ವಾಷಿಂಗ್ಟನ್: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜ್ ವಿರುದ್ದ ಅಮೆರಿಕದಲ್ಲಿ ಮತ್ತೊಂದು ಹೊಸ ದೋಷಾರೋಪ ಹೊರಿಸಲಾಗಿದೆ.

‘ಯುರೋಪ್ ಮತ್ತು ಏಷ್ಯಾದಲ್ಲಿ ಹ್ಯಾಕರ್‌ಗಳನ್ನು ನೇಮಿಸಿಕೊಳ್ಳಲು ಅಸ್ಸಾಂಜ್ ಉದ್ದೇಶಿಸಿದ್ದರು. ಈ ಮೂಲಕ ತನ್ನ ವೆಬ್‌ಸೈಟ್‌ಗೆ ವರ್ಗೀಕೃತ ಮಾಹಿತಿಗಳನ್ನು ಪಡೆದುಕೊಳ್ಳುವುದಾಗಿತ್ತು. ಜತೆಗೆ, ಹ್ಯಾಕಿಂಗ್ ತಂಡಗಳ ಜತೆ ಸೇರಿಕೊಂಡು ವಿವಿಧ ಮಾಹಿತಿಗಳನ್ನು ಪಡೆಯಲು ಸಂಚು ರೂಪಿಸಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ಲುಲ್‌ಝಸೆಕ್ ತಂಡ ಮತ್ತು ಕೆಲವು ಅನಾಮಧೇಯ ಹ್ಯಾಕರ್‌ಗಳ ಜತೆ ಅಸ್ಸಾಂಜ್ ಸಂಪರ್ಕ ಹೊಂದಿದ್ದರು. ಇವರ ಮೂಲಕ ಮಾಹಿತಿಗಳನ್ನು ಕದಿಯುತ್ತಿದ್ದರು. 17 ವರ್ಷದ ಬಾಲಕನೊಬ್ಬನ ಜತೆಯೂ ಅಸ್ಸಾಂಜ್ ಕೆಲಸ ಮಾಡಿದ್ದರು. ಬ್ಯಾಂಕ್‌ನಿಂದ ಕದ್ದ ಮಾಹಿತಿಯನ್ನು ಅಸ್ಸಾಂಜ್‌ಗೆ ಬಾಲಕ ನೀಡಿದ್ದ. ಸರ್ಕಾರದ ಹಿರಿಯ ಅಧಿಕಾರಿಗಳ ಧ್ವನಿ ಮುದ್ರಿತ ಆಡಿಯೊವನ್ನು ಕಳ್ಳತನ ಮಾಡುವಂತೆಯೂ ಬಾಲಕನಿಗೆ ಅಸ್ಸಾಂಜ್ ಸೂಚಿಸಿದ್ದರು’ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಸ್ಸಾಂಜ್ ಪರ ವಕೀಲ ಬೆರ್ರಿ ಪೊಲ್ಲಾಕ್, ‘ಸರ್ಕಾರ ಪತ್ರಕರ್ತರಿಗೆ ಬೆದರಿಕೆವೊಡ್ಡಲಾಗುತ್ತಿದೆ. ಇದರಿಂದ, ಮಾಹಿತಿ ಪಡೆಯುವ ಹಕ್ಕನ್ನು ಸಾರ್ವಜನಿಕರಿಗೆ ನಿರಾಕರಿಸುವ ಪ್ರಯತ್ನ ಮಾಡಲಾಗುತ್ತಿದೆ. ಈಗ ದೋಷಾರೋಪ ಹೊರಿಸುವುದು ಮತ್ತೊಂದು ಅಧ್ಯಾಯ’ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.