ವಿಶ್ವಸಂಸ್ಥೆ, ನ್ಯೂಯಾರ್ಕ್: ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆ ಯಶಸ್ವಿಯಾಗುವುದಿಲ್ಲ. ಆ ದೇಶವು ದುಷ್ಕೃತ್ಯಗಳ ಪರಿಣಾಮವಾಗಿ ತನ್ನದೇ ಸಮಾಜವನ್ನು ಬಲಿ ಪಡೆಯುವ ಸ್ಥಿತಿ ತಲುಪಿರುವುದು 'ಕರ್ಮದ ಫಲ' ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79ನೇ ಅಧಿವೇಶನದಲ್ಲಿ ಮಾತನಾಡಿರುವ ಜೈಶಂಕರ್, 'ಪಾಕಿಸ್ತಾನವು ಅತಿಕ್ರಮಿಸಿರುವ ಭಾರತದ ಭೂಪ್ರದೇಶವನ್ನು ತೊರೆದರೆ ಹಾಗೂ ಭಯೋತ್ಪಾದನೆಯೊಂದಿಗೆ ದೀರ್ಘಾವಧಿಯಿಂದ ಹೊಂದಿರುವ ಬಾಂಧವ್ಯವನ್ನು ಕಡಿದುಕೊಂಡರಷ್ಟೇ ಉಭಯ ದೇಶಗಳ ನಡುವಣ ಬಿಕ್ಕಟ್ಟು ಶಮನಗೊಳ್ಳಲು ಸಾಧ್ಯ' ಎಂದು ಸ್ಪಷ್ಟಪಡಿಸಿದ್ದಾರೆ.

'ಕೆಲವು ದೇಶಗಳು ನಿಯಂತ್ರಣಕ್ಕೆ ಸಿಗದ ಪರಿಸ್ಥಿತಿಯಿಂದಾಗಿ ಹಿಂದುಳಿದಿವೆ. ಆದರೆ, ಇನ್ನೂ ಕೆಲವು ಪ್ರಜ್ಞಾಪೂರ್ವಕವಾಗಿ ಮಾಡಿಕೊಂಡ ಆಯ್ಕೆಗಳಿಂದಾಗಿ ಹಿಂದೆ ಉಳಿದಿವೆ. ನಮ್ಮ ನೆರೆಯ ಪಾಕಿಸ್ತಾನವೇ ಅದಕ್ಕೆ ಉದಾಹರಣೆ' ಎಂದು ಚಾಟಿ ಬೀಸಿದ್ದಾರೆ.

'ಅದು (ಪಾಕಿಸ್ತಾನ) ಇತರ ದೇಶಗಳ ಮೇಲೆ ಉಂಟುಮಾಡಲು ಪ್ರಯತ್ನಿಸಿದ ದುಷ್ಪರಿಣಾಮಗಳನ್ನು ತಾನೇ ಅನುಭವಿಸುತ್ತಿದೆ. ಅದರಿಂದಾಗಿ ಅದರದ್ದೇ ಸಮಾಜ ನಾಶವಾಗುತ್ತಿದೆ. ಇದಕ್ಕಾಗಿ ಜಗತ್ತನ್ನು ದೂರಲು ಸಾಧ್ಯವಿಲ್ಲ. ಅದು ಕರ್ಮ ಫಲ' ಎಂದು ತಿವಿದಿದ್ದಾರೆ.

ಪಾಕಿಸ್ತಾನ ನಡೆಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆ ಎಂದಿಗೂ ಯಶಸ್ಸು ಕಾಣಲಾರದು ಹಾಗೂ ತಕ್ಕ ಪ್ರರಿಣಾಮ ಎದುರಿಸದೆ ತಪ್ಪಿಸಿಕೊಳ್ಳಲೂ ಆಗದು ಎಂದು ಹೇಳಿದ್ದಾರೆ.
.ಗಡಿಯಾಚೆಗಿನ ಭಯೋತ್ಪಾದನೆಗೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ: ಪಾಕ್ಗೆ ಭಾರತ.ಭಯೋತ್ಪಾದನೆ ಬೆಂಬಲಿಸಿದರೆ ಪಾಕಿಸ್ತಾನ ಮೂರು ಹೋಳಾಗಲಿದೆ: ಯೋಗಿ ಎಚ್ಚರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.