ನವದೆಹಲಿ:ಜಾಗತಿಕ ಉಗ್ರ ಒಸಾಮ ಬಿನ್ ಲಾಡೆನ್ಗೆ ಆಶ್ರಯ ನೀಡಿದ್ದ ಪಾಕಿಸ್ತಾನ, ಆತನೇ (ಲಾಡೆನ್) ಸ್ಥಾಪಿಸಿದ್ದ ಅಲ್-ಖೈದಾ ಸಂಘಟನೆಯಿಂದಬೆದರಿಕೆ ಇದೆ ಎಂದುಇದೀಗ ಘೋಷಿಸಿದೆ.

ಒಂದೆಡೆಪಾಕಿಸ್ತಾನವು ಅಫ್ಗಾನಿಸ್ತಾನದ ಪಂಜ್ಶಿರ್ಪಡೆಗಳ ವಿರುದ್ಧ ಹೋರಾಟ ನಡೆಸಲು ತಾಲಿಬಾನ್ಗೆ ನೆರವು ನೀಡುತ್ತಿದ್ದರೆ, ಅದೇ ವೇಳೆ ಆ ದೇಶದ (ಪಾಕಿಸ್ತಾನದ) ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಅಫ್ಗಾನಿಸ್ತಾನವುಭಯೋತ್ಪಾದಕ ಕೇಂದ್ರವಾಗಿ ಬದಲಾಗುತ್ತಿದೆ ಎಂದುಕಳವಳ ವ್ಯಕ್ತಪಡಿಸಿದ್ದಾರೆ.

ಅಲ್-ಖೈದಾ ಅಪಾಯಕಾರಿಯಾಗಿದ್ದು, ಪಾಕಿಸ್ತಾನವು ಈ ಸಂಘಟನೆಗೆ ಆಶ್ರಯ ನೀಡುವುದಿಲ್ಲ ಎಂದೂ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:ಅಫ್ಗಾನಿಸ್ತಾನದಲ್ಲಿ ಅಮೆರಿಕದ ಪಾತ್ರವೇನು? ಇಲ್ಲಿದೆ 20 ವರ್ಷಗಳ ‘ರಕ್ತ ಚರಿತ್ರೆ’

ಖುರೇಷಿ ಅಫ್ಗಾನಿಸ್ತಾನದ ಸ್ಥಿತಿಗತಿ ಕುರಿತುಚೀನಾ, ಇರಾನ್, ತಜಕಿಸ್ತಾನ, ತುರ್ಕ್ಮೇನಿಸ್ತಾನ ಮತ್ತು ಉಜ್ಬೇಕಿಸ್ತಾನದ ವಿದೇಶಾಂಗ ಸಚಿವರೊಂದಿಗೆ ನಡೆದ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಅವರು, ದೀರ್ಘಕಾಲದ ಸಂಘರ್ಷ ಮತ್ತು ದಶಕಗಳ ಅಸ್ಥಿರತೆಯಿಂದ ತೊಂದರೆ ಅನುಭವಿಸುತ್ತಿರುವ ಅಫ್ಗನ್ ಜನರತ್ತ ಗಮನಹರಿಸಬೇಕಿದೆ. ಅಫ್ಗಾನಿಸ್ತಾನವನ್ನುಭಯೋತ್ಪಾದನೆಯ ಕೇಂದ್ರವಾಗಲು ಬಿಡುವುದಿಲ್ಲ ಎಂದು ಹೇಳಿರುವುದಾಗಿ ಪಾಕ್ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪಾಕಿಸ್ತಾನ ಬಹಳ ಸಮಯದಿಂದಲೂ ಉಗ್ರರಿಗೆ ಆಶ್ರಯ ನೀಡುತ್ತಾ ಬಂದಿದೆ. ಅಷ್ಟಲ್ಲದೆ ತಾಲಿಬಾನ್ ಉಗ್ರ ಸಂಘಟನೆಯು ಅಫ್ಗಾನಿಸ್ತಾನದಲ್ಲಿ ಆಡಳಿತವನ್ನು ವಶಕ್ಕೆ ಪಡೆಯುವಲ್ಲಿಯೂ ನೆರವಾಗಿದೆ. ಹೀಗಾಗಿ ಖುರೇಷಿ ಹೇಳಿಕೆಯು ಭಯೋತ್ಪಾದನೆ ಬಗೆಗಿನ ಪಾಕಿಸ್ತಾನದ ದ್ವಂದ್ವಾತ್ಮಕ ನಿಲುವನ್ನು ಸ್ಪಷ್ಟಪಡಿಸಿದೆ ಎಂದು ವರದಿಯಾಗಿದೆ.

ಭಾರತವು ಅಫ್ಗಾನಿಸ್ತಾನದ ಸದ್ಯದ ಸ್ಥಿತಿಗತಿಯ ಬಗ್ಗೆ ಬುಧವಾರ ರಷ್ಯಾದೊಂದಿಗೆ ಚರ್ಚಿಸಿದೆ. ಉಗ್ರ ಸಂಘಟನೆಗಳಾದ ಲಷ್ಕರ್-ಇ-ತಯಬಾ, ಜೈಷ್-ಇ-ಮೊಹಮ್ಮದ್ ಇನ್ನಿತರಉಗ್ರ ಸಂಘಟನೆಗಳೊಟ್ಟಿಗೆಪಾಕಿಸ್ತಾನದ ಐಎಸ್ಐಹೊಂದಿರುವ ನಂಟಿನ ಬಗ್ಗೆ ಭಾರತ ಮಾಹಿತಿ ನೀಡಿದೆ.

ಇದನ್ನೂ ಓದಿ:ಲಾಡೆನ್ ಕುರಿತ ಇಮ್ರಾನ್ ಖಾನ್ ಹೇಳಿಕೆಗೆ ಪಾಕಿಸ್ತಾನದಲ್ಲೇ ವಿರೋಧ

ಇದೇವೇಳೆ,ಪಾಕಿಸ್ತಾನವು ತಾಲಿಬಾನ್ ಜೊತೆಗೆ ನಂಟು ಹೊಂದಿರುವ ಬಗ್ಗೆ ಮತ್ತು ಇತರೆ ಅಂತರರಾಷ್ಟ್ರೀಯ ಉಗ್ರ ಸಂಘಟನೆಗಳು ಅಫ್ಗಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಬಗ್ಗೆ ಭಾರತವು ರಷ್ಯಾಗೆ ತಿಳಿಸಿದೆ. ಅಷ್ಟಲ್ಲದೆ, ಅಫ್ಗನ್ ನೆಲದಲ್ಲಿ ಪಾಕಿಸ್ತಾನವು ಭಯೋತ್ಪಾದನೆಯನ್ನು ಹರಡಲು ಬಿಡದಂತೆ ವಿಶೇಷ ಕಾಳಜಿ ವಹಿಸಬೇಕಿದೆ ಎಂದೂ ಮನವರಿಕೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.