ಹಾಂಕಾಂಗ್: ಇರಾನ್ ಸೇನೆಯ ಕಮಾಂಡರ್ ಖಾಸಿಂ ಸೋಲೆಮನಿ ಹತ್ಯೆಯಾಗಿರುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಏಷ್ಯಾಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಕಂಡಿದೆ.

ಇರಾಕ್ ರಾಜಧಾನಿ ಬಾಗ್ದಾದ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಅಮೆರಿಕ ವಾಯುಪಡೆ ನಡೆಸಿದ ದಾಳಿಯಲ್ಲಿ ಸೋಲೆಮನಿ ಸಾವಿಗೀಡಾಗಿರುವುದನ್ನು ಅಮೆರಿಕ ಸೇನೆಯ ಪ್ರಧಾನ ಕಚೇರಿ ಈಗಾಗಲೇ ಖಚಿತಪಡಿಸಿದ. ಈ ಘಟನೆ ವರದಿಯಾದ ಬೆನ್ನಲ್ಲೇಕಚ್ಚಾ ತೈಲ (ಬ್ರೆಂಟ್ ಕ್ರ್ಯೂಡ್) ಬೆಲೆ ಶೇ 1.31ರಷ್ಟು ಏರಿಕೆ ಕಂಡು ಬ್ಯಾರೆಲ್‌ಗೆ 67.12 ಡಾಲರ್(₹4812.6) ಆಗಿದೆ.

ವಿದೇಶದಲ್ಲಿ ಅಮೆರಿಕನ್ನರ ರಕ್ಷಣೆಗಾಗಿ ಸೇನಾ ಕಾರ್ಯಾಚರಣೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದರು ಎಂದು ಸೇನಾಧಿಕಾರಿಗಳು ಈಗಾಗಲೇ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ:ಯುದ್ಧಭೀತಿ | ಇರಾಕ್ ನೆಲದಲ್ಲಿ ಅಮೆರಿಕ ರಾಕೆಟ್ ದಾಳಿ: ಇರಾನ್ ಕಮಾಂಡರ್ ನಿಧನ

ಬಾಗ್ದಾದ್‌ನಲ್ಲಿ ಅಮೆರಿಕ ರಾಯಭಾರ ಕಚೇರಿಯ ಮೇಲೆ ಮಂಗಳವಾರ ದಾಳಿ ನಡೆದು ಧ್ವಂಸಗೊಳಿಸುವ ಪ್ರಯತ್ನ ನಡೆದಿತ್ತು.ಇರಾನ್ ಬೆಂಬಲಿತ ಸೇನೆಹಾಗೂ ಪ್ರತಿಭಟನಾಕಾರರಿಂದ ಕೃತ್ಯ ನಡೆದಿರುವುದಾಗಿ ಅಮೆರಿಕ ಇರಾನ್‌ಗೆ ಆರೋಪಿಸಿ ಎಚ್ಚರಿಕೆ ರವಾನಿಸಿತ್ತು.

ಅಮೆರಿಕ ಸೇನೆ ನಡೆಸಿದ್ದ ವಾಯುದಾಳಿಯಲ್ಲಿ ಇರಾನ್ ಸೇನಾ ತರಬೇತಿ ಪಡೆದಿದ್ದ ಪಿಎಂಎಫ್(ಪಾಪ್ಯುಲರ್ ಮೊಬಿಲೈಜೇಷನ್ ಫೋರ್ಸಸ್)ನ ಕನಿಷ್ಠ 25 ಮಂದಿ ಸಾವಿಗೀಡಾಗಿದ್ದರು. ಅದರ ಪ್ರತೀಕಾರವಾಗಿ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.