಾ ಪ್ರವಾಸ ಕೈಗೊಳ್ಳಬೇಕೆಂದಿರುವ ಐಫೋನ್ ಹೊಂದಿರುವ ಪ್ರವಾಸಿಗರನ್ನು ಗೊಂದಲದಲ್ಲಿ ನೂಕಿದೆ.

ಕರ್ಟಸಸ್ಮಿಟಾ ಅವರ ಪ್ರಕಾರ, ನೂತನ ಐಫೋನ್ನ ಅಂತರರಾಷ್ಟ್ರೀಯ ಮೊಬೈಲ್ ಸಾಧನ ಗುರುತಿಸುವಿಕೆ ಸಂಖ್ಯೆ (ಐಎಂಇಐ) ಪ್ರಮಾಣಪತ್ರವನ್ನು ಇಂಡೊನೇಷ್ಯಾ ಮಾನ್ಯ ಮಾಡಿಲ್ಲ. ಹೀಗಾಗಿ ಈ ಸಾಧನವು ದೇಶದಲ್ಲಿ ಅಕ್ರಮ ವಸ್ತು. ಈ ಕುರಿತು ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಮಾಹಿತಿ ನೀಡಿ ಎಂದಿದ್ದಾರೆ.

ಐಫೋನ್ 16 ನಿಷೇಧಿಸಲು ಕಾರಣವೇನು?

ಈ ನಿಷೇಧದ ಹಿಂದೆ ಆ್ಯಪಲ್ ಕಂಪನಿಯು ಇಂಡೊನೇಷ್ಯಾದಲ್ಲಿನ ತನ್ನ ಹೂಡಿಕೆಯನ್ನು ಪೂರ್ಣಗೊಳಿಸದಿರುವುದೇ ಕಾರಣ ಎಂದೆನ್ನಲಾಗಿದೆ. ಆ್ಯಪಲ್ ಕಂಪನಿಯು ಇಂಡೊನೇಷ್ಯಾದಲ್ಲಿ 1.71 ಟ್ರಿಲಿಯನ್ ರುಪಿಯಾ (₹916 ಕೋಟಿ) ಹೂಡುವ ವಾಗ್ದಾನ ಮಾಡಿತ್ತು. ಆದರೆ 1.48 ಟ್ರಿಲಿಯನ್ ರುಪಿಯಾ (₹798 ಕೋಟಿ) ಹೂಡಿತ್ತು. ಆದರೆ ಒಪ್ಪಂದದಂತೆ ₹118 ಕೋಟಿಯಷ್ಟು ಹೂಡಿಕೆ ಮಾಡಿರಲಿಲ್ಲ. ಈ ಕಾರಣಕ್ಕಾಗಿ ಐಫೋನ್ 16ರ ಮಾರಾಟ ಮತ್ತು ಬಳಕೆಗೆ ಅಲ್ಲಿನ ಸರ್ಕಾರ ಮಾನ್ಯತೆ ನೀಡಿರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆ್ಯಪಲ್ನ ಸಿಇಒ ಟಿಮ್ ಕುಕ್ ಅವರು ಇತ್ತೀಚೆಗೆ ಜಕಾರ್ತಕ್ಕೆ ಭೇಟಿ ನೀಡಿ ಇಂಡೊನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಅವರೊಂದಿಗೆ ಹೂಡಿಕೆ ಕುರಿತು ಚರ್ಚಿಸಿದ್ದರು. ಈ ಚರ್ಚೆಯಂತೆ ಕಂಪನಿ ಹೂಡಿಕೆ ಮಾಡದಿರುವುದೇ ಐಫೋನ್ 16ರ ಮೇಲಿನ ನಿಷೇಧಕ್ಕೆ ಕಾರಣವಾಗಿದೆ ಎಂದೆನ್ನಲಾಗಿದೆ.

ಇಂಡೊನೇಷ್ಯಾದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ತೆರೆಯುವ ಒಪ್ಪಂದವನ್ನು ಇಂಡೊನೇಷ್ಯಾ ಸರ್ಕಾರದೊಂದಿಗೆ ಮಾಡಿಕೊಂಡಿತ್ತು. ಇದರನ್ವಯ ಐಫೋನ್ನಲ್ಲಿ ಬಳಕೆಯಾಗುವ ಶೇ 40ರಷ್ಟು ಉಪಕರಣಗಳು ಸ್ಥಳೀಯವಾಗಿ ಉತ್ಪಾದಿಸಿದ್ದಾಗಿರಬೇಕು. ಹೀಗಿದ್ದರೆ ಮಾತ್ರ ಕಂಪನಿಯ ಕಾರ್ಯಾಚರಣೆಗೆ ಮಾನ್ಯತೆ ನೀಡುವುದಾಗಿ ಅಲ್ಲಿನ ಸರ್ಕಾರ ಹೇಳಿತ್ತು.

ಪ್ರವಾಸಕ್ಕೂ ಮುನ್ನ ಇರಲಿ ಈ ಸಿದ್ಧತೆ

ಹೀಗಾಗಿ ಇಂಡೊನೇಷ್ಯಾ ಪ್ರವಾಸ ಬಯಸುವ ನೂತನ ಐಫೋನ್ 16 ಸರಣಿಯ ಸ್ಮಾರ್ಟ್ಫೋನ್ಗಳನ್ನು ಹೊಂದಿರುವವರು ಐಫೋನ್ನ ಹಿಂದಿನ ಸರಣಿಯ ಫೋನ್ಗಳನ್ನು ಅಥವಾ ಇತರ ಕಂಪನಿಯ ಫೋನ್ಗಳನ್ನು ಕೊಂಡೊಯ್ಯುವುದು ಸೂಕ್ತ.

ಇಂಡೊನೇಷ್ಯಾದ ವಿಮಾನ ನಿಲ್ದಾಣ ಹಾಗೂ ಕೆಲ ಪ್ರಮುಖ ಪ್ರವಾಸಿ ತಾಣಗಳಲ್ಲಿ ಬಗೆಬಗೆಯ ಸ್ಮಾರ್ಟ್ಫೋನ್ ಹಾಗೂ ಪೋರ್ಟಬಲ್ ವೈಫೈ ಲಭ್ಯ. ಇದನ್ನು ಬಳಸಬಹುದು ಎಂದು ಕೆಲವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.