ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Bangla Unrest | ಹಸೀನಾಗೆ ಭಾರತದ ನೆರವು: ಕೇಂದ್ರ

Published : 6 ಆಗಸ್ಟ್ 2024, 23:35 IST
Last Updated : 6 ಆಗಸ್ಟ್ 2024, 23:35 IST
ಫಾಲೋ ಮಾಡಿ
Comments

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಸಹಾಯ ಮಾಡುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ, ಮುಂದಿನ ನಡೆ ಏನಿರಬೇಕು ಎಂದು ತೀರ್ಮಾನಿಸಲು
ಸಮಯಾವಕಾಶ ನೀಡಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಸರ್ವಪಕ್ಷದಲ್ಲಿ ಭಾಗವಹಿಸಿದರು.

ಹಸೀನಾ ಅವರು ಸೋಮವಾರ ಸಂಜೆ ಭಾರತಕ್ಕೆ ಬಂದಿದ್ದಾರೆ. ಸಂಸತ್ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, 'ಬಾಂಗ್ಲಾದೇಶದ ಸೇನಾ ಮುಖ್ಯಸ್ಥರ ಜೊತೆ ಕೇಂದ್ರ ಸರ್ಕಾರ ಮಾತನಾಡಿದೆ, ಆ ದೇಶದಲ್ಲಿ ಇರುವ ಅವರಿಗೆ ಭದ್ರತೆಯನ್ನು ಖಾತರಿಪಡಿಸುವಂತೆ ಹೇಳಲಾಗಿದೆ' ಎಂಬ ಮಾಹಿತಿಯ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಕಾಣಿಸಿಕೊಂಡಿದ್ದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಸರ್ಕಾರಕ್ಕೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಜೈಶಂಕರ್, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಶಾಂತಿಯ ಹಿಂದೆ ವಿದೇಶಿ ಸರ್ಕಾರಗಳ ಕೈವಾಡವಿರಲಿಲ್ಲ. ಅಲ್ಲಿನ ಪರಿಸ್ಥಿತಿ ತೀರಾ ಅನಿಶ್ಚಿತವಾಗಿದೆ, ಪರಿಸ್ಥಿತಿಯ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಗೊತ್ತಾಗಿದೆ.

ಅಲ್ಲಿ ಬಿಕ್ಕಟ್ಟು ವಿದೇಶಿ ಸರ್ಕಾರಗಳು, ಮುಖ್ಯವಾಗಿ ಪಾಕಿಸ್ತಾನದ, ಪಾತ್ರ ಇದ್ದಿರಬಹುದೇ ಎಂಬ ಪ್ರಶ್ನೆಯನ್ನು ರಾಹುಲ್ ಅವರು ಸಭೆಯಲ್ಲಿ ಕೇಳಿದ್ದರು. ಜೊತೆಗೆ, ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಸಮುದಾಯದವರ ಬಗ್ಗೆ ರಾಹುಲ್ ಕಳವಳ ವ್ಯಕ್ತಪಡಿಸಿದ್ದರು.

ಬಾಂಗ್ಲಾದೇಶದ ಅಲ್ಪಸಂಖ್ಯಾತರ ಮನೆಗಳು ಮತ್ತು ಆಸ್ತಿಗಳನ್ನು ಪ್ರತಿಭಟನಕಾರರು ಗುರಿಯಾಗಿಸಿಕೊಂಡಿದ್ದಾರೆ ಎಂದು ಜೈಶಂಕರ್ ವಿವರಿಸಿದ್ದಾರೆ.

ಹಸೀನಾ ಅವರು ಭಾರತಕ್ಕೆ ಬಂದು 24 ಗಂಟೆಗಳ ಕಾಲ ಕಳೆದಿಲ್ಲ. ಅವರು ಆಘಾತಕ್ಕೆ ಒಳಗಾಗಿದ್ದಾರೆ. ಅವರಿಗೆ ಚೇತರಿಸಿಕೊಳ್ಳಲು ಸರ್ಕಾರ ಸಮಯ ನೀಡಿದೆ. ಅದಾದ ನಂತರ, ಅವರ ಮುಂದಿನ ಸಲಹೆ ಸೇರಿದಂತೆ ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಬಾಂಗ್ಲಾ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುವುದಾಗಿ ರಾಹುಲ್ ಸೇರಿದಂತೆ ಹಲವು ನಾಯಕರು ಭರವಸೆ ನೀಡಿದ್ದಾರೆ. 'ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳ ಬಗ್ಗೆ ಸರ್ವಪಕ್ಷ ಸಭೆಗೆ ಮಾಹಿತಿ ನೀಡಿದ್ದೇನೆ. ಅಲ್ಲಿ ದೊರೆತ ಒಕ್ಕೊರಲ ಬೆಂಬಲವನ್ನು ಮೆಚ್ಚುತ್ತೇನೆ' ಎಂದು ಜೈಶಂಕರ್ ಅವರು 'ಎಕ್ಸ್‌' ಮೂಲಕ ಪ್ರಕಟಿಸಿದರು.

ರಾಷ್ಟ್ರದ ಭದ್ರತೆ ಹಾಗೂ ಹಿತಾಸಕ್ತಿಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ಜೊತೆ ಇರಲಿದೆ. 
– ಕಾರ್ತಿ ಚಿದಂಬರಂ, ಕಾಂಗ್ರೆಸ್ ನಾಯಕ
ಪ್ರಜಾತಂತ್ರಕ್ಕೆ ಅಪಾಯ ಎದುರಾದಾಗ, ಅಧಿಕಾರಸ್ಥರು ಸರ್ವಾಧಿಕಾರಿಗಳಾದಾಗ, ದೇಶದ ಜನ ಕೆಲವು ಕಾಲ ಸಹಿಸುತ್ತಾರೆ. ನಂತರ ಅರಾಜಕತೆ ಉಂಟಾಗುತ್ತದೆ.
ಸಂಜಯ್ ರಾವುತ್, ಶಿವಸೇನಾ (ಯುಬಿಟಿ) ನಾಯಕ
ಪ್ರಜಾತಂತ್ರ ಕೊನೆಗೊಳಿಸಿ, ಸರ್ವಾಧಿಕಾರವನ್ನು ತರಲು ಯತ್ನಿಸುವ ದೇಶಗಳಲ್ಲಿ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗುತ್ತದೆ
ವೀರೇಂದ್ರ ಸಿಂಗ್, ಎಸ್‌ಪಿ ನಾಯಕ
ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಬೆಳವಣಿಗೆ ಮೇಲೆ ಕಣ್ಣಿಟ್ಟಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮ ದೇಶ ಸಮರ್ಥವಾಗಿದೆ
ಲಹರ್ ಸಿಂಗ್ ಸಿರೋಯಾ ಬಿಜೆಪಿ ಸಂಸದ
ಇಸ್ಲಾಮಿಕ್ ಗಣತಂತ್ರಗಳಲ್ಲಿ ಇದು ಸಹಜ: ಕಂಗನಾ
ಶಿಮ್ಲಾ (ಪಿಟಿಐ): ಎಲ್ಲ ಇಸ್ಲಾಮಿಕ್ ಗಣತಂತ್ರಗಳಲ್ಲಿ ಆಗುವಂಥದ್ದೇ ಬಾಂಗ್ಲಾದೇಶದಲ್ಲಿಯೂ ಆಗಿದೆ, ಅಂತಹ ದೇಶಗಳಲ್ಲಿ ಇತರ ಧರ್ಮಗಳನ್ನು 'ನಿರ್ಮೂಲಗೊಳಿಸುವ' ಯತ್ನಗಳು ಯಾವಾಗಲೂ ನಡೆಯುತ್ತವೆ ಎಂದು ಬಿಜೆಪಿ ಸಂಸದೆ ಕಂಗನಾ ರನೌತ್ ಹೇಳಿದ್ದಾರೆ. ಇಸ್ಲಾಮಿಕ್ ಗಣತಂತ್ರಗಳಲ್ಲಿ ಇಂತಹ ಪರಿಸ್ಥಿತಿಯು ಒಂದಲ್ಲ ಒಂದು ಹಂತದಲ್ಲಿ ಬಂದಿದೆ ಎಂದು ಅವರು ಹೇಳಿದ್ದಾರೆ.
'ಅಲ್ಪಸಂಖ್ಯಾತರ ಹಿತ, ಕೇಂದ್ರದ ಅವಲೋಕನ'
ನವದೆಹಲಿ (ಪಿಟಿಐ): ಬಾಂಗ್ಲಾದೇಶದ ಅಲ್ಪ ಸಂಖ್ಯಾತರ ವಿಚಾರವಾಗಿ ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರವಾಗಿದೆ. ಬಾಂಗ್ಲಾದಲ್ಲಿ ಇರುವ ಭಾರತೀಯ ಸಮುದಾಯದವರ ಜೊತೆ ದೂತಾವಾಸ ಕಚೇರಿಗಳ ಮೂಲಕ ನಿರಂತರ ಸಂಪರ್ಕ ಇರಿಸಿಕೊಳ್ಳಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸಂಸತ್ತಿಗೆ ಮಂಗಳವಾರ ಪ್ರಾರಂಭಿಸಿದರು. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿನ ಹೇಳಿಕೆಯನ್ನು ಓದಿ ಜೈಶಂಕರ್ ಅವರು, 'ನೆರೆಯ ದೇಶದ ಕಾನೂನು ಮತ್ತು ಸುವ್ಯವಸ್ಥೆ ಸಹಜ ಸ್ಥಿತಿಗೆ ಬಂದಿದೆ ಎಂದು ಅನ್ನಿಸುವವರೆಗೂ ಭಾರತದ ಕಳವಳ ಮುಂದುವರಿಯುತ್ತದೆ'. ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು 'ತತ್ಕಾಲದ ಮಟ್ಟಿಗೆ' ಭಾರತಕ್ಕೆ ಬರುವುದಾಗಿ ಹೇಳಿದ ನಂತರ 'ಹೆಚ್ಚು ಕಾಲ ಇರಲಿಲ್ಲ' ಎಂದು ಕೂಡ ಜೈಶಂಕರ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ನೆರೆ ದೇಶದ ಪರಿಸ್ಥಿತಿಯು ಸಂಕೀರ್ಣವಾಗಿರುವ ಕಾರಣ, ಗಡಿ ಭದ್ರತಾ ಪಡೆಗಳು ತೀರಾ ಎಚ್ಚರಿಕೆ ವಹಿಸಬೇಕು ಎಂಬ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 'ಬಾಂಗ್ಲಾದಲ್ಲಿ ಇರುವ ಭಾರತೀಯ ಪ್ರಜೆಗಳ ಸಂಖ್ಯೆ ಅಂದಾಜು 19 ಸಾವಿರ. ಈ ಮೇಲಿನ ಒಂಬತ್ತು ಸಾವಿರ ಮಂದಿ ವಿದ್ಯಾರ್ಥಿಗಳು. ಆದರೆ, ವಿದ್ಯಾರ್ಥಿಗಳು ಹೆಚ್ಚಿನವರು ಜುಲೈ ತಿಂಗಳಿನಲ್ಲಿ ದೇಶಕ್ಕೆ ಮರಳಿದ್ದಾರೆ' ಎಂದು ಸಚಿವರು ಹೇಳಿದ್ದಾರೆ. 'ತತ್ಕಾಲಕ್ಕೆ ಭಾರತಕ್ಕೆ ಬರುವುದಕ್ಕೆ ಹಸೀನಾ ಅವರು ಬಹಳ ಕಡಿಮೆ ಸಮಯ ಇದ್ದಾಗ ಅನುಮತಿ ಕೋರಿದರು. ಅದೇ ಹೊತ್ತಿಗೆ ವಿಮಾನವೊಂದು ಬರುವುದಕ್ಕೆ ಅನುಮತಿ ಬೇಕು ಎಂಬ ಮನವಿಯು ಬಾಂಗ್ಲಾದೇಶದ ಅಧಿಕಾರಿಗಳಿಂದ ಬಂತು. ಹಸೀನಾ ಅವರು ಸೋಮವಾರ ಸಂಜೆ ದೆಹಲಿಗೆ ಬಂದರು. ಬಾಂಗ್ಲಾದಲ್ಲಿ ಪರಿಸ್ಥಿತಿ ಬದಲಾಗುತ್ತಲೇ ಇದೆ' ಎಂದು ಜೈಶಂಕರ್ ಹೇಳಿದ್ದಾರೆ.
ಲಂಡನ್‌ಗೆ ತೆರಳಲು ಅಡ್ಡಿ
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಲಂಡನ್ ಅವರು ತೆರಳಲು ಕೆಲವು 'ಅನಿಶ್ಚಿತತೆಗಳು' ಎದುರಾಗಿದೆ. ಹೀಗಾಗಿ ಹಸೀನಾ ಅವರು ಈ ಬದಲಿಗೆ ಭಾರತದಲ್ಲಿಯೇ ಇರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಕೆಲವು ಗಂಟೆಗಳ ನಂತರ, ಸೇನೆಯ 'ಸಿ–130ಜೆ' ಸರಕು ಸಾರಿಗೆ ವಿಮಾನದಲ್ಲಿ ಹಿಂಡನ್ ವಾಯುನೆಲೆ ತಲುಪಿದ ಹಸೀನಾ ಅವರು ಅಜ್ಞಾತ ಸ್ಥಳದಲ್ಲಿದ್ದಾರೆ. ಅವರಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಹಸೀನಾ ಅವರು ತಮ್ಮ ಸಹೋದರಿ ಶೇಖ್ ರೆಹಾನಾ ಅವರೊಂದಿಗೆ ಭಾರತಕ್ಕೆ ಬಂದಿದ್ದಾರೆ. ಅವರು ಭಾರತದಿಂದ ಲಂಡನ್‌ಗೆ ತೆರಳಿ, ಅಲ್ಲಿ ತಾತ್ಕಾಲಿಕ ಆಶ್ರಯ ಕೋರುವ ಆಲೋಚನೆ ಹೊಂದಿದ್ದರು . ಆದರೆ, ಈ ಆಯ್ಕೆಯನ್ನು ಅವರು ಈಗ ಇರಿಸಿಕೊಂಡಿಲ್ಲ ಎಂದು ಗೊತ್ತಾಗಿದೆ. ಬಾಂಗ್ಲಾದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ವಿಚಾರವಾಗಿ ತನಿಖೆ ನಡೆದಿದೆ, ಹಸೀನಾ ಅವರಿಗೆ ಕಾನೂನಿನ ರಕ್ಷಣೆ ಸಿಗಲಿಲ್ಲ ಎಂಬ ಸೂಚನೆಯನ್ನು ಬ್ರಿಟನ್ ಸರ್ಕಾರ ನೀಡಿದ ನಂತರ ಅವರ ಯೋಜನೆ ಬದಲಾಗಿದೆ.ನ್ ಸರ್ಕಾರ ನೀಡಿದ ನಂತರದಲ್ಲಿ ಅವರ ಯೋಜನೆ ಬದಲಾಗಿದೆ ಎನ್ನಲಾಗಿದೆ. ಭಾರತದ ಮೂಲಕ ಲಂಡನ್ನಿಗೆ ತೆರಳಲು ಹಸೀನಾ ಆಲೋಚಿಸಿದರು. ಹಸೀನಾ ಅವರು ಹಿಂಡನ್ ವಾಯುನೆಲೆ ತಲುಪುವ ಮೊದಲೇ ಈ ಬಗ್ಗೆ ಭಾರತದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ವಿವರಿಸಿವೆ. ರೆಹಾನಾ ಅವರ ಮಗಳು ಟ್ಯುಲಿಪ್ ಸಿದ್ದಿಕ್ ಅವರು ಬ್ರಿಟನ್‌ನಲ್ಲಿ ಸಂಸದೆಯಾಗಿದ್ದಾರೆ. ಲಂಡನ್‌ನಲ್ಲಿ ಸೋಮ ವಾರ ಹೇಳಿದ್ದು ಬ್ರಿಟನ್‌ನ ವಿದೇಶಾಂಗ ಸಚಿವ ಡೇವಿಡ್ ಲಮ್ಮಿ, 'ಬಾಂಗ್ಲಾದೇಶದ ಹಿಂದೆಂದೂ ಕಾಣದಂತಹ ಹಿಂಸಾಚಾರ, ಜೀವಹಾನಿ ಆಗಿದೆ, ಘಟನೆಗಳ ಬಗ್ಗೆ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಸ್ವತಂತ್ರವಾದ ತನಿಖೆ ಯೊಂದು ಆಗಬೇಕು' ಎಂದು ಹೇಳಿದರು. ಹಸೀನಾ ಅವರು ತಮ್ಮ ಮುಂದಿನ ನಡೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ಇದೆ ಎಂದು ಗೊತ್ತಾಗಿದೆ. ಹಸೀನಾ ಅವರ ಕುಟುಂಬದ ಕೆಲವು ಸದಸ್ಯರು ಫಿನ್ಲೆಂಡ್‌ನಲ್ಲಿ ಇರುವ ಕಾರಣಕ್ಕೆ, ಅವರು ಫಿನ್ಲೆಂಡಿಗೆ ತೆರಳುವ ಆಲೋಚನೆಯಲ್ಲಿಯೂ ಇದ್ದಾರೆ. ಪರಿಸ್ಥಿತಿಯು ಬದಲಾಗುತ್ತಲೇ ಇರುವ ಕಾರಣ, ಮುಂದಿನ ನಡೆಯು ಇನ್ನೂ ಸ್ಪಷ್ಟವಾಗಿಲ್ಲ ಎಂದು ಮೂಲಗಳು ವಿವರಿಸಿವೆ. 'ಅಗತ್ಯ ಇರುವವರಿಗೆ ರಕ್ಷಣೆ ನೀಡಿದ ಹೆಮ್ಮೆಯ ಇತಿಹಾಸವನ್ನು ಬ್ರಿಟನ್ ಹೊಂದಿದೆ. ಆದರೆ, ತಾತ್ಕಾಲಿಕ ಆಶ್ರಯ ಕೋರುವ ಉದ್ದೇಶದಿಂದ ಬ್ರಿಟನ್ನಿಗೆ ಪ್ರಯಾಣ ಬೆಳೆಸುವ ಅವಕಾಶ ನಮಗೆ ವಲಸೆ ನಿಯಮಗಳಲ್ಲಿ ಅವಕಾಶ ಇಲ್ಲ' ಎಂದು ಆಶ್ರಯ ನೀಡುವಲ್ಲಿ ಬ್ರಿಟನ್ನಿನ ನೀತಿಯ ಬಗ್ಗೆ ಮಾಹಿತಿ ಹೊಂದಿರುವವರು ಪ್ರಕಟಿಸಿದ್ದಾರೆ. 'ಅಂತರರಾಷ್ಟ್ರೀಯ ರಕ್ಷಣೆ ಬಯಸುವವರು ತಾವು ತಲುಪುವ ಮೊದಲ ಸುರಕ್ಷಿತ ದೇಶದ ಆಶ್ರಯ ಕೋರಬೇಕು. ಸುರಕ್ಷಿತವಾಗಿರಲು ಅದೇ ಅತ್ಯಂತ ತ್ವರಿತವಾದ ಮಾರ್ಗ' ಎಂದು ಅವರು ಹೇಳಿದರು.

ಮಂಗಳವಾರ ನಡೆದಿದ್ದೇನು..?

lಬಾಂಗ್ಲಾದೇಶಕ್ಕೆ ಪ್ರಯಾಣ ಕೈಗೊಳ್ಳದಂತೆ ಅಮೆರಿಕ ತನ್ನ ಪ್ರಜೆಗಳಿಗೆ ಸಲಹೆ

lರಾಜಧಾನಿ ಢಾಕಾದಲ್ಲಿನ ಬಹುತೇಕ ಸರ್ಕಾರಿ ಕಚೇರಿಗ ಳಲ್ಲಿ ನೌಕರರ ಹಾಜರಾತಿ ಕಡಿಮೆ ಇತ್ತು.

lಪ್ರತಿಯೊಬ್ಬ ಪೊಲೀಸನ ಸುರಕ್ಷತೆಯನ್ನು ಖಾತ್ರಿಪಡಿಸುವವರೆಗೆ ಮುಷ್ಕರ ನಡೆಸಲಾಗುವುದು ಎಂದು ಬಾಂಗ್ಲಾದೇಶ ಪೊಲೀಸ್‌ ಅಸೋಸಿಯೇಶನ್ (ಬಿಪಿಎ) ಹೇಳಿದೆ

l ಬಾಂಗ್ಲಾದೇಶದಲ್ಲಿ ಅತಂತ್ರರಾಗಿರುವ ಮಹಾ ರಾಷ್ಟ್ರದ 20 ವಿದ್ಯಾರ್ಥಿಗಳನ್ನು ತ್ವರಿತವಾಗಿ ಕರೆತರಲು ವಿಶೇಷ ತಂಡ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಚಿವಾಲಯ ತಿಳಿಸಿದೆ

lಅಸ್ಸಾಂ ಗಡಿಯಲ್ಲಿ ಕಟ್ಟೆಚ್ಚರ

lಕೋಲ್ಕತ್ತದಿಂದ ತಾಯ್ನಾಡಿಗೆ ತೆರಳುತ್ತಿದ್ದ 45 ಬಾಂಗ್ಲಾದೇಶಿ ಪ್ರಜೆಗಳು ಪ್ರಯಾಣ ಮೊಟಕುಗೊಳಿಸಿ, ಭಾರತ ಗಡಿಯ ಪೆತ್ರಾಪೋಲ್‌ ತಾಣದಲ್ಲಿಯೇ ಉಳಿಯಬೇಕಾಯಿತು.

lಏರ್ ಇಂಡಿಯಾ ಮಂಗಳವಾರ ಸಂಜೆ ಯಿಂದಲೇ ದೆಹಲಿಯಿಂದ ಢಾಕಾಕ್ಕೆ ತನ್ನ ನಿಗದಿತ ವಿಮಾನಯಾನವನ್ನು ಪುನ ರಾರಂಭಿಸಿತು. ವಿಸ್ತಾರಾ ಕೂಡ ತನ್ನ ನಿಗದಿತ ವಿಮಾನ ಸೇವೆಗಳನ್ನು ಆಗಸ್ಟ್ 7 ರಿಂದ ಪುನರಾ ರಂಭಿಸಲಿದೆ.

ಖಲೀದಾ ಜಿಯಾ ಬಿಡುಗಡೆ
ಗೃಹ ಬಂಧನಕ್ಕೆ ಒಳಗಾಗಿದ್ದ, ಪ್ರಮುಖ ಪ್ರತಿಪಕ್ಷ ಬಿಎನ್‌ಪಿ (ಬಾಂಗ್ಲಾದೇಶ್‌ ನ್ಯಾಷನಲಿಸ್ಟ್‌ ಪಾರ್ಟಿ) ಮುಖ್ಯಸ್ಥೆ ಹಾಗೂ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ಜಿಯಾ ಅವರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ 2018ರಲ್ಲಿ 17 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಶೇಖ್‌ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶ ತೊರೆದ ಬೆನ್ನಲ್ಲೇ ಜಿಯಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವ ಕುರಿತ ಆದೇಶ ಹೊರಬಿದ್ದಿದೆ. ಪ್ರತಿಭಟನೆ ಸಂದರ್ಭದಲ್ಲಿ ಬಂಧಿಸಿದ್ದವರನ್ನು ಬಿಡುಗಡೆ ಮಾಡುವ ಪ್ರಕ್ರಿಯೆಗೂ ಚಾಲನೆ ದೊರೆತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT