ಇಸ್ಲಾಮಾಬಾದ್: ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕುಲಪತಿಯಾಗಲು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಯಸಿದ್ದಾರೆ. ಇದಕ್ಕಾಗಿ ಅವರು ಅರ್ಜಿ ಕೂಡ ಸಲ್ಲಿಸಿದ್ದಾರೆ.

ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ವಕ್ತಾರರು ಈ ವಿಷಯ ಖಚಿತಪಡಿಸಿದ್ದಾರೆ.

ಭ್ರಷ್ಟಾಚಾರ ಹಾಗೂ ಹಿಂಸೆಗೆ ಪ್ರಚೋದನೆ ಆರೋಪದ ಅಡಿ ಇಮ್ರಾನ್ ಖಾನ್ ಅವರು ಸದ್ಯ ಪಾಕಿಸ್ತಾನ ಜೈಲಿನಲ್ಲಿದ್ದಾರೆ. ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕುಲಪತಿಯಾಗಲು ಬಯಸಿ ಇಮ್ರಾನ್ ಖಾನ್ ಅವರು ಅರ್ಜಿ ಸಲ್ಲಿಸಿದ್ದಾರೆ. ಅವರ ಅರ್ಜಿ ಇನ್ನಷ್ಟೇ ಪರಿಶೀಲನೆಗೆ ಒಳಗಾಗಬೇಕಿದೆ ಎಂದು ಲಂಡನ್‌ನಲ್ಲಿರುವ ಪಿಟಿಐ ಪಕ್ಷದ ವಕ್ತಾರರು ತಿಳಿಸಿದ್ದಾರೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಔಪಚಾರಿಕವಾಗಿದೆ. ಆ ಹುದ್ದೆ ಹೊಂದುವುದು ಅತ್ಯಂತ ಶ್ರೇಷ್ಠ ಸಾಧನೆಯಾಗಿದೆ. ಅದೇ ವಿವಿಯಿಂದ ಕಲಿತು ಹೊರಬಂದಿರುವ ಇಮ್ರಾನ್ ಖಾನ್ ಅವರು ಅದೇ ಆಕ್ಸ್‌ಫರ್ಡ್ ವಿವಿಯ ಕುಲಪತಿಯಾಗುವುದು ಅದ್ಭುತ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ಹಾಂಗ್‌ಕಾಂಗ್ ಬ್ರಿಟಿಷ್ ಗವರ್ನರ್ ಆಗಿದ್ದ ಕ್ರಿಸ್ ಪ್ಯಾಟೆನ್ ಅವರು ಆಕ್ಸ್‌ಫರ್ಡ್ ವಿವಿಯ ಕುಲಪತಿ ಹುದ್ದೆಗೆ ರಾಜೀನಾಮೆ ನೀಡಿರುವುದರಿಂದ ಹೊಸ ಕುಲಪತಿಗೆ ಹುಡುಕಾಟ ನಡೆದಿದೆ.

ಮಾಜಿ ಕ್ರಿಕೆಟರ್ ಆದ ಇಮ್ರಾನ್ ಖಾನ್ ಇಂಗ್ಲೆಂಡ್‌ನಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. 1975ರಲ್ಲಿ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

ಆಗಸ್ಟ್ ಮಾಸಾಂತ್ಯಕ್ಕೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವೆಬ್‌ಸೈಟಿನಲ್ಲಿ ಅರ್ಜಿ ಸಲ್ಲಿಸಿದವರ ಪಟ್ಟಿ ಬಿಡುಗಡೆಯಾಗಿ ಕುಲಪತಿ ಹುದ್ದೆಗೆ ಚುನಾವಣೆ ನಡೆಯಲಿದೆ.
.ರಕ್ಷಾ ಬಂಧನದ ಹಿನ್ನೆಲೆಗೆ ಮೊಘಲ್ ರಾಜನ ಕಥೆ ಹೇಳಿ ಪೇಚಿಗೆ ಸಿಲುಕಿದ ಸುಧಾ ಮೂರ್ತಿ!.ನಾಲ್ಕನೇ ಪತಿಗೂ ವಿಚ್ಛೇದನ ನೀಡಿದ ನಟಿ, ಗಾಯಕಿ ಜೆನ್ನಿಫರ್ ಲೊಪೇಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.