ವಾಷಿಂಗ್ಟನ್: ಚಂದ್ರ, ಕ್ಷುದ್ರಗ್ರಹಗಳು ಮತ್ತು ಮಂಗಳ ಗ್ರಹದ ಉಪಗ್ರಹದ ಸುತ್ತಮುತ್ತಲಿನ ವಾತಾವರಣ ಕುರಿತು ಸಂಶೋಧನೆ ಕೈಗೊಳ್ಳಲು ಅಮೆರಿಕ ಬಾಹ್ಯಾಕಾಶ ಸಂಸ್ಥೆ ‘ನಾಸಾ’ಎಂಟು ಸಂಶೋಧನಾ ತಂಡಗಳನ್ನು ಆಯ್ಕೆ ಮಾಡಿದೆ.

ಸೌರಮಂಡಲ ಸಂಶೋಧನಾ ಸಂಸ್ಥೆ (ಎಸ್ಎಸ್ಇಆರ್ವಿಐ) ಈ ತಂಡಕ್ಕೆ ಐದು ವರ್ಷಗಳ ಕಾಲ ನೆರವು ನೀಡಲಿದೆ. ಈ ಸಂಶೋಧನೆಗೆ 1.05 ಕೋಟಿ ಡಾಲರ್(₹72.39ಕೋಟಿ) ವೆಚ್ಚವಾಗಲಿದೆ ಎಂದು ನಾಸಾ ತಿಳಿಸಿದೆ.

‘ಈ ಸಂಶೋಧನೆಯಿಂದ ಭವಿಷ್ಯದಲ್ಲಿ ಸೌರಮಂಡಲದ ಹೆಚ್ಚಿನ ಅಧ್ಯಯನಕ್ಕೆ ಪೂರಕವಾಗಲಿದೆ’ ಎಂದು ನಾಸಾದ ಗ್ರಹಗಳ ವಿಜ್ಞಾನ ವಿಭಾಗದ ನಿರ್ದೇಶಕ ಲೋರಿ ಗ್ಲೇಜ್ ತಿಳಿಸಿದ್ದಾರೆ.

ಪರಿಸರದಲ್ಲಿನ ವಿಕಿರಣಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಈ ತಂಡಗಳು ವಿಶ್ಲೇಷಣೆ ನಡೆಸಲಿವೆ ಎಂದು ನಾಸಾ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.