ಪ್ರಿಗೋಷಿನ್ ವಿರುದ್ಧದ ತನಿಖೆ ಕೈಬಿಟ್ಟ ಎಫ್‌ಎಸ್‌ಬಿ
ಪ್ರಿಗೋಷಿನ್ ವಿರುದ್ಧದ ತನಿಖೆಯನ್ನು ನಿಲ್ಲಿಸಿದ್ದೇವೆ ಎಂದು ರಷ್ಯಾದ ಫೆಡರಲ್ ಭದ್ರತಾ ಸೇವೆ (ಎಫ್‌ಎಸ್‌ಬಿ) ಮಂಗಳವಾರ ಘೋಷಿಸಿದೆ. ಬಂಡಾಯದಲ್ಲಿ ಭಾಗಿಯಾಗಿದ್ದ ಇತರರ ವಿರುದ್ಧವೂ ಯಾವುದೇ ಪ್ರಕರಣಗಳನ್ನು ದಾಖಲಿಸಿಕೊಳ್ಳುವುದಿಲ್ಲ ಎಂದೂ ಹೇಳಿದೆ. ಬಂಡಾಯಗಾರರ ವಿರುದ್ಧ ಯಾವುದೇ ವಿಚಾರಣೆ ನಡೆಸುವುದಿಲ್ಲ ಎಂದು ರಷ್ಯಾವು ಶನಿವಾರ ಭರವಸೆ ನೀಡಿತ್ತು. ರಷ್ಯಾದಲ್ಲಿ ಸರ್ಕಾರದ ವಿರುದ್ಧ ಬಂಡಾಯವೆದ್ದರೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಈ ಹಿಂದೆ ಹಲವು ವಿರೋಧಪಕ್ಷಗಳ ನಾಯಕರು ಇಂತಹ ಶಿಕ್ಷೆಗೆ ಗುರಿಯಾಗಿದ್ದರು ಎಂದಿವೆ. ಪ್ರಿಗೋಷಿನ್ ಎಲ್ಲಿದ್ದಾರೆ ಎಂಬುದು ನಿಗೂಢವಾಗಿರುವ ನಡುವೆಯೇ ಅವರು ಬಳಸಿದ್ದ ವಿಮಾನವು ಬೆಲರೂಸ್‌ನ ರಾಜಧಾನಿ ಮಿನ್ಸ್ಕ್ ಬಳಿ ಮಂಗಳವಾರ ಬೆಳಿಗ್ಗೆ ಇಳಿದಿದೆ ಎಂದು ಅಲ್ಲಿನ ಸೇನೆಯ ಮೂಲಗಳು ತಿಳಿಸಿವೆ.