ಕೀವ್: ಉಕ್ರೇನ್ ಮೇಲೆ ಹೈಪರ್ಸಾನಿಕ್, ಮಧ್ಯಂತರ ಶ್ರೇಣಿಯ ಖಂಡಾಂತರ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ರಷ್ಯಾದ ವಿರುದ್ಧ ಪಾಶ್ಚಿಮಾತ್ಯ ಸುಧಾರಿತ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಲು ಉಕ್ರೇನ್ಗೆ ಅಮೆರಿಕ ಹಾಗೂ ಬ್ರಿಟನ್ ಅನುಮತಿ ನೀಡಿರುವುದಕ್ಕೆ ಪ್ರತಿಯಾಗಿ ಉಕ್ರೇನ್ ಮೇಲೆ ರಷ್ಯಾ ಖಂಡಾಂತರ ಕ್ಷಿಪಣಿ ಪ್ರಯೋಗಿಸಿದೆ.

ಉಕ್ರೇನ್ನ ನಿಪ್ರೊ ನಗರದ ಮೇಲೆ ರಷ್ಯಾ ದಾಳಿ ನಡೆಸಿದೆ. ಇದರೊಂದಿಗೆ ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧಕ್ಕೆ ಸಾವಿರ ದಿನ ತುಂಬಿರುವ ಬೆನ್ನಲ್ಲೇ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ.

ರಷ್ಯಾದ ಟೆಲಿವಿಷನ್ ಸಂದರ್ಶನದ ವೇಳೆ ಉಕ್ರೇನ್ ಮೇಲೆ ಮತ್ತಷ್ಟು ದಾಳಿ ನಡೆಸುವ ಬಗ್ಗೆ ಪುಟಿನ್ ಎಚ್ಚರಿಕೆ ನೀಡಿದ್ದಾರೆ. ದಾಳಿ ನಡೆಸುವ ಮುನ್ನ ನಾಗರಿಕರಿಗೆ ಎಚ್ಚರಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.

'ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಂದ ಅನುಮತಿ ಪಡೆದ ಬೆನ್ನಲ್ಲೇ ರಷ್ಯಾದ ಮೇಲೆ ಉಕ್ರೇನ್, ಅಮೆರಿಕ ನಿರ್ಮಿತ ಆರು ಎಟಿಎಸಿಎಂಎಸ್, ಎಚ್ಐಎಂಆರ್ಎಸ್ ಮತ್ತು ಬ್ರಿಟನ್ನ ಸ್ಟಾರ್ಮ್ ಶಾಡೊ ಮಿಸೈಲ್ ದಾಳಿಯನ್ನು ನಡೆಸಿತ್ತು' ಎಂದು ಪುಟಿನ್ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾದಲ್ಲಿ ಉತ್ತರ ಕೊರಿಯಾದ ಸೇನೆಯನ್ನು ನಿಯೋಜಿಸಿದ ಬಳಿಕ ಉಕ್ರೇನ್ ಮೇಲೆ ಖಂಡಾಂತರ ಕ್ಷಿಪಣಿ ದಾಳಿ ನಡೆಸಿರುವುದನ್ನು ಪುಟಿನ್ ಒಪ್ಪಿಕೊಂಡಿದ್ದಾರೆ. ಶಾಂತಿ ಮರುಸ್ಥಾಪನೆಗೆ ರಷ್ಯಾ ಆಸಕ್ತಿ ಹೊಂದಿಲ್ಲ ಎಂಬುದಕ್ಕೆ ಇದು ಪುರಾವೆಯಾಗಿದೆ. ಇದರ ವಿರುದ್ಧ ಇಡೀ ಜಗತ್ತೇ ಪ್ರತಿಕ್ರಿಯೆ ನೀಡಬೇಕು. ರಷ್ಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸ್ಪಷ್ಟವಾದ ಸಂದೇಶವನ್ನು ರವಾನಿಸಬೇಕು' ಎಂದು ಮನವಿ ಮಾಡಿದ್ದಾರೆ.

ಹೊಸ ಅಣ್ವಸ್ತ್ರ ನೀತಿಗೆ ಪುಟಿನ್ ಸಹಿ

ಅಮೆರಿಕ ಪೂರೈಸಿರುವ ಕ್ಷಿಪಣಿಗಳ ಮೂಲಕ ರಷ್ಯಾದ ಒಳಗೆ ದಾಳಿ ಮಾಡಲು ಉಕ್ರೇನ್ಗೆ ಅನುಮತಿ ನೀಡಲು ನಿರ್ಧರಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ತಿರುಗೇಟು ನೀಡಲು ರಷ್ಯಾ ಹೊಸ ಅಣ್ವಸ್ತ್ರ ನೀತಿಯನ್ನು ರೂಪಿಸಿತ್ತು. ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳ ಬೆಂಬಲ ಹೊಂದಿರುವ ಯಾವುದೇ ರಾಷ್ಟ್ರ ರಷ್ಯಾದ ಮೇಲೆ ದಾಳಿ ಮಾಡಿದರೆ ಅದನ್ನು ಜಂಟಿ ದಾಳಿ ಎಂದು ಪರಿಗಣಿಸುವ ನಿರ್ಣಯಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹಿ ಹಾಕಿದ್ದರು.

ಹೊಸ ನೀತಿಯ ಅನ್ವಯ, ಅಣ್ವಸ್ತ್ರ ಹೊಂದಿಲ್ಲದ ರಾಷ್ಟ್ರ ರಷ್ಯಾದ ಮೇಲೆ ದಾಳಿ ಮಾಡಿದರೆ. ಅದಕ್ಕೆ ಬೆಂಬಲ ನೀಡುತ್ತಿರುವ ಅಣ್ವಸ್ತ್ರ ಹೊಂದಿದ ರಾಷ್ಟ್ರವನ್ನು ಹೊಣೆಗಾರರನ್ನಾಗಿ ಪರಿಗಣಿಸಲಾಗುತ್ತದೆ.
.ರಷ್ಯಾ: ಹೊಸ ಅಣ್ವಸ್ತ್ರ ನೀತಿಗೆ ಪುಟಿನ್ ಸಹಿ.ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರ: ಕನಿಷ್ಠ 12 ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.