ವಿಶ್ವಸಂಸ್ಥೆ: ಸಿರಿಯಾ ವಿರುದ್ಧದ 77 ಆರೋಪಗಳ ಬಗ್ಗೆ ತಜ್ಞರು ತನಿಖೆ ನಡೆಸಿದ್ದಾರೆ. ಈ ಪೈಕಿ 17 ಪ್ರಕರಣಗಳಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿರುವ ಸಾಧ್ಯತೆಗಳಿವೆ ಎಂದು ಅಂತರರಾಷ್ಟ್ರೀಯ ರಾಸಾಯನಿಕ ಶಸ್ತ್ರಾಸ್ತ್ರ ನಿಷೇಧ ಕಾವಲು ಸಂಸ್ಥೆಯ ಮುಖ್ಯಸ್ಥರು ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.

‘ಸಿರಿಯಾವು ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶಕ್ಕೆ ಸೇರ್ಪಡೆಯಾಗಿ ಎಂಟು ವರ್ಷಗಳಾಗಿವೆ. ಈ ವಿಷಯ ನಿಜಕ್ಕೂ ಚಿಂತಾಜನಕವಾಗಿದೆ’ ಎಂದು ರಾಸಾಯನಿಕ ಶಸ್ತ್ರಾಸ್ತ್ರ ನಿಷೇಧ ಸಂಸ್ಥೆಯ (ಒಪಿಸಿಡಬ್ಲ್ಯು) ಮುಖ್ಯಸ್ಥ ಫರ್ನಾಂಡೊ ಏರಿಯಾಸ್ ಹೇಳಿದ್ದಾರೆ.

‘ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ದೊಡ್ಡ ಕಂಟೇನರ್ವೊಂದರಿಂದ ಸಂಗ್ರಹಿಸಿದ ಮಾದರಿಯಲ್ಲಿ ರಾಸಾಯನಿಕ ಶಸ್ತ್ರಾಸ್ತ್ರದ ಅಂಶವು ಪತ್ತೆಯಾಗಿತ್ತು. ಈ ಬಗ್ಗೆ ಒಪಿಸಿಡಬ್ಲ್ಯು ಮುಂದಿನ ಸಮಾಲೋಚನೆ ವೇಳೆ ಸಿರಿಯಾದೊಂದಿಗೆ ಚರ್ಚಿಸಲಿದೆ’ ಎಂದು ಅವರು ಗುರುವಾರ ತಿಳಿಸಿದರು.

ಮುಂಬೈನಲ್ಲಿ ಅನಿಲ ಸೋರಿಕೆ: ಉಸಿರಾಟ ಸಮಸ್ಯೆ ಎದುರಿಸಿದ ಜನ

‘ಈ ಬಗ್ಗೆ ಪರಿಶೀಲನೆ ನಡೆಸಲು ಒಪಿಸಿಡಬ್ಲ್ಯು ತಂಡವನ್ನು ಮೇ 18ರಿಂದ ಜೂನ್ 1ರವರೆಗೆ ಸಿರಿಯಾಗೆ ಕಳುಹಿಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ವೀಸಾವನ್ನು ಕಳುಹಿಸುವಂತೆ ಸಿರಿಯಾ ಸರ್ಕಾರಕ್ಕೆ ಪತ್ರದ ಮೂಲಕ ತಿಳಿಸಲಾಗಿತ್ತು. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಹಾಗಾಗಿ ಈ ಭೇಟಿಯನ್ನು ಮೇ 28ಕ್ಕೆ ಮುಂದೂಡಲಾಯಿತು. ಆದರೆ ಮೇ 26ರ ತನಕ ಇದಕ್ಕೂ ಯಾವುದೇ ಪ್ರತಿಕ್ರಿಯೆ ಸಿಗದಿದ್ದ ಕಾರಣ, ಭೇಟಿಯನ್ನು ಮತ್ತೆ ಮುಂದೂಡಲು ನಿರ್ಧರಿಸಲಾಗಿದೆ’ ಎಂದು ಅವರು ಹೇಳಿದರು.

ಚೀನಾ: ಹೊಸ ತಲೆಮಾರಿನ ಹವಾಮಾನ ಉಪಗ್ರಹ ಯಶಸ್ವಿ ಉಡಾವಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.