ಅಂಕಾರ: ಟರ್ಕಿಯ ಹಡಗು ಫಾತಿಹ್ (ಕೊರೆಯುವಿಕೆ ಹಡಗು) ಕಪ್ಪು ಸಮುದ್ರದಲ್ಲಿ 320 ಶತಕೋಟಿ ಘನ ಮೀಟರ್ ನೈಸರ್ಗಿಕ ಅನಿಲವನ್ನು ಕಂಡುಹಿಡಿದಿರುವುದಾಗಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಶುಕ್ರವಾರ ಹೇಳಿದ್ದಾರೆ.

'ಟರ್ಕಿಯು ಕಪ್ಪು ಸಮುದ್ರದಲ್ಲಿ ಅತಿದೊಡ್ಡ ನೈಸರ್ಗಿಕ ಅನಿಲದ ದಾಸ್ತಾನನ್ನು ಆವಿಷ್ಕಾರ ಮಾಡಿದೆ. 2023ರ ಹೊತ್ತಿಗೆ ಇದು ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ನಿಕ್ಷೇಪ ಬಳಕೆಗೆ ಲಭ್ಯವಾದರೆ, ದೇಶದ ಇಂಧನ ಆಮದು ಪ್ರಮಾಣ ಭಾರಿ ಪ್ರಮಾಣದಲ್ಲಿ ತಗ್ಗಲಿದೆ’ ಎಂದು ಎರ್ಡೊಗನ್ ಅವರು ಇಸ್ತಾಂಬುಲ್‌ನ ಐತಿಹಾಸಿಕ ಡಾಲ್ಮಾಬಾಹ್ಸ್ ಅರಮನೆಯಲ್ಲಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ‘ಅನಾಡೋಲು’ ವರದಿ ಮಾಡಿದೆ.

‘ಈ ಮೊದಲ ಬಾವಿಯಲ್ಲಿ ಪತ್ತೆಯಾಗಿರುವ ನಿಕ್ಷೇಪವು ಶ್ರೀಮಂತ ಸಂಪನ್ಮೂಲದ ಭಾಗವಾಗಿದೆ’ ಎಂದು ಎರ್ಡೊಗನ್ ಹೇಳಿದ್ದಾರೆ.

ಮೆಡಿಟರೇನಿಯನ್ ಸಮುದ್ರದಲ್ಲಿ ಟರ್ಕಿ ಕೈಗೊಂಡಿರುವ ಪರಿಶೋಧನೆಯಲ್ಲೂ ಇದೇ ರೀತಿಯ ಒಳ್ಳೆಯ ಸುದ್ದಿ ಬರಲಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊರೆಯುವಿಕೆ ಹಡಗು ಫಾತಿಹ್ ಕಪ್ಪು ಸಮುದ್ರದಲ್ಲಿ ಜುಲೈ 20ರಿಂದಲೇ ಕೊರೆಯುವ ಕೆಲಸ ಆರಂಭಿಸಿತ್ತು ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.