ಕೀವ್ (ಉಕ್ರೇನ್): ರಷ್ಯಾ ನಡೆಸುತ್ತಿರುವ ಯುದ್ಧವನ್ನು ಅಂತ್ಯಗೊಳಿಸಲು ಮತ್ತು ಭವಿಷ್ಯದಲ್ಲಿ ಇಂತಹ ಸಂಘರ್ಷ ಏರ್ಪಡದಂತೆ ನೋಡಿಕೊಳ್ಳಲು ರಾಜತಾಂತ್ರಿಕ ಸಾಮರ್ಥ್ಯದಿಂದಷ್ಟೇ ಸಾಧ್ಯ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾನುವಾರ ರಾತ್ರಿ ಹೇಳಿದ್ದಾರೆ.

ವಿಡಿಯೊ ಭಾಷಣದದಲ್ಲಿ ಅವರು, 'ಸಾಮರ್ಥ್ಯವಿಲ್ಲದ ರಾಜತಾಂತ್ರಿಕತೆಯಿಂದ ಏನನ್ನೂ ನಿರೀಕ್ಷಿಸಲಾಗದು ಎಂಬುದನ್ನು ನಾವು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದೇವೆ' ಎಂದು ತಿಳಿಸಿದ್ದಾರೆ.

'ರಾಜತಾಂತ್ರಿಕ ಗುರಿಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳದಿದ್ದರೆ, ಶಸ್ತ್ರಾಸ್ತ್ರಗಳು ಕೆಲಸಕ್ಕೆ ಬರುವುದಿಲ್ಲ. ಹಾಗಾಗಿಯೇ, ಸಾಮರ್ಥ್ಯ ಮತ್ತು ರಾಜತಾಂತ್ರಕತೆಯು ಒಂದು ಕೈಯಲ್ಲಿ (ಒಟ್ಟಾಗಿ) ಕಾರ್ಯನಿರ್ವಹಿಸಬೇಕು' ಎಂದಿದ್ದಾರೆ.

ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಹಾಗೂ ದೀರ್ಘಾವಧಿಗೆ ಶಾಂತಿ ನೆಲೆಸುವಂತೆ ಮಾಡಲು ಇರುವ ಏಕೈಕ ಮಾತ್ರ ಇದಾಗಿದೆ ಎಂದು ಪ್ರತಿಪಾದಿಸಿದ್ದಾರೆ.
.ಉಕ್ರೇನ್ ಯುದ್ಧ ಕೊನೆಗೊಳಿಸುವ ಟ್ರಂಪ್ ಯೋಜನೆಗಳ ಬಗ್ಗೆ ತಿಳಿದಿಲ್ಲ: ಝೆಲೆನ್ಸ್ಕಿ.ಉತ್ತರ ಕೊರಿಯಾ ಮಧ್ಯಪ್ರವೇಶಿಸಿದರೆ ವಿಶ್ವ ಯುದ್ಧ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ.
ಶಾಂತಿ ಸ್ಥಾಪನೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಒಪ್ಪಿಸುವಂತೆ ಅಮೆರಿಕ ಹಾಗೂ ನ್ಯಾಟೊ ಮಿತ್ರರಾಷ್ಟ್ರಗಳನ್ನು ಒತ್ತಾಯಿಸಿರುವ ಝೆಲೆನ್ಸ್ಕಿ, ಯುದ್ಧ ನ್ಯಾಯಯುತವಾಗಿ ಅಂತ್ಯವಾಗಬೇಕು. ಅದರಂತೆ ಪ್ರಾಮಾಣಿಕ ರಾಜತಾಂತ್ರಿಕ ಪ್ರಯತ್ನಕ್ಕೆ ಉಕ್ರೇನ್ ಮುಕ್ತವಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ರಷ್ಯಾ, ತನ್ನ ನೆರೆ ರಾಷ್ಟ್ರವಾಗಿರುವ ಉಕ್ರೇನ್ ಮೇಲೆ 2022ರ ಫೆಬ್ರುವರಿಯಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿತ್ತು. ಆಗಿನಿಂದ ಯುದ್ಧ ಮುಂದುವರಿದಿದೆ. ಈವರೆಗೆ ಸಾವಿರಾರು ಜನರು ಮೃತಪಟ್ಟಿದ್ದು, ಲಕ್ಷಾಂತರ ಉಕ್ರೇನಿಯರು ನೆಲೆ ಕಳೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.