ಸೋಲ್: ಅಮೆರಿಕ ಮತ್ತು ದಕ್ಷಿಣ ಕೊರಿಯಾ ದೇಶಗಳ ಮೇಲೆ ಕಣ್ಗಾವಲು ಇರಿಸುವ ಸಲುವಾಗಿ ಉತ್ತರ ಕೊರಿಯಾವು ಸೋಮವಾರ ಗೂಢಚಾರ ಉಪಗ್ರಹ ಉಡಾವಣೆ ಮಾಡಿತ್ತು. ಆದರೆ ಉಪಗ್ರಹ ಹೊತ್ತೊಯ್ದ ರಾಕೆಟ್ ಸ್ಫೋಟಗೊಂಡಿದ್ದು, ಕಾರ್ಯಯೋಜನೆ ವಿಫಲವಾಗಿದೆ ಎಂದು ಉತ್ತರ ಕೊರಿಯಾದ ಸುದ್ದಿಸಂಸ್ಥೆ ತಿಳಿಸಿದೆ.

ಈ ಉಪಗ್ರಹ ಉಡಾವಣೆಯ ಬಳಿಕ ಇದೇ ರೀತಿಯ ಇತರ ಮೂರು ಗೂಢಚಾರ ಉಪಗ್ರಹಗಳನ್ನು 2024ರ ಇಸವಿಯೊಳಗೆ ಉಡಾವಣೆ ಮಾಡಲು ಉತ್ತರ ಕೊರಿಯಾದ ನಾಯಕ ಕಿಮ್ ಜಾನ್ ಉನ್ ಯೋಜನೆ ಹಾಕಿಕೊಂಡಿದ್ದರು. ಈ ಉಪಗ್ರಹ ಉಡಾವಣೆ ವೈಫಲ್ಯದಿಂದ ಕಿಮ್‌ಗೆ ಹಿನ್ನೆಡೆಯಾಗಿದೆ ಎಂದೇ ವಿಶ್ಲೇಷಿಸಲಾಗಿದೆ.

ಉಪಗ್ರಹ ಹೊತ್ತ ರಾಕೆಟ್ ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ಸ್ಫೋಟಗೊಂಡಿದೆ ಎಂದು ಉತ್ತರ ಕೊರಿಯಾದ ಅಧಿಕೃತ ಸುದ್ದಿಸಂಸ್ಥೆ ತಿಳಿಸಿದೆ.

ತನ್ನ ಪ್ರಮುಖ ಮಿತ್ರದೇಶವಾದ ಚೀನಾವು ದಕ್ಷಿಣ ಕೊರಿಯ ಮತ್ತು ಜಪಾನ್ ಜೊತೆ ಉನ್ನತ ಮಟ್ಟದ ರಾಜತಾಂತ್ರಿಕ ಸಭೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿಯೇ ಉತ್ತರ ಕೊರಿಯಾ ಈ ಉಪಗ್ರಹ ಉಡಾವಣೆ ಮಾಡಿತ್ತು. ಅದೂ ಅಲ್ಲದೆ, ಈ ಮಾದರಿಯ ಉಪಗ್ರಹಗಳನ್ನು ಉಡಾಯಿಸುವಂತಿಲ್ಲ ಎಂದು ವಿಶ್ವಸಂಸ್ಥೆ ಹೇರಿದ್ದ ನಿರ್ಬಂಧವನ್ನೂ ಅದು ಉಲ್ಲಂಘಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.