ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐರ್ಲೆಂಡ್‌ನಲ್ಲಿ 2ನೇ ಮಹಾಯುದ್ಧ ಕಾಲದ ಬಾಂಬ್ ಪತ್ತೆ; 400 ಕುಟುಂಬಗಳ ತೆರವು

Published : 18 ಆಗಸ್ಟ್ 2024, 15:24 IST
Last Updated : 18 ಆಗಸ್ಟ್ 2024, 15:24 IST
ಫಾಲೋ ಮಾಡಿ
Comments

ಬೆಲ್‌ಫಾಸ್ಟ್‌: ಎರಡನೇ ಮಹಾಯುದ್ಧ ಕಾಲದ್ದು ಎಂದು ಶಂಕಿಸಲಾದ ಬಾಂಬ್‌ ಉತ್ತರ ಐರ್ಲೆಂಡ್‌ನಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಕುಟುಂಬಗಳಿಗೆ ಮನೆಗಳನ್ನು ತೊರೆಯಲು ಅಲ್ಲಿನ ಪೊಲೀಸರು ಸೂಚಿಸಿದ್ದಾರೆ.

ಬಾಂಬ್‌ ತೆರವು ಕಾರ್ಯಾಚರಣೆಗೆ ಐದು ದಿನಕ್ಕಿಂತಲೂ ಹೆಚ್ಚು ಸಮಯ ಬೇಕಾಗಬಹುದು ಎಂದು ಹೇಳಲಾಗಿದೆ.

ಶಂಕಿತ ಸಾಧನವು 'ಕೌಂಟಿ ಡೌನ್‌' ಪ್ರದೇಶದ ನ್ಯೂಟೌನಾರ್ಡ್ಸ್‌ ಪಟ್ಟಣದಲ್ಲಿ ಶುಕ್ರವಾರ ಪತ್ತೆಯಾಗಿದೆ. ಆ ಸ್ಥಳ ಬೆಲ್‌ಫಾಸ್ಟ್‌ನಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ.

ಜನರ ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಲಾಗಿದೆ. ಅಪಾಯವನ್ನು ತಂದುಕೊಳ್ಳಲಾಗದು. ಇಂತಹ ಸಂದರ್ಭದಲ್ಲಿ ಸಹಕಾರ ನೀಡುತ್ತಿರುವ ಜನರಿಗೆ ಧನ್ಯವಾದಗಳು ಎಂದು ಅಧಿಕಾರಿಗಳು ಹೇಳಿದ್ದಾರೆ.

ಶಂಕಿತ ಬಾಂಬ್‌ ಪತ್ತೆಯಾಗಿರುವ ಪ್ರದೇಶಕ್ಕೆ ಯಾರೂ ಹೋಗದಂತೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ.

ಮನೆಗಳನ್ನು ತೊರೆಯುತ್ತಿರುವವರಿಗಾಗಿ ತುರ್ತು ನೆರವು ಕೇಂದ್ರ ತೆರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT