ಒಟ್ಟಾವಾ : ಕೆನಡಾದ ಹ್ಯಾಲಿಫ್ಯಾಕ್ಸ್ ನಗರದ ಬೇಕರಿಯ ‘ವಾಕ್–ಇನ್–ಓವನ್’ನಲ್ಲಿ 19 ವರ್ಷದ ಯುವತಿಯ ಮೃತದೇಹ ಪತ್ತೆಯಾಗಿದೆ.

ಮಮ್ಫೋರ್ಡ್ ರಸ್ತೆಯಲ್ಲಿರುವ ವಾಲ್ಮಾರ್ಟ್ನ ಬೇಕರಿಯೊಂದರಲ್ಲಿ ಶನಿವಾರ ರಾತ್ರಿ 9–30ರ ಸುಮಾರಿಗೆ ಶವ ಪತ್ತೆಯಾಗಿರುವ ಮಾಹಿತಿ ದೊರೆತಿದ್ದು, ಮೃತ ಯುವತಿಯನ್ನು ಇನ್ನೂ ಗುರುತಿಸಲು ಆಗಿಲ್ಲ. ಆಕೆ ಅದೇ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಹ್ಯಾಲಿಫ್ಯಾಕ್ಸ್ನ ಸ್ಥಳೀಯ ಪೊಲೀಸರು (ಎಚ್ಆರ್ಪಿ) ತಿಳಿಸಿದ್ದಾರೆ.

ಮೃತ ಯುವತಿ ತನ್ನ ಸಮುದಾಯಕ್ಕೆ ಸೇರಿದಾಕೆ ಎಂದು ಮೆರಿಟೈಮ್ ಸಿಖ್ ಸಮಾಜವು ತಿಳಿಸಿದೆ. ಆಕೆ ಇತ್ತೀಚೆಗೆ ಭಾರತದಿಂದ ಕೆನಡಾಕ್ಕೆ ತೆರಳಿದ್ದರು ಎಂದು ‘ಗ್ಲೋಬ್ ಆ್ಯಂಡ್ ಮೇಲ್’ ಪತ್ರಿಕೆ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇತರ ಸಂಸ್ಥೆಗಳ ನೆರವಿನೊಂದಿಗೆ ತನಿಖೆ ನಡೆಸುತ್ತಿದ್ದು, ಬೇಕರಿಯನ್ನು ಶನಿವಾರ ರಾತ್ರಿಯಿಂದ ಮುಚ್ಚಲಾಗಿದೆ.

‘ಸಾರ್ವಜನಿಕರು ಪೊಲೀಸರ ತನಿಖೆಗೆ ಸಹಕರಿಸಬೇಕು, ಘಟನೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳನ್ನು ಹಬ್ಬಿಸುವಂತಿಲ್ಲ’ ಎಂದು ಎಚ್ಆರ್ಪಿ ಕಾನ್ಸ್ಟೆಬಲ್ ಮಾರ್ಟಿನ್ ಕ್ರೋಮ್ವೇಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.