ಬುಲ್ಡೋಜರೊಂದು ಮನೆಯತ್ತ ಬರುತ್ತಿದೆ ಎನ್ನುವುದೇ ದಿಗಿಲು ಹುಟ್ಟಿಸುತ್ತದೆ. ವರ್ಷಗಳ ಉಳಿತಾಯದಿಂದ ನಿರ್ಮಿಸಿದ, ಮಕ್ಕಳು ಬೆಳೆದ, ಹಬ್ಬಗಳನ್ನು ಆಚರಿಸಿದ, ನೋವುಗಳನ್ನು ಹಂಚಿಕೊಂಡ ನೆನಪುಗಳನ್ನು ಹೊಂದಿರುವ ಮನೆಯನ್ನು, ಕುಟುಂಬದ ಯಾರೋ ಒಬ್ಬರು ಅಪರಾಧವೊಂದರಲ್ಲಿ ಭಾಗಿಯಾದ ಆರೋಪ ಹೊತ್ತಿದ್ದಾರೆ ಎಂಬ ಕಾರಣಕ್ಕೆ ನೆಲಸಮ ಮಾಡಲು ನಿರ್ಧರಿಸಲಾಗಿದೆ ಎಂಬುದನ್ನು ಊಹಿಸಿಕೊಳ್ಳಿ. 2024ರ ನವೆಂಬರ್ 13ರಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡುವಲ್ಲಿ ವರೆಗೆ ಭಾರತದ ಹಲವು ಕುಟುಂಬಗಳು ಈ ಭೀತಿಯನ್ನು ಎದುರಿಸಿವೆ.

ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಬರೆದ ತೀರ್ಪು ಪ್ರತಿಯೊಬ್ಬರಲ್ಲಿಯೂ ಇರುವ ಮನೆಯೊಂದನ್ನು ಹೊಂದುವ ಕನಸಿನ ಕುರಿತ ಕವಿತೆಯೊಂದರ ಮೂಲಕ ಆರಂಭವಾಗುತ್ತದೆ. ಯಾರು ಅಪರಾಧಿ ಮತ್ತು ಯಾವ ಶಿಕ್ಷೆ ವಿಧಿಸಬೇಕು ಎಂಬುದನ್ನು ನ್ಯಾಯಾಲಯಗಳು ಮಾತ್ರ ತೀರ್ಮಾನಿಸಲು ಸಾಧ್ಯ ಎಂಬ ಮೂಲಭೂತ ತತ್ವವನ್ನೇ ಉಲ್ಲಂಘಿಸಿ, ದಿಢೀರ್ ಶಿಕ್ಷೆಯ ಅಸ್ತ್ರವಾಗಿ ಬುಲ್ಡೋಜರ್ಗಳನ್ನು ಸರ್ಕಾರಗಳು ಬಳಸಲು ಆರಂಭಿಸಿದ ಬಳಿಕ ಹಲವು ಕುಟುಂಬಗಳಿಗೆ ಮನೆಯ ಕನಸು ದುಃಸ್ವಪ್ನದಂತೆ ಕಾಡಿದೆ.

ನಮ್ಮ ಪ್ರಜಾಪ್ರಭುತ್ವದ ಮೂಲಭೂತ ತತ್ವವೊಂದನ್ನು ನ್ಯಾಯಾಲಯವು ಎತ್ತಿ ತೋರಿಸಿದೆ: ವ್ಯಕ್ತಿಯು ಎಸಗಿದ ಅಪರಾಧಕ್ಕೆ ಮಾತ್ರ ಶಿಕ್ಷೆ ವಿಧಿಸಬಹುದು ಮತ್ತು ಹಾಗೆ ಶಿಕ್ಷೆ ವಿಧಿಸಲು ನ್ಯಾಯಾಲಯಕ್ಕೆ ಮಾತ್ರ ಅವಕಾಶ ಇದೆ, ಕಾರ್ಯಾಂಗಕ್ಕೆ ಇಲ್ಲ. ಪ್ರಸ್ತುತ, ಈ ದೇಶದಲ್ಲಿ ಯಾವುದೇ ಅಪರಾಧ ಕೃತ್ಯದ ಆರೋಪಿಗೂ ಆತ ವಾಸಿಸುವ ಮನೆಯನ್ನು ಅಧಿಕಾರಿಗಳು ಕೆಡವಬಹುದು ಎಂಬ ಶಿಕ್ಷೆ ಇಲ್ಲ. ಹಾಗಾಗಿ, ಕೆಲವು ಅಪರಾಧ ಕೃತ್ಯಗಳ ಆರೋಪ ಹೊತ್ತ ಹಲವು ಆರೋಪಿಗಳ ಮನೆಗಳನ್ನು ವಿವಿಧ ರಾಜ್ಯಗಳಲ್ಲಿ ಧ್ವಂಸ ಮಾಡಿರುವುದು ಕಾನೂನುಬಾಹಿರ; ನ್ಯಾಯಾಲಯದಲ್ಲಿ ಅಪರಾಧವು ಸಾಬೀತಾಗುವ ಮುನ್ನವೇ ಈ ಶಿಕ್ಷೆಯನ್ನು ವಿಧಿಸಲಾಗಿದೆ. ಒಂದು ವೇಳೆ ಅಪರಾಧವು ಸಾಬೀತಾಗಿ, ಮೇಲ್ಮನವಿಯೂ ತಳ್ಳಿ ಹೋದರೂ ಅವರು ಎಸಗಿದ್ದ ಶಿಕ್ಷೆಗೆ ಕೆಲವು ವರ್ಷಗಳ ಸಜೆ ಮತ್ತು ದಂಡದ ಶಿಕ್ಷೆ ಮಾತ್ರ ಇತ್ತು. ಅದಕ್ಕಿಂತ ಹೆಚ್ಚು ಏನೂ ಇರಲಿಲ್ಲ.

ಹಾಗಿದ್ದರೆ, ಮನೆಯೊಂದನ್ನು ಅಕ್ರಮವಾಗಿ ನಿರ್ಮಿಸಿ, ಕೆಡವುವಿಕೆಯಿಂದ ಅದನ್ನು ರಕ್ಷಿಸಿಕೊಳ್ಳಬಹುದು ಎಂಬುದು ತೀರ್ಪಿನ ಅರ್ಥವೇ? ಇಲ್ಲ. ಮನೆಯನ್ನು ಅಕ್ರಮವಾಗಿ ನಿರ್ಮಿಸಿದ್ದರೆ, ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಂಡು, ಮನೆ ನಿರ್ಮಿಸಿದ ವ್ಯಕ್ತಿಯ ವಾದವೇನು ಎಂಬುದನ್ನು ಆಲಿಸಿ, ಮೇಲ್ಮನವಿಗೆ ಬೇಕಾದಷ್ಟು ಸಮಯ ನೀಡಿ, ಮೇಲ್ಮನವಿಯೂ ವಜಾಗೊಂಡರೆ, ಅವರು ಬೇರೊಂದು ಮನೆಗೆ ಸ್ಥಳಾಂತರಗೊಳ್ಳಲು ಸಮಯ ನೀಡಿ ಮನೆಯನ್ನು ಧ್ವಂಸ ಮಾಡಬಹುದು. ಸುಪ್ರೀಂ ಕೋರ್ಟ್ನ ಮುಂದೆ ಇದ್ದದ್ದು ರಾತ್ರೋರಾತ್ರಿ ಕಟ್ಟಡಗಳನ್ನು ಧ್ವಂಸಗೊಳಿಸಿದ್ದ ಪ್ರಕರಣಗಳು.

ಕಳವಳದ ವಿಚಾರ ಹೀಗಿದೆ: ಸುಪ್ರೀಂ ಕೋರ್ಟ್ ಕ್ರಮ ಕೈಗೊಳ್ಳಲು ಇಷ್ಟೊಂದು ದೀರ್ಘ ಸಮಯವನ್ನು ತೆಗೆದುಕೊಂಡದ್ದು ಏಕೆ? ಶಿಕ್ಷೆಯ ಭಾಗವಾಗಿ ಬುಲ್ಡೋಜರ್ ಬಳಕೆಯ ಮಾದರಿಯು ಕೆಲವು ವರ್ಷಗಳ ಹಿಂದೆಯೇ ಬಹಿರಂಗವಾಗಿತ್ತು. ಇನ್ನೂ ಹೆಚ್ಚು ಕಳವಳಕಾರಿ ಎಂದರೆ, ಇಂತಹ ಕೃತ್ಯಗಳು ನಡೆದ ರಾಜ್ಯಗಳ ಹೈಕೋರ್ಟ್ಗಳ ಮೌನ. ಕೆಲಸದಿಂದ ವಜಾಗೊಳಿಸುವುದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಿಗೆ ಇರುವ ರಕ್ಷಣೆಯನ್ನೇ ಹೈಕೋರ್ಟ್ನ ನ್ಯಾಯಮೂರ್ತಿಗಳಿಗೂ ನಮ್ಮ ಸಂವಿಧಾನವು ನೀಡಿದೆ. ಹಾಗಾಗಿ, ಅವರು ಯಾವುದೇ ಭಯಕ್ಕೆ ಒಳಗಾಗದೆ ನಾಗರಿಕರ ಹಕ್ಕುಗಳನ್ನು ರಕ್ಷಿಸಬಹುದು. ಹಾಗಿದ್ದರೂ ನಾಗರಿಕರಿಗೆ ನೆರವು ಅಗತ್ಯವಾಗಿ ಬೇಕಿದ್ದಾಗ ಸಂಬಂಧಪಟ್ಟ ಹೈಕೋರ್ಟ್ಗಳು ಮನೆಗಳು ಕುಸಿದು ಬೀಳುತ್ತಿರುವುದನ್ನು ಮೌನವಾಗಿ ನೋಡುತ್ತಾ ನಿಂತವು.

‘ಅಕ್ರಮವಾಗಿ ನಿರ್ಮಾಣವಾದ ಕಟ್ಟಡಗಳು’ ಎಂಬ ಕಾರಣಕ್ಕೆ ಧ್ವಂಸ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ನಿರ್ದಿಷ್ಟ ಮನೆಗಳನ್ನು ಮಾತ್ರ ಧ್ವಂಸ ಮಾಡಿ, ಸಮೀಪದಲ್ಲಿಯೇ ಇರುವ ಇದೇ ರೀತಿಯಲ್ಲಿ ನಿರ್ಮಾಣವಾದ ಕಟ್ಟಡಗಳನ್ನು ಮುಟ್ಟದೇ ಇರುವಾಗ ಅಕ್ರಮ ಕಟ್ಟಡ ಎಂಬ ನೆಪವು ಸಂದೇಹ ಮೂಡಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತೀರ್ಪಿನಲ್ಲಿ ಹೀಗೆ ಹೇಳಲಾಗಿದೆ: ‘ಕೆಡವಲು ಕಟ್ಟಡವನ್ನು ದಿಢೀರ್ ಗುರುತಿಸಿ, ಅದೇ ರೀತಿಯಲ್ಲಿ ಮತ್ತು ಅದೇ ಪ್ರದೇಶದಲ್ಲಿ ನಿರ್ಮಾಣವಾದ ಇತರ ಕಟ್ಟಡಗಳನ್ನು ಮುಟ್ಟದೇ ಇರುವಾಗ ಇದು ದುರುದ್ದೇಶಪೂರಿತ ಎಂಬುದು ಎದ್ದು ಕಾಣುತ್ತದೆ’.

ನ್ಯಾಯಾಲಯವು ರೂಪಿಸಿರುವ ಹೊಸ ಮಾರ್ಗಸೂಚಿ ಸಮಗ್ರವಾಗಿದೆ. ನೋಟಿಸ್ ನೀಡದೆ ಯಾವುದನ್ನೂ ಕೆಡವುವಂತಿಲ್ಲ. ನೋಟಿಸ್ ನೀಡಿದ ಬಳಿಕ 15 ದಿನಗಳ ಗಡುವು ಇರಬೇಕು. ವ್ಯಕ್ತಿಯು ತಮ್ಮ ವಾದ ಮಂಡಿಸಲು ಅವಕಾಶ ಕೊಡುವುದು ಕಡ್ಡಾಯ. ಧ್ವಂಸಗೊಳಿಸುವ ಆದೇಶ ನೀಡಲು ವಿವರವಾದ ಕಾರಣಗಳು ಇರಬೇಕು. ಧ್ವಂಸಗೊಳಿಸುವ ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಅಕ್ರಮ ಕಟ್ಟಡಗಳ ಕೆಡವುವಿಕೆಗೆ ಅಧಿಕಾರಿಗಳೇ ವೈಯಕ್ತಿಕವಾಗಿ ಹೊಣೆಗಾರರು– ಕಟ್ಟಡ ಕೆಡವಿದ್ದು ಸರಿಯಲ್ಲ ಎಂದು ಸಾಬೀತಾದರೆ, ಮರುನಿರ್ಮಾಣದ ವೆಚ್ಚವನ್ನು ಅಧಿಕಾರಿಗಳು ತಮ್ಮ ಜೇಬಿನಿಂದಲೇ ಭರಿಸಬೇಕು.

ಆದರೆ, ಇನ್ನೂ ಪ್ರಶ್ನೆಗಳು ಇವೆ. ಪೊಲೀಸರು ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ‘ಅಕ್ರಮ’ ಕಟ್ಟಡಗಳನ್ನು ಹೇಗೆ ಗುರುತಿಸಬೇಕು ಎಂಬುದಕ್ಕೆ ತೀರ್ಪಿನಲ್ಲಿ ಸಮರ್ಪಕ ವಿವರಗಳು ಇಲ್ಲ. ಯಾವ ಮಾನದಂಡಗಳನ್ನು ಅವರು ಅನುಸರಿಸಬೇಕು? ನಿರ್ದಿಷ್ಟ ಮನೆಗಳನ್ನು ಅವರು ಹೇಗೆ ಗುರುತಿಸಬೇಕು? ಈ ವಿಚಾರಗಳ ಕುರಿತು ಇನ್ನೂ ಆಳವಾದ ಪರಿಶೀಲನೆ ಅಗತ್ಯ ಇದೆ.

ಮನೆಗಳನ್ನು ಬುಲ್ಡೋಜರ್ನಿಂದಾಗಿ ಈಗಾಗಲೇ ಕಳೆದುಕೊಂಡವರಿಗೆ ಈ ತೀರ್ಪು ತೀರಾ ವಿಳಂಬವಾಯಿತು. ಆದರೆ, ಭವಿಷ್ಯದಲ್ಲಿ, ನಿರ್ಣಾಯಕವಾದ ರಕ್ಷಣೆಯನ್ನು ತೀರ್ಪು ನೀಡಿದೆ. ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ವಸತಿಯು ಮೂಲಭೂತ ಹಕ್ಕು ಎಂದು ಹೇಳಿದೆ ಎಂಬುದನ್ನು ಕೋರ್ಟ್ ಪುನರುಚ್ಚರಿಸಿದೆ. ಮನೆ ಎಂದರೆ ಅದೊಂದು ಕಟ್ಟಡ ಮಾತ್ರವಲ್ಲ– ಅದು ವರ್ಷಗಳ ಉಳಿತಾಯ, ಕನಸುಗಳು ಮತ್ತು ಆಕಾಂಕ್ಷೆಗಳ ಪ್ರತೀಕವಾಗಿದೆ. ‘ಮನೆಯೊಂದನ್ನು ಹೊಂದಿರುವುದು ಅಥವಾ ತಲೆಯ ಮೇಲೆ ಸೂರು ಇರುವುದು ಯಾವುದೇ ವ್ಯಕ್ತಿಗೆ ನೆಮ್ಮದಿಯನ್ನು ನೀಡುತ್ತದೆ. ಇದು ಘನತೆಯ ಭಾವದ ಜೊತೆಗೆ ತಾನು ಇಲ್ಲಿಗೆ ಸೇರಿದವನು ಎಂಬ ಭಾವವನ್ನೂ ಉಂಟು ಮಾಡುತ್ತದೆ’ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ನ್ಯಾಯಾಲಯವು ನೀಡಿದ ಸಂದೇಶವು ಸ್ಪಷ್ಟವಾಗಿದೆ: ನಮ್ಮದು ಸಾಂವಿಧಾನಿಕ ಪ್ರಜಾಪ್ರಭುತ್ವ. ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಕೂಡ ಕಾನೂನಿನ ಮುಂದೆ ತಲೆ ಬಾಗಲೇಬೇಕು. ಎಷ್ಟೇ ಉನ್ನತ ಅಧಿಕಾರಿಯೇ ಆಗಿರಲಿ ಅವರು ನ್ಯಾಯತೀರ್ಮಾನಕಾರ, ನ್ಯಾಯಾಧೀಶ ಮತ್ತು ತೀರ್ಪು ಜಾರಿ ಮಾಡುವವನು ಆಗಲು ಸಾಧ್ಯವೇ ಇಲ್ಲ. ಲಾರ್ಡ್ ಡೆನಿಂಗ್ಸ್ ಅವರ ಪ್ರಸಿದ್ಧ ಮಾತುಗಳನ್ನು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ: ‘ಅತ್ಯಂತ ಕಡುಬಡವ ತನ್ನ ಗುಡಿಸಲಿನಲ್ಲಿ ಕುಳಿತು ಅರಸನ ಇಡೀ ಸೈನ್ಯಕ್ಕೆ ಸವಾಲು ಒಡ್ಡಬಹುದು’.

ನ್ಯಾಯದಾನ ಬಹಳ ವಿಳಂಬವಾಯಿತು ಎಂದು ಮನೆಯನ್ನು ಕಳೆದುಕೊಂಡವರಿಗೆ ಅನಿಸಬಹುದು. ತಮ್ಮದೇ ಆದ ಮನೆಯನ್ನು ಹೊಂದುವ ಕನಸಿಗೆ ಸಂವಿಧಾನ ಮತ್ತು ನ್ಯಾಯಾಲಯಗಳ ರಕ್ಷಣೆ ಇದೆ ಎಂದು ಇತರ ಲಕ್ಷಾಂತರ ಜನರಿಗೆ ಈ ತೀರ್ಪು ಖಾತರಿ ಕೊಟ್ಟಿದೆ. ದಿಢೀರ್ ನ್ಯಾಯದ ಅಸ್ತ್ರವಾಗಿ ಬುಲ್ಡೋಜರ್ ಇನ್ನು ಮುಂದೆ ಬಳಕೆಯಾಗದು. ಕೊನೆಯದಾಗಿ, ಭೀತಿ ಹುಟ್ಟಿಸುವ ಆಳ್ವಿಕೆಯಲ್ಲ, ಕಾನೂನಿನ ಆಳ್ವಿಕೆ ಉಳಿಯಬೇಕು ಎಂಬುದನ್ನು ಸುಪ್ರೀಂ ಕೋರ್ಟ್ ನಮಗೆ ನೆನಪಿಸಿಕೊಟ್ಟಿದೆ.

ಲೇಖಕ: ಸುಪ್ರೀಂ ಕೋರ್ಟ್ನಲ್ಲಿ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.