ಯಮೆನ್: ಯಮೆನ್ ದೇಶದ ನೂತನ ಪ್ರಧಾನಿಯಾಗಿ ಪ್ರಸ್ತುತ ವಿದೇಶಾಂಗ ಸಚಿವರಾಗಿರುವ ಅಹಮದ್ ಅವದ್ ಬಿನ್ ಮುಬಾರಕ್ ಅವರನ್ನು ನೇಮಿಸುವುದಾಗಿ ಅಲ್ಲಿನ ಅಧ್ಯಕ್ಷೀಯ ನಾಯಕತ್ವ ಮಂಡಳಿ ಘೋಷಣೆ ಮಾಡಿದೆ.

ನಿರ್ಗಮಿತ ಪ್ರಧಾನಿ ಮೈನ್ ಅಬ್ದುಲ್ ಮಲ್ಲಿಕ್ ಸಯೀದ್ ಅವರು ಅಧ್ಯಕ್ಷೀಯ ನಾಯಕತ್ವ ಮಂಡಳಿಯ ಅಧ್ಯಕ್ಷರ ಸಲಹೆಗಾರರಾಗಿರಲಿದ್ದಾರೆ ಎಂದು ಯಮೆನ್ ಸಂಪುಟ ಸಭೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಅಹಮದ್ ಬಿನ್ ಮುಬಾರಕ್ ಅವರು 2015 ರಲ್ಲಿ ಆಗಿನ ಅಧ್ಯಕ್ಷ ‘ಅಬ್ದ್-ರಬ್ಬು ಮನ್ಸೂರ್ ಹಾಡಿ’ ಅವರೊಂದಿಗೆ ಅಧಿಕಾರಕ್ಕಾಗಿ ಹೋರಾಟ ನಡೆಸಿದ್ದರು. ಈ ವೇಳೆ ದೇಶದ ಇರಾನ್-ಸಂಘಟಿತ ಹೌತಿಗಳು ಅವರನ್ನು ಅಪಹರಿಸಿದ್ದರು. ಹೌತಿಗಳಿಂದ ಬಿಡುಗಡೆಯಾಗಿ ಬಂದ ಬಳಿಕ ಯಮೆನ್ ರಾಜಕೀಯದಲ್ಲಿ ಅಹಮದ್ ಮುನ್ನಲೆಗೆ ಬಂದಿದ್ದರು.

2020ರಿಂದ ಯಮೆನ್ ದೇಶದ ವಿದೇಶಾಂಗ ಸಚಿವರಾಗಿ ಅಹಮದ್ ಅವದ್ ಕಾರ್ಯನಿರ್ವಹಿಸುತ್ತಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.