ವಿಶ್ವದಾದ್ಯಂತ ನಿರಾಶ್ರಿತರಾದವರ ಸಂಖ್ಯೆ 11 ಕೋಟಿಗೆ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತ ಏಜೆನ್ಸಿ ಯುಎನ್‌ಎಚ್‌ಸಿಆರ್ (UNHCR) ವರದಿ ಹೇಳಿದೆ. ಉಕ್ರೇನ್ ಹಾಗೂ ಸುಡಾನ್ ಸಂಘರ್ಷದಿಂದ ಹಲವು ಮಂದಿ ಅನಿವಾರ್ಯವಾಗಿ ಮನೆ ತೊರೆದಿದ್ದಾರೆ ಎಂದು ಅದು ಹೇಳಿದೆ.

ಕಳೆದ ವರ್ಷದಲ್ಲಿ ಸುಮಾರು 1.9 ಕೋಟಿ ಮಂದಿ ನಿರಾಶ್ರಿತರಾಗಿದ್ದು, ಒಟ್ಟು ನಿರಾಶ್ರಿತರ ಸಂಖ್ಯೆ 10.840 ಕೋಟಿಗೆ ಏರಿತ್ತು. ಇದು ಒದುವರೆಗೆ ಒಂದು ವರ್ಷದ ಅವಧಿಯಲ್ಲಿ ನಿರಾಶ್ರಿತರಾದವರ ಅತೀ ಹೆಚ್ಚಿನ ಪ್ರಮಾಣ.

ಇದಾದ ಬಳಿಕ ಉಕ್ರೇನ್ ಹಾಗೂ ಸುಡಾನ್ ಸಂಘರ್ಷದಿಂದಾಗಿ ನಿರಾಶ್ರಿತರಾದವರ ಸಂಖ್ಯೆ 11 ಕೋಟಿಗೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

2011ರ ಸಿರಿಯಾ ಸಂಘರ್ಷದ ಎರಡು ದಶಕಕ್ಕೂ ಮುನ್ನ ವಿಶ್ವದಾದ್ಯಂತ ಒಟ್ಟು ನಿರಾಶ್ರಿತರ ಸಂಖ್ಯೆ 4 ಕೋಟಿ ಇತ್ತು. ಬಳಿಕ ಏರುಗತಿಯಲ್ಲಿ ಸಾಗಿದ್ದು, ಈಗ ಅದು ದುಪ್ಪಟ್ಟು ದಾಟಿ 11 ಕೋಟಿಗೆ ತಲುಪಿದೆ. ಪ್ರತೀ 74 ಮಂದಿಯಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.