ಕಲಿಕೆ ಮತ್ತು ಗ್ರಹಿಕೆಯ ದೃಷ್ಟಿಯಿಂದ ನ್ಯಾಯಾಂಗದಲ್ಲಿ ಪ್ರಾದೇಶಿಕ ಭಾಷೆಗೆ ಒತ್ತು ಸಿಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯಗಳು ನೀಡುವ ತೀರ್ಪುಗಳು ಹೆಚ್ಚು ಪರಿಣಾಮಕಾರಿಯಾಗಿ ಜನಸಮೂಹಕ್ಕೆ ತಲುಪಬೇಕಾದರೆ, ಅವು ಜನಸಾಮಾನ್ಯ
ರಿಗೆ ಅರ್ಥವಾಗುವ ಭಾಷೆಯಲ್ಲಿ ಇರಬೇಕು. ಅಷ್ಟು ಮಾತ್ರವಲ್ಲ, ಸರಳವಾಗಿಯೂ ಇರಬೇಕು. ಈ ದಿಸೆಯಲ್ಲಿ ಕೆಲವು ತೊಡಕುಗಳಿದ್ದು, ನ್ಯಾಯಾಲಯಗಳು ಅವನ್ನು ಸರಿಪಡಿಸಲು ಮುಂದಾಗಬೇಕಿದೆ.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ನ ಎಲ್ಲ ಕಲಾಪಗಳು ಇಂಗ್ಲಿಷ್ನಲ್ಲಿ ಇರಬೇಕು ಎಂದು ಸಂವಿಧಾನದ ವಿಧಿ 348(1)(ಎ) ಹೇಳುತ್ತದೆ. ಆದರೆ ವಿಧಿ 348 (2) ಮತ್ತು ರಾಜಭಾಷಾ ಅಧಿನಿಯಮ– 1963ರ ಸೆಕ್ಷನ್ 7, ಆಯಾ ರಾಜ್ಯವು ರಾಷ್ಟ್ರಪತಿ ಮತ್ತು ರಾಜ್ಯಪಾಲರ ಒಪ್ಪಿಗೆ ಪಡೆದು ಇಂಗ್ಲಿಷ್ ಜೊತೆಗೆ ತಮ್ಮ ಪ್ರಾದೇಶಿಕ ಭಾಷೆಯನ್ನು ಬಳಸಿಕೊಳ್ಳಬಹುದು ಎಂದು ಹೇಳುತ್ತದೆ. ಸುಪ್ರೀಂ ಕೋರ್ಟ್ ತನ್ನ 2018– 19ರ ವಾರ್ಷಿಕ ವರದಿಯಲ್ಲಿ ಸಹ, ದೂರುದಾರರಿಗೆ ಇಂಗ್ಲಿಷ್ ಅರ್ಥಮಾಡಿಕೊಳ್ಳುವುದು ಕಷ್ಟವಾದ್ದರಿಂದ ತೀರ್ಪುಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಅನುವಾದ ಮಾಡಬೇಕಾದ ಅಗತ್ಯವನ್ನು ಉಲ್ಲೇಖಿಸಿದೆ.

ನ್ಯಾಯಾಲಯದ ಕಲಾಪಗಳಲ್ಲಿ ರಾಜ್ಯದ ಆಡಳಿತ ಭಾಷೆಯನ್ನು ಬಳಸಲು ಅನುಮತಿ ನೀಡುವಂತೆ ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳು 2012ರಲ್ಲಿ ಪ್ರಸ್ತಾವ ಸಲ್ಲಿಸಿದ್ದವು. ಆದರೆ ಈ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಅನುಮತಿ ದೊರೆತಿಲ್ಲ. ಏತನ್ಮಧ್ಯೆ, ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರ ಮಾಡಲು ಸುಪ್ರೀಂ ಕೋರ್ಟ್ ಒಂದು ಯೋಜನೆಯನ್ನು ಆರಂಭಿಸಿದೆ. 18 ವಿಷಯಗಳಿಗೆ ಸಂಬಂಧಿಸಿದ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರ ಮಾಡಲು ಕ್ರಮ ಕೈಗೊಂಡಿದೆ. ಈ ಪಟ್ಟಿಯಲ್ಲಿ ಕಾರ್ಮಿಕರ ಕಲ್ಯಾಣ, ಸೇವಾ ನಿಯಮ, ಕ್ರಿಮಿನಲ್ ಅಪರಾಧಗಳು, ಕೌಟುಂಬಿಕ ವ್ಯವಹಾರ, ಭೂಸ್ವಾಧೀನ, ಗ್ರಾಹಕ ಸಂರಕ್ಷಣೆಯಂತಹ ವಿಷಯಗಳು ಸೇರಿವೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ತೀರ್ಪುಗಳನ್ನು ವಿವಿಧ ಭಾಷೆಗಳಿಗೆ ಅನುವಾದ ಮಾಡುವ ಸಲುವಾಗಿ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯವರು ಸಮಿತಿಯೊಂದನ್ನು (ಎಐ ಅಸಿಸ್ಟೆಡ್ ಲೀಗಲ್
ಟ್ರ್ಯಾನ್ಸ್ಲೇಷನ್ ಅಡ್ವೈಸರಿ ಕಮಿಟಿ) ರಚಿಸಿದ್ದಾರೆ.

ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಸುಪ್ರೀಂ ಕೋರ್ಟ್ ನೀಡಿರುವ 31,184 ತೀರ್ಪುಗಳನ್ನು ವಿವಿಧ ಭಾಷೆಗಳಿಗೆ ಅನುವಾದ ಮಾಡಲಾಗಿದೆ. ಇದರಲ್ಲಿ 1,898 ತೀರ್ಪುಗಳು ಕನ್ನಡದಲ್ಲಿ ಲಭ್ಯ ಇವೆ. ವಿವಿಧ ಹೈಕೋರ್ಟ್ಗಳ 4,983 ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದ ಮಾಡಲಾಗಿದ್ದು, ಅವು ಆಯಾ ಹೈಕೋರ್ಟ್ನ ವೆಬ್ಸೈಟ್ನಲ್ಲಿ ಲಭ್ಯ ಇವೆ.

ತೀರ್ಪುಗಳ ಅನುವಾದ ಕಾರ್ಯ ಸುಗಮವಾಗಲೆಂದು ಕೇಂದ್ರ ಕಾನೂನು ಸಚಿವಾಲಯವು ಗುಜರಾತಿ, ಮಲಯಾಳ, ಮರಾಠಿ, ಪಂಜಾಬಿ, ತಮಿಳು, ತೆಲುಗು, ಉರ್ದು ಮತ್ತು ಬಂಗಾಳಿ ಭಾಷೆಗಳಲ್ಲಿ ಕಾನೂನು ಶಬ್ದ ಕೋಶವನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಆದರೆ ಈ ಪಟ್ಟಿಯಲ್ಲಿ ಕನ್ನಡ ಶಬ್ದಕೋಶ ಇಲ್ಲದಿರುವುದು ನಮ್ಮ ಪ್ರತಿನಿಧಿಗಳ ಗಮನಕ್ಕೆ ಬಂದಿಲ್ಲವೆಂದು ಕಾಣುತ್ತದೆ.

ಇಂಗ್ಲಿಷ್ನಲ್ಲಿರುವ ತೀರ್ಪನ್ನು ಯಥಾವತ್ತಾಗಿ ಪ್ರಾದೇಶಿಕ ಭಾಷೆಗೆ ಭಾಷಾಂತರಿಸಿದರೆ ಅದು ಜನ
ಸಾಮಾನ್ಯರಿಗೆ ಅರ್ಥವಾಗುತ್ತದೆಯೇ ಎಂಬುದು ಪ್ರಶ್ನೆ. ಏಕೆಂದರೆ, ತೀರ್ಪುಗಳಲ್ಲಿರುವ ಪದಗುಚ್ಛ ಕೆಲವೊಮ್ಮೆ ಕಾನೂನು ತಜ್ಞರಿಗೂ ಅರ್ಥವಾಗುವುದಿಲ್ಲ. ಬ್ರಿಟಿಷ್ ಆಡಳಿತವಿದ್ದ ಕಾಲದಲ್ಲಿ ಬಳಸುತ್ತಿದ್ದ ಲ್ಯಾಟಿನ್ ಪದಗಳನ್ನು ಈಗಲೂ ತೀರ್ಪುಗಳಲ್ಲಿ ಕಾಣಬಹುದು. ಉದಾಹರಣೆಗೆ, Mutatis Mutandis, Ipso facto ಎಂಬಂತಹ ಪದಗಳನ್ನು ಕನ್ನಡಕ್ಕೆ ಭಾಷಾಂತರಿಸಿದರೂ ಅವು ಓದುಗರಿಗೆ ಅರ್ಥವಾಗುವುದು ಸಂದೇಹಾಸ್ಪದ. ಆದರೆ,nಹೀಗೆ ಮಾಡದೆ ಅನ್ಯಮಾರ್ಗವಿಲ್ಲ. ನ್ಯಾಯಾಲಯ ನೀಡುವ ತೀರ್ಪು ಹೇಗಿರುತ್ತದೋ ಅದೇ ರೀತಿಯಲ್ಲಿ ಭಾಷಾಂತರಿಸದಿದ್ದರೆ ಜನರಲ್ಲಿ ಗೊಂದಲ ಉಂಟಾಗುವ ಸಂಭವ
ಇರುತ್ತದೆ. ಜೊತೆಗೆ ನ್ಯಾಯಾಲಯ ನಿಂದನೆಗೆ ಗುರಿಯಾಗುವ ಸಾಧ್ಯತೆಯೂ ಇರುತ್ತದೆ. ತೀರ್ಪಿನ ಭಾಷಾಂತರದ ಜೊತೆಗೆ ಅದರ ಸಾರಾಂಶವನ್ನು ಸರಳ ಭಾಷೆಯಲ್ಲಿ ನೀಡಿ, ಮೂಲ ತೀರ್ಪನ್ನೂ ಓದಿಕೊಳ್ಳಬೇಕೆಂಬ ಸೂಚನೆ ನೀಡಿದರೆ ಸಮಸ್ಯೆ ಬಗೆಹರಿಯಬಹುದು.

ಇತ್ತೀಚಿನ ವರ್ಷಗಳಲ್ಲಿ ನ್ಯಾಯಾಲಯಗಳು ನೀಡುತ್ತಿರುವ ತೀರ್ಪುಗಳ ವಿವರವುಳ್ಳ ಪುಟಗಳ ಸಂಖ್ಯೆ ಬಹಳಷ್ಟು ಹೆಚ್ಚಿದೆ. ತೀರ್ಪು ಬರೆಯುವಾಗ ನ್ಯಾಯಾಲಯಗಳು ತಮ್ಮ ಮುಂದಿರುವ ಪ್ರಕರಣವನ್ನು
ಹಲವು ನೆಲೆಗಳಿಂದ ಪರಿಶೀಲಿಸಬೇಕಾದ ಕಾರಣ ಸುದೀರ್ಘವಾದ ವಿವರಣೆ ಅಗತ್ಯವೂ ಆಗಿರಬಹುದು. ಐವತ್ತು ಮತ್ತು ಅರವತ್ತರ ದಶಕದವರೆಗಿನ ತೀರ್ಪುಗಳು ಐದಾರು ಪುಟಗಳನ್ನು ಮೀರುತ್ತಿರಲಿಲ್ಲ. ವಿಷಯ ಎಷ್ಟೇ ಮುಖ್ಯವಾಗಿದ್ದರೂ ತೀರ್ಪು ಪುಟಗಟ್ಟಲೆ ಇರುತ್ತಿರಲಿಲ್ಲ. ಆದರೆ ಒಂದೆರಡು ದಶಕಗಳಿಂದ ತೀರ್ಪುಗಳು 500ರಿಂದ 1,000 ಪುಟ ಮೀರುವುದನ್ನು ನೋಡುತ್ತಿದ್ದೇವೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಮೀಸಲಾತಿಗೆ ಸಂಬಂಧಿಸಿದ 1951ರ ಚಂಪಕಮ್ ದೊರೈರಾಜ್ ಪ್ರಕರಣದ ತೀರ್ಪು ನಾಲ್ಕು ಪುಟಗಳನ್ನು ಮೀರಿರಲಿಲ್ಲ. ಇದೇ ವಿಷಯವಾಗಿ 1992ರಲ್ಲಿ ಬಂದ ಇಂದಿರಾ ಸಾಹ್ನಿ ಪ್ರಕರಣದ ತೀರ್ಪು ಸುಮಾರು 560 ಪುಟಗಳಷ್ಟು ಹರಡಿಕೊಂಡಿದೆ.

ಭಾರತದ ಪಥ ಬದಲಿಸಿದ 1973ರ ಕೇಶವಾನಂದ ಭಾರತಿ ಪ್ರಕರಣದ ತೀರ್ಪು 700 ಪುಟಗಳನ್ನು ಒಳಗೊಂಡಿದ್ದರೆ, ನಂತರ ಬಂದ ಎಸ್.ಪಿ.ಗುಪ್ತಾ ಪ್ರಕರಣದ ತೀರ್ಪು 800 ಪುಟಗಳಿಗೂ ಅಧಿಕ. ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ತೀರ್ಪು 1,042 ಪುಟಗಳಷ್ಟು ಇದ್ದರೆ, ಆಧಾರ್ ಕುರಿತ (ನ್ಯಾಯಮೂರ್ತಿ ಪುಟ್ಟಸ್ವಾಮಿ) ತೀರ್ಪು 1,448 ಪುಟಗಳನ್ನು ಒಳಗೊಂಡಿದೆ. ವಕೀಲರು, ಕಾನೂನು ಪಾಠ ಮಾಡುವವರು ಹಾಗೂ ಕಾನೂನು ವಿದ್ಯಾರ್ಥಿಗಳು ಈ ತೀರ್ಪುಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಈ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳದೇ ಇರುವ ಸುಶಿಕ್ಷಿತರು ಆಸಕ್ತಿ ಹೊಂದಿದ್ದಾಗಿಯೂ ಈ ಬಗೆಯ ದೀರ್ಘ ತೀರ್ಪುಗಳನ್ನು ಓದಲು ಉತ್ಸಾಹ ತೋರುವರೇ ಎಂಬುದು ಪ್ರಶ್ನೆ. ಬಳಸುವ ಭಾಷೆಯೂ ಕೆಲವೊಮ್ಮೆ ತೊಡಕಾಗಿ ಪರಿಣಮಿಸಬಹುದು.

ಬ್ರಿಟನ್, 2010ರಲ್ಲಿ ಪ್ಲೇನ್ ರೈಟಿಂಗ್ ಆ್ಯಕ್ಟ್ ಜಾರಿ ಗೊಳಿಸಿದಾಗಿನಿಂದ ತೀರ್ಪುಗಳ ಗುಣಮಟ್ಟ ಸುಧಾರಿಸಿದೆ ಎಂದು ವರದಿಗಳು ತಿಳಿಸುತ್ತವೆ. ಕೆಲವು ತಿಂಗಳ ಹಿಂದೆ, ನಮ್ಮ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು ನ್ಯಾಯಾಲಯದ ತೀರ್ಪುಗಳ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾ ‘ತೀರ್ಪುಗಳು ಓದುಗರಲ್ಲಿ ಗೊಂದಲ ಉಂಟುಮಾಡಬಾರದು’ ಎಂದಿದ್ದಾರೆ.

ಈ ಕಾರಣಗಳಿಂದ, ಕನ್ನಡದಲ್ಲಿ ಕಾನೂನು ಸಾಹಿತ್ಯವನ್ನು ಬೆಳೆಸುವುದು ಅವಶ್ಯವೆಂದು ತೋರುತ್ತದೆ. ಕಾನೂನು ವಿದ್ಯಾರ್ಥಿಗಳಿಗೆ ಬೇಕಾಗುವ ಪಠ್ಯಪುಸ್ತಕಗಳು ಪ್ರಕಟವಾಗುತ್ತಿದ್ದರೂ ನ್ಯಾಯಾಂಗದಲ್ಲಿ ಆಗುತ್ತಿರುವ ಬೆಳವಣಿಗೆ, ಮಹತ್ವದ ತೀರ್ಪುಗಳ ಬಗ್ಗೆ ಚರ್ಚೆ, ವಿಚಾರ ವಿನಿಮಯ ಆಗುತ್ತಿಲ್ಲ. ತೀರ್ಪುಗಳ ವಿಷಯ ಹಾಗಿರಲಿ, ಅದೆಷ್ಟೋ ಕಾನೂನುಗಳು ಕನ್ನಡದಲ್ಲಿ ಲಭ್ಯವಿಲ್ಲ. ಉದಾಹರಣೆಗೆ, ಗ್ರಾಹಕ ಸಂರಕ್ಷಣಾ ಅಧಿನಿಯಮವು ಮೊದಲು 1986ರಲ್ಲಿ ನಂತರ ಹೊಸ ರೂಪದಲ್ಲಿ 2019ರಲ್ಲಿ ಜಾರಿಗೆ ಬಂದಿದೆ. ಆದರೆ ಈ ಕಾಯ್ದೆಯು ಕರ್ನಾಟಕ ರಾಜ್ಯ ಸರ್ಕಾರದ ಅಥವಾ ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಿಲ್ಲ. ಇದು ಒಂದು ಉದಾಹರಣೆ ಮಾತ್ರ.

ಕನ್ನಡ ಸಾಹಿತ್ಯದಲ್ಲಿ ಕಥೆ, ಕಾದಂಬರಿ, ಕಾವ್ಯದಂತಹ ಪ್ರಕಾರಗಳಿಗೆ ಸಿಕ್ಕಿರುವಷ್ಟು ಮನ್ನಣೆಯು ಜ್ಞಾನ ಸಾಹಿತ್ಯಕ್ಕೆ ಸಿಕ್ಕಿಲ್ಲ. ವಿಶೇಷವಾಗಿ ಕನ್ನಡದಲ್ಲಿ ಕಾನೂನು ಸಾಹಿತ್ಯ ಬಹಳಷ್ಟು ಹಿಂದುಳಿದಿದೆ. ಸರ್ಕಾರ ಮತ್ತು ಅನೇಕ ಸ್ವಯಂಸೇವಾ ಸಂಸ್ಥೆಗಳು ಕನ್ನಡ ಸಾಹಿತ್ಯದ ಬೆಳವಣಿಗೆ ಯನ್ನು ಉತ್ತೇಜಿಸಲು ಪ್ರಶಸ್ತಿ, ಪುರಸ್ಕಾರ, ಬಹುಮಾನದಂತಹವನ್ನು ನೀಡುತ್ತಿವೆ. ಪರಿಸರ, ಕೃಷಿಯಂತಹ ವಿಷಯಗಳಿಗೆ ಪ್ರಶಸ್ತಿಗಳಿವೆ. ಆದರೆ ಕನ್ನಡದಲ್ಲಿ ಕಾನೂನು ಸಾಹಿತ್ಯ ರಚಿಸುವವರಿಗೆ ಯಾವುದೇ ಪ್ರೋತ್ಸಾಹವಿಲ್ಲ.

ಕರ್ನಾಟಕ ಕಾನೂನು ವಿಶ್ವವಿದ್ಯಾಲಯ, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಭಾಷಾಂತರ ಇಲಾಖೆ ಹಾಗೂ ಕಾನೂನು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿರುವ ಸ್ವಯಂಸೇವಾ ಸಂಸ್ಥೆಗಳು ಕನ್ನಡ ಕಾನೂನು ಸಾಹಿತ್ಯದ ಬೆಳವಣಿಗೆ ಬಗ್ಗೆ ಆಸಕ್ತಿ ತೋರಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.