ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಭಾರತೀಯರ ಆಹಾರ ಕ್ರಮ ಹೇಗಿರಬೇಕು ಎಂಬುದರ ಬಗ್ಗೆ ಶಿಫಾರಸುಗಳನ್ನು ಪ್ರಕಟಿಸಿದೆ. ನಮ್ಮ ಆಹಾರ ಪದ್ಧತಿಯಲ್ಲಿ ಇರುವ ಕೊರತೆ ಮತ್ತು ಅದನ್ನು ನಿವಾರಿಸಬೇಕಾದ ಅಗತ್ಯವನ್ನು ಇದು ಎತ್ತಿ ತೋರಿಸಿದೆ. ನಮ್ಮ ಆಹಾರ ಪದ್ಧತಿಯಲ್ಲಿ ಕೊರತೆಗಳು ಇವೆ ಎಂಬುದಷ್ಟೇ ಅಲ್ಲ, ಹಲವು ಅಭ್ಯಾಸಗಳು ಕೆಟ್ಟದಾಗಿವೆ ಮತ್ತು ಅನಾರೋಗ್ಯಕಾರಿ
ಯಾಗಿವೆ. ನಮ್ಮ ದೇಶದ ಜನರಲ್ಲಿ ಕಂಡುಬರುವ ಶೇ 56.40ರಷ್ಟು ರೋಗಗಳಿಗೆ ಅನಾರೋಗ್ಯಕರ ಮತ್ತು ಕೆಟ್ಟ ಆಹಾರ ಪದ್ಧತಿಯೇ ಕಾರಣ ಎಂದು ಐಸಿಎಂಆರ್ ಹೇಳಿದೆ. ಸರಿಯಾದ ಆಹಾರವನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳುವುದು ಎಷ್ಟು ಮುಖ್ಯ ಎಂಬುದರತ್ತ ಐಸಿಎಂಆರ್ ಶಿಫಾರಸು ಬೆಳಕು ಚೆಲ್ಲಿದೆ. ನಮ್ಮ ದೇಹಕ್ಕೆ ಸಮತೋಲಿತ ಆಹಾರದ ಅಗತ್ಯ ಇದೆ. ಆದರೆ, ಹೆಚ್ಚಿನ ದಿನಗಳಲ್ಲಿ ನಾವು ತೆಗೆದುಕೊಳ್ಳುವ ಆಹಾರ ಸಮತೋಲನದಿಂದ ಕೂಡಿರುವುದಿಲ್ಲ. ನಾವು ತೆಗೆದುಕೊಳ್ಳುವ ಸಮತೋಲಿತ ಆಹಾರದಲ್ಲಿ ಏಕದಳ ಮತ್ತು ದ್ವಿದಳ ಧಾನ್ಯದಿಂದ ಪಡೆಯುವ ಕ್ಯಾಲೊರಿ ಶೇ 45ಕ್ಕಿಂತ ಹೆಚ್ಚು ಇರಬಾರದು. ಬೀನ್ಸ್ ಅಥವಾ ಮಾಂಸ ಇಲ್ಲವೇ ಈ ಎರಡನ್ನೂ ಸೇವಿಸಿದಾಗಿನ ಕ್ಯಾಲೊರಿ ಪ್ರಮಾಣವು ಶೇ 15ರಷ್ಟು ಇರಬೇಕು. ಉಳಿದ ಭಾಗವು ಒಣಹಣ್ಣು– ಬೀಜಗಳು, ತರಕಾರಿಗಳು, ಹಣ್ಣುಗಳು ಮತ್ತು ಹಾಲಿನಿಂದ ಕೂಡಿರಬೇಕು. ಉಪ್ಪು, ಸಕ್ಕರೆ ಮತ್ತು ಅಡುಗೆ ಎಣ್ಣೆಯನ್ನು ಕನಿಷ್ಠ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು.

ಆಹಾರ ಕ್ರಮಕ್ಕೆ ಸಂಬಂಧಿಸಿ 17 ಮಾರ್ಗಸೂಚಿಗಳನ್ನು ಐಸಿಎಂಆರ್ ನೀಡಿದೆ. ಅಗತ್ಯವಾಗಿ ಬೇಕಾದ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳಲು ಮತ್ತು ಜೀವನಕ್ರಮದಲ್ಲಿನ ಅಸಮರ್ಪಕತೆಯಿಂದ ಬರುವ ಬೊಜ್ಜು ಮತ್ತು ಮಧುಮೇಹದಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಈ ಮಾರ್ಗಸೂಚಿಗಳು ನೆರವಾಗಲಿವೆ. ಆರೋಗ್ಯಕರ ಆಹಾರ ಪದ್ಧತಿ ಮತ್ತು ಅಗತ್ಯ ಪ್ರಮಾಣದ ದೈಹಿಕ ಚಟುವಟಿಕೆಯು ‘ಟೈಪ್–2’ ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳನ್ನು ತಡೆಗಟ್ಟಲು ನೆರವಾಗುತ್ತವೆ. ಈಗ ನಾವು ತೆಗೆದುಕೊಳ್ಳುವ ಆಹಾರದಲ್ಲಿ ಶರ್ಕರಪಿಷ್ಟವೇ ಹೆಚ್ಚಿನ ಪ್ರಮಾಣದಲ್ಲಿ ಇದೆ. ಜೊತೆಗೆ, ಕುರುಕಲು ಮತ್ತು ಕೊಬ್ಬಿನ ಅಂಶ ಹೆಚ್ಚು ಇರುವ ಆಹಾರವನ್ನು ತಿನ್ನುತ್ತೇವೆ. ಅತಿಯಾಗಿ ಸಂಸ್ಕರಿಸಿದ ಆಹಾರವನ್ನೂ ಹೆಚ್ಚಾಗಿ ತೆಗೆದುಕೊಳ್ಳುತ್ತೇವೆ. ನಾವು ತಿನ್ನುವ ಹೆಚ್ಚಿನ ಆಹಾರಗಳಲ್ಲಿ ಎಣ್ಣೆ ಮತ್ತು ಕೊಬ್ಬಿನ ಅಂಶ ಹೆಚ್ಚು ಇರುತ್ತವೆ. ಅನಪೇಕ್ಷಿತ ಅಂಶಗಳನ್ನು ಒಳಗೊಂಡಿರುವ ಹೊಸ ರೀತಿಯ ಆಹಾರ ಕ್ರಮ ಮತ್ತು ಆಹಾರ ಪದ್ಧತಿಯ ಕುರಿತು ಜನರಲ್ಲಿ ಇತ್ತೀಚೆಗೆ ಹೆಚ್ಚಿನ ಆಸಕ್ತಿ ಕಾಣಿಸಿಕೊಳ್ಳುತ್ತಿದೆ. ಜಾಹೀರಾತು ಉದ್ಯಮ ಮತ್ತು ಇತರ ಉತ್ತೇಜನಗಳು ಜನರು ಈ ರೀತಿಯ ಆಹಾರ ಕ್ರಮವನ್ನು ರೂಢಿಸಿಕೊಳ್ಳಲು ಒತ್ತು ನೀಡುತ್ತಿವೆ. ಹೀಗೆ, ಕೆಟ್ಟ ಆಹಾರವೇ ಸಾಮಾನ್ಯ ಆಹಾರ ಪದ್ಧತಿ, ಸಹಜ ಆಹಾರ ಪದ್ಧತಿ ಮತ್ತು ಶ್ರೇಷ್ಠ ಆಹಾರ ಪದ್ಧತಿ ಎಂಬಂತಾಗಿದೆ. ಕೆಟ್ಟ ಮತ್ತು ಅನಾರೋಗ್ಯಕರ ಆಹಾರವನ್ನು ತಿನ್ನುವುದರಿಂದ ಆಗುವ ಪ್ರತಿಕೂಲ ಪರಿಣಾಮಗಳನ್ನು ನಾವೇ ಅನುಭವಿಸಬೇಕಾಗುತ್ತದೆ. ಹಾಗಾಗಿ, ಇಂತಹ ಕೆಟ್ಟ ಆಹಾರ ಕ್ರಮದಿಂದ ಬಿಡಿಸಿಕೊಳ್ಳುವ ಅಗತ್ಯ ಇದೆ.

ಸಾಂಪ್ರದಾಯಿಕವಾದ, ಪೌಷ್ಟಿಕಾಂಶಗಳಿಂದ ಕೂಡಿದ ಆಹಾರ ಕ್ರಮಕ್ಕೆ ಐಸಿಎಂಆರ್ ಮಾರ್ಗಸೂಚಿಯಲ್ಲಿ ಮಹತ್ವ ನೀಡಲಾಗಿದೆ. ಫಾಸ್ಟ್ಫುಡ್ ಮತ್ತು ಸಿದ್ಧ ಆಹಾರವು ಸಮತೋಲಿತ ಆಹಾರ ಅಲ್ಲ. ಅಡುಗೆ ಮಾಡಿಕೊಳ್ಳಲು ಹೆಚ್ಚು ಸಮಯ ವ್ಯಯ ಮಾಡಬೇಕಾಗುತ್ತದೆ ಎಂಬುದು ಕುಟುಂಬಗಳನ್ನು ಸಾಂಪ್ರದಾಯಿಕ ಆಹಾರ ಕ್ರಮದಿಂದ ದೂರ ಇರಿಸಿದೆ. ರುಚಿಯ ಬೆನ್ನು ಹತ್ತಿರುವುದು ಕೂಡ ಆಹಾರ ಕ್ರಮವು ಬದಲಾಗಲು ಕಾರಣವಾಗಿದೆ. ಆರೋಗ್ಯಕರ ಮತ್ತು ಪೌಷ್ಟಿಕಾಂಶಗಳಿಂದ ಕೂಡಿದ ಆಹಾರ ಪದ್ಧತಿಯನ್ನು ಜನರು ಅನುಸರಿಸುವಂತೆ ಮಾಡಲು ಸತತ ಪ್ರಯತ್ನದ ಅಗತ್ಯ ಇದೆ. ಆರೋಗ್ಯಕರ ಆಹಾರದ ಕುರಿತು ಜಾಗೃತಿ ಮೂಡಿಸುವ ಕೆಲಸವು ಪ್ರಾಥಮಿಕ ಶಾಲೆಯಿಂದಲೇ ಶುರುವಾಗಬೇಕು. ಆಹಾರ ಉತ್ಪನ್ನಗಳ ತಯಾರಿಕೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಪ್ರಚಾರ ಹೇಗಿರಬೇಕು ಎಂಬುದರ ಕುರಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ದೈಹಿಕ ಚಟುವಟಿಕೆಗಳಿಗೆ ಬೇಕಾದ
ಮೂಲಸೌಕರ್ಯಗಳು ಸಾರ್ವಜನಿಕವಾಗಿ ಮತ್ತು ಅಗತ್ಯಕ್ಕೆ ಬೇಕಾದಷ್ಟು ಪ್ರಮಾಣದಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳಬೇಕು. ನಮ್ಮ ಆಹಾರವನ್ನು ಆರೋಗ್ಯಕರಗೊಳಿಸುವಲ್ಲಿ ನೀತಿನಿರೂಪಕರು, ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಇರುವವರು, ಶಿಕ್ಷಕರು ಈ ಎಲ್ಲರ ಪಾತ್ರವೂ ಇದೆ. ಉತ್ತಮ ಆಹಾರವನ್ನು
ಜನಪ್ರಿಯಗೊಳಿಸುವುದು ನಮ್ಮೆಲ್ಲರ ಮೇಲೆಯೂ ಇರುವ ಹೊಣೆಗಾರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.