ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿರುವ ಕಮಲಾ ಹ್ಯಾರಿಸ್ ಅವರು ಜೈವಿಕವಾಗಿ ತಾಯಿಯಾದವರಲ್ಲ. ಹಾಗಾಗಿ, ಅವರಿಗೆ 'ವಿನಮ್ರತೆ' ಇಲ್ಲ ಎಂದು ರಿಪಬ್ಲಿಕ್ ಪಕ್ಷದ ಸಾರಾ ಹುಕಬೀ ಸ್ಯಾಂಡರ್ಸ್ ಆರೋಪಿಸಿದ್ದರು. ಇದಕ್ಕೆ, ಕಮಲಾ ಭಾನುವಾರ ತಿರುಗೇಟು ನೀಡಿದ್ದಾರೆ.

ಆರ್ಕನಾಸ್ ಗವರ್ನರ್ ಸಾರಾ ಅವರು ಕುಟುಂಬದ ಬಗ್ಗೆ ಹೊಂದಿರುವ ದೃಷ್ಟಿಕೋನವು ಈ ಕಾಲಘಟ್ಟಕ್ಕೆ ಹೊಂದುವುದಿಲ್ಲ ಎಂದಿರುವ ಕಮಲಾ, ಆಧುನಿಕ ಕುಟುಂಬ ವ್ಯವಸ್ಥೆ, ತಮ್ಮ ಪತಿ ಡೌಗ್ ಎಮ್ಹಾಫ್ ಹಾಗೂ ಅವರ ಮೊದಲ ಮದುವೆಯ ನಂತರ ಹುಟ್ಟಿದ್ದ ಇಬ್ಬರು ಮಕ್ಕಳ ಕುರಿತು ಚರ್ಚಿಸಿದ್ದಾರೆ.

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪರ ಮಿಚಿಗನ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ಸಮಾವೇಶ ನಡೆಸಿದ್ದ ಸ್ಯಾಂಡರ್ಸ್, ತಾವು ವಿನಮ್ರವಾಗಿ ಇರಲು ತಮ್ಮ ಮಕ್ಕಳೇ ಕಾರಣ. ಹ್ಯಾರಿಸ್ ಅವರಿಗೆ ವಿನಮ್ರವಾಗಿ ಇರಲು ಅಂತಹ ಮಕ್ಕಳು ಇಲ್ಲ ಎಂದು ಹೇಳಿದ್ದರು.

ಅಮೆರಿಕ ಉಪಾಧ್ಯಕ್ಷೆಯೂ ಆಗಿರುವ ಕಮಲಾ, ಜನಪ್ರಿಯ 'ಕಾಲ್ ಹರ್ ಡ್ಯಾಡಿ' ಪಾಡ್‌ಕಾಸ್ಟ್‌ನಲ್ಲಿ ಭಾನುವಾರ ಸ್ಯಾಂಡರ್ಸ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದಾರೆ. 'ವಿನಮ್ರವಾಗಿರಲು ಬಯಸದ ಹಲವು ಮಹಿಳೆಯರು ಇಲ್ಲಿದ್ದಾರೆ ಎಂಬುದನ್ನು ಸಾರಾ ಅರ್ಥಮಾಡಿಕೊಂಡಂತಿಲ್ಲ. ಹಲವು ಮಹಿಳೆಯರು ತಮ್ಮ ಜೀವನದಲ್ಲಿ ಸಾಕಷ್ಟು ಪ್ರೀತಿ ಗಳಿಸಿದ್ದಾರೆ. ತಮ್ಮದೇ ಕುಟುಂಬ ಮತ್ತು ಮಕ್ಕಳನ್ನು ಹೊಂದಿದ್ದಾರೆ. ಮಹಿಳೆಯರು ಒಬ್ಬರನ್ನೊಬ್ಬರು ಮೇಲೆತ್ತುವುದು ಮುಖ್ಯ ಎಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.

ಕುಟುಂಬವನ್ನು ಹಲವು ರೀತಿಯಲ್ಲಿ ಕಾಣಬಹುದು ಎಂದಿರುವ ಕಮಲಾ, 'ನಾವು ರಕ್ತ ಸಂಬಂಧದ ಮೂಲಕ ಕುಟುಂಬವನ್ನು ಹೊಂದಿದ್ದೇವೆ. ಹಾಗೆಯೇ, ಪ್ರೀತಿಯ ಮೂಲಕವೂ ಕುಟುಂಬವನ್ನು ಹೊಂದಬಹುದು. ನನಗೆ ಎರಡೂ ರೀತಿಯ ಕುಟುಂಬಗಳಿವೆ. ಅದು ನನಗೆ ದೊರೆತ ನಿಜವಾದ ಆಶೀರ್ವಾದ ಎಂದು ಪರಿಗಣಿಸುತ್ತೇನೆ' ಎಂದಿದ್ದಾರೆ.

ಮುಂದುವರಿದು, 'ನನಗಿಬ್ಬರು ಮುದ್ದಾದ ಮಕ್ಕಳಿದ್ದಾರೆ – ಕೋಲ್ ಮತ್ತು ಎಲ್ಲಾ. ಅವರು ನನ್ನನ್ನು ಮೊಮಲಾ ಎನ್ನುತ್ತಾರೆ. ನಾವು ಅತ್ಯಂತ ಆಧುನಿಕ ಕುಟುಂಬದಲ್ಲಿದ್ದೇವೆ. ನನ್ನ ಪತಿಯ ಮಾಜಿ ಪತ್ನಿ ನನಗೆ ಸ್ನೇಹಿತೆಯಾಗಿದ್ದಾರೆ' ಎಂದು ತಿಳಿಸಿದ್ದಾರೆ.

ಸಂತಾನ ಹಕ್ಕುಗಳು, ಲೈಂಗಿಕ ದೌರ್ಜನ್ಯ ಮತ್ತು ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚಿಸಲು ಅಲೆಕ್ಸ್ ಕೂಪರ್ ಅವರು ಆಯೋಜಿಸಿದ್ದ ಪಾಡ್‌ಕಾಸ್ಟ್ ಕಾರ್ಯಕ್ರಮಕ್ಕೆ ಕಮಲಾ ಹಾಜರಾಗಿದ್ದರು.