ವಾಷಿಂಗ್ಟನ್: ಮುಂದಿನ 30 ದಿನಗಳಲ್ಲಿ ಗಜಾಗೆ ಮಾನವೀಯ ನೆರವಿನ ಪ್ರಮಾಣವನ್ನು ಹೆಚ್ಚಿಸಬೇಕು ಇಲ್ಲದಿದ್ದರೆ ಅಮೆರಿಕದಿಂದ ಸಿಗುತ್ತಿರುವ ಶಸ್ತ್ರಾಸ್ತ್ರಗಳ ನೆರವನ್ನು ಕಳೆದುಕೊಳ್ಳಬೇಕಾದಿತು ಎಂದು ಜೋ ಬೈಡನ್ ಆಡಳಿತ ಇಸ್ರೇಲ್ಗೆ ಎಚ್ಚರಿಕೆ ನೀಡಿದೆ.
.ಲೆಬನಾನ್ ಮೇಲೆ ಇಸ್ರೇಲ್ ದಾಳಿ; 18 ಸಾವು, ನಾಲ್ವರಿಗೆ ಗಾಯ.
ಈ ಬಗ್ಗೆ ಇಸ್ರೇಲ್ಗೆ ಪತ್ರ ಬರೆದಿರುವ ಅಮೆರಿಕ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಹಾಗೂ ಭದ್ರತಾ ಕಾರ್ಯದರ್ಶಿ ಲಾಯ್ಡ್ ಅಸ್ಟಿನ್, ‘ಬದಲಾವಣೆ ಕಡ್ಡಾಯವಾಗಿ ಆಗಲೇಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.

ದಕ್ಷಿಣ ಗಾಜಾದಲ್ಲಿ ಬಿಗಡಾಯಿಸುತ್ತಿರುವ ಪರಿಸ್ಥಿತಿ ಹಾಗೂ ಕೇಂದ್ರ ಗಾಜಾದ ಆಸ್ಪತ್ರೆ ಮೇಲೆ ದಾಳಿಯಿಂದಾಗಿ ನಾಲ್ವರು ಸಾವಿಗೀಡಾಗಿ ಹಲವು ಮಂದಿ ಗಾಯಗೊಂಡ ಬೆನ್ನಲ್ಲೇ ಅಮೆರಿಕ ಈ ಎಚ್ಚರಿಕೆ ನೀಡಿದೆ. ಮಾನವೀಯ ನೆರವು ಹಾಗೂ ಶಸ್ತ್ರಾಸ್ತ್ರ ಪೂರೈಕೆ ಬಗ್ಗೆ ಅಮೆರಿಕ ನಿಲುವಿನ ಬಗ್ಗೆ ಪತ್ರದಲ್ಲಿ ಉಲ್ಲಖಿಸಲಾಗಿದೆ.
.ಇಸ್ರೇಲ್ ಭದ್ರತೆಗೆ ಅಮೆರಿಕದ ಬದ್ಧತೆಯನ್ನು ಪುನರುಚ್ಚರಿಸಿದ ಬೈಡನ್.
ಆದರೆ ‘ಇದು ಬೆದರಿಕೆ ಪತ್ರವಲ್ಲ’ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಕಿರ್ಬಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಗಾಜಾದಲ್ಲಿ ಮಾನವೀಯ ನೆರವನ್ನು ಹೆಚ್ಚಿಸಬೇಕು ಎನ್ನುವುದರ ಅನಿವಾರ್ಯತೆ ಹಾಗೂ ತುರ್ತನ್ನು ಮನದಟ್ಟು ಮಾಡಲು ಈ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಪತ್ರ ಲಭಿಸಿರುವ ಬಗ್ಗೆ ಇಸ್ರೇಲ್ ಮೂಲಗಳಿಂದ ಮಾಹಿತಿ ಲಭಿಸಿದ್ದು, ಅದರಲ್ಲಿರುವ ವಿಷಯಗಳ ಬಗ್ಗೆ ಚರ್ಚೆ ನಡೆಸಿಲ್ಲ ಎಂದಿವೆ. ‘ಅಮೆರಿಕವು ಮಾನವೀಯ ಆತಂಕಗಳನ್ನು ವ್ಯಕ್ತಪಡಿಸಿದ್ದು, ಗಾಜಾಕ್ಕೆ ಸಿಗಬೇಕಿರುವ ನೆರವನ್ನು ತ್ವರಿತವಾಗಿಸುವ ಬಗ್ಗೆ ಪತ್ರದಲ್ಲಿ ಒತ್ತಡ ಹೇರಲಾಗಿದೆ’ ಎಂದು ಹೆಸರು ಗೋಪ್ಯವಾಗಿಡಬೇಕು ಎನ್ನುವ ಷರತ್ತಿನೊಂದಿಗೆ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
.ಗಾಜಾದಲ್ಲಿ ನಿಲ್ಲದ ಇಸ್ರೇಲ್ ದಾಳಿ: ಆಹಾರ ಸಿಗದೆ ಹಸಿವಿನಿಂದ ಜನ ಕಂಗಾಲು.
ಪ್ಯಾಲೆಸ್ಟೀನ್ಲ್ಲಿ ಮಾನವೀಯ ನೆರವುಗಳನ್ನು ಹೆಚ್ಚಿಸಬೇಕು ಎಂದು ಆ್ಯಂಟನಿ ಬ್ಲಿಂಕನ್ ಏಪ್ರಿಲ್ನಲ್ಲಿಯೂ ಇಂತಹದ್ದೇ ಪತ್ರವನ್ನು ಇಸ್ರೇಲ್ ಅಧಿಕಾರಿಗಳಿಗೆ ಬರೆದಿದ್ದರು ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಮಂಗಳವಾರ ಹೇಳಿದ್ದಾರೆ. ಆದರೆ ಅದು ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
.ಹಿಜ್ಬುಲ್ಲಾ ಕಮಾಂಡರ್ ಸುಹೇಲ್ ಹುಸೇನ್ ಹುಸೇನಿ ಹತ್ಯೆ : ಇಸ್ರೇಲ್ ಸೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.