ಕೇಪ್ ಕ್ಯಾನವೆರಲ್: ಪರ್ಸವರೆನ್ಸ್ ರೋವರ್ ಅನ್ನು ಮಂಗಳ ಗ್ರಹದ ಮೇಲಿಳಿಸಲು ಬಳಸಿದ ಪ್ಯಾರಾಚೂಟ್, ಗೌಪ್ಯ ಸಂದೇಶವೊಂದನ್ನು ಒಳಗೊಂಡಿದ್ದು, ಇದು ಖಗೋಳ ವಿಜ್ಞಾನ ಪ್ರಿಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಪದಬಂಧ ಪ್ರಿಯರೂ ಆಗಿರುವ, ರೋವರ್ ನಿರ್ವಹಣೆ ತಂಡದಲ್ಲಿರುವ ಸಿಸ್ಟಮ್ ಎಂಜಿನಿಯರ್ ಇಯಾನ್ ಕ್ಲಾರ್ಕ್ ಈ ಗೌಪ್ಯ ಸಂದೇಶ ಅಳವಡಿಸಿದ್ದಾರೆ.

ಕಿತ್ತಳೆ ಮತ್ತು ಬಿಳಿ ಬಣ್ಣದ ಪಟ್ಟಿಗಳನ್ನು ಒಳಗೊಂಡಿರುವ ಪ್ಯಾರಾಚೂಟ್ನಲ್ಲಿ ಬೈನರಿ ಕೋಡ್ ಬಳಸಿ ಕ್ಲಾರ್ಕ್ ಅವರು ‘ಡೇರ್ ಮೈಟಿ ಥಿಂಗ್ಸ್’ ಎಂದು ಬರೆದಿದ್ದಾರೆ. ಈ ಸಂಕೇತಾಕ್ಷರಗಳ ವಿಶ್ಲೇಷಣೆಗಾಗಿ, ಕ್ಯಾಲಿಫೋರ್ನಿಯಾದ ಪಸಡೇನಾದಲ್ಲಿರುವ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ (ಜೆಪಿಎಲ್) ಅವರು ಜಿಪಿಎಸ್ ಆಧಾರಿತ ವ್ಯವಸ್ಥೆಯೊಂದನ್ನು ಸಹ ಅಳವಡಿಸಿದ್ದಾರೆ.

‘ಡೇರ್ ಮೈಟಿ ಥಿಂಗ್ಸ್’ ಎಂಬುದು ಅಮೆರಿಕದ ಮಾಜಿ ಅಧ್ಯಕ್ಷ ಥಿಯೋಡರ್ ರೂಸ್ವೆಲ್ಟ್ ಅವರ ಪ್ರಸಿದ್ಧ ಹೇಳಿಕೆ. ಇದು ಜೆಪಿಎಲ್ನ ಧ್ಯೇಯವಾಕ್ಯವೂ ಆಗಿದ್ದು, ಇಲ್ಲಿನ ಗೋಡೆಗಳ ಮೇಲೆಯೂ ಬರೆಯಲಾಗಿದೆ.

‘ಈ ಗೌಪ್ಯ ಸಂದೇಶದ ಬಗ್ಗೆ ಆರು ಜನರಿಗೆ ಮಾತ್ರ ತಿಳಿದಿತ್ತು. ರೋವರ್ ಮಂಗಳನಲ್ಲಿ ಇಳಿದ ನಂತರ ಭೂಮಿಗೆ ತಲುಪಿದ ಚಿತ್ರಗಳನ್ನು ವಿಶ್ಲೇಷಿಸಿ, ಈ ಗೌಪ್ಯ ಸಂದೇಶವನ್ನು ಭೇದಿಸಲು ಹಲವರಿಗೆ ಗಂಟೆಗಳೇ ಬೇಕಾದವು’ ಎಂದೂ ಕ್ಲಾರ್ಕ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.