ಲಂಡನ್: ‘ಬ್ರಿಟಿಷ್ ರಾಜಮನೆತನ ಎಂದಿಗೂ ವರ್ಣಭೇದ ನೀತಿ ಅನುಸರಿಸಿಲ್ಲ’ ಎಂದು ರಾಜಕುಮಾರ ವಿಲಿಯಮ್ ಗುರುವಾರ ಹೇಳುವ ಮೂಲಕ ರಾಜಮನೆತನವನ್ನು ಸಮರ್ಥಿಸಿಕೊಂಡಿದ್ದಾರೆ.

ಸಹೋದರ ರಾಜಕುಮಾರ ಹ್ಯಾರಿ ಹಾಗೂ ನಾದಿನಿ ಮೇಘನ್ ಅವರು ರಾಜಮನೆತನದ ವಿರುದ್ಧ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಪೂರ್ವ ಲಂಡನ್ನಲ್ಲಿರುವ ಶಾಲೆಯೊಂದಕ್ಕೆ ಭೇಟಿ ನೀಡಿದ ವೇಳೆ, ರಾಜಕುಮಾರ ಹ್ಯಾರಿ–ಮೇಘನ್ ಅವರು ಓಪ್ರಾ ವಿನ್ಫ್ರೆ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾಡಿರುವ ಆರೋಪಗಳ ಕುರಿತು ಮೊದಲ ಬಾರಿಗೆ ವಿಲಿಯಮ್ ಪ್ರತಿಕ್ರಿಯಿಸಿದರು.

ತನ್ನ ವಿರುದ್ಧದ ಆರೋಪಗಳಿಗೆ ಬಕಿಂಗ್ಹ್ಯಾಮ್ ಅರಮನೆ ಪ್ರತಿಕ್ರಿಯೆ ನೀಡಿದ್ದರೂ, ಅದು ಈ ಸಂದರ್ಶನ ಎಬ್ಬಿಸಿರುವ ವಿವಾದವನ್ನು ಶಮನ ಮಾಡುವಲ್ಲಿ ವಿಫಲವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.